ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಕತ್ತಲಲ್ಲಿ: ವಿದ್ಯುತ್ ಕಡಿತಕ್ಕೆ ಕಾಂಗ್ರೆಸ್ ಟೀಕೆ

ಬೆಂಗಳೂರು: ಪಾಲಿಕೆ, ಬಿಡಿಎ ವಿದ್ಯುತ್ ಬಿಲ್ ಬಾಕಿ ಪಾವತಿಸದ ಪರಿಣಾಮ ಬೆಸ್ಕಾಂ ವಿದ್ಯುತ್ ಕಡಿತಗೊಳಿಸಿದ್ದು, ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಕತ್ತಲಲ್ಲಿ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ಟ್ವೀಟ್
ಇಲಾಖೆಗಳ ನಡುವೆ ಸಚಿವರ ನಡುವೆ ಇದ್ದ ಸಮನ್ವಯತೆ, ಸಾಮರಸ್ಯದ ಕೊರತೆ ಇತ್ತು, ಇದೀಗ ಸರ್ಕಾರಿ ಸಂಸ್ಥೆಗಳೂ ಸೇರಿಕೊಂಡಿವೆ. ಪಾಲಿಕೆ, ಬಿಡಿಎ ವಿದ್ಯುತ್ ಬಿಲ್ ಬಾಕಿ ಪಾವತಿಸದ ಪರಿಣಾಮ ಬೆಸ್ಕಾಂ ವಿದ್ಯುತ್ ಕಡಿತಗೊಳಿಸಿದೆ. ಈ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ ಎನ್ನಲು ಇದೊಂದು ಉತ್ತಮ ನಿದರ್ಶನ! ಎಂದು ಬಿಜೆಪಿ ಆಡಳಿತವನ್ನು ಕಾಂಗ್ರೆಸ್ ಟೀಕಿಸಿದೆ.
0 التعليقات: