Thursday, 18 November 2021

ಚೊಚ್ಚಲ ಕಾದಂಬರಿ 'ಲಾಲ್ ಸಲಾಂ' ಮೂಲಕ ಲೇಖಕಿಯಾದ ಬಿಜೆಪಿ ನಾಯಕಿ ಸ್ಮೃತಿ ಇರಾನಿ


ಚೊಚ್ಚಲ ಕಾದಂಬರಿ 'ಲಾಲ್ ಸಲಾಂ' ಮೂಲಕ ಲೇಖಕಿಯಾದ ಬಿಜೆಪಿ ನಾಯಕಿ ಸ್ಮೃತಿ ಇರಾನಿ

ಹೊಸದಿಲ್ಲಿ: ಕೇಂದ್ರ ಸಚಿವೆ ಸ್ಮೃತಿ ಝುಬಿನ್ ಇರಾನಿ ಅವರು ತಮ್ಮ ಚೊಚ್ಚಲ ಕಾದಂಬರಿ "ಲಾಲ್ ಸಲಾಂ " ಮೂಲಕ ಲೇಖಕಿಯಾಗಿದ್ದಾರೆ ಎಂದು ವೆಸ್ಟ್‌ ಲ್ಯಾಂಡ್ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.

ಈ ಕಾದಂಬರಿಯು ಎಪ್ರಿಲ್ 2010 ರಲ್ಲಿ ಛತ್ತೀಸ್‌ಗಢದ ದಾಂತೇವಾಡದಲ್ಲಿ 76 ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್)ಯೋಧರ ದುರಂತ ಹತ್ಯೆಯಿಂದ ಸ್ಫೂರ್ತಿ ಪಡೆದಿದೆ. ಇದು ನವೆಂಬರ್ 29 ರಂದು ಬಿಡುಗಡೆಯಾಗಲಿದೆ.

ಕಥೆಯು ಕೆಲವು ವರ್ಷಗಳಿಂದ ನನ್ನ ಮನಸ್ಸಿನ ಹಿಂಭಾಗದಲ್ಲಿ ಹುದುಗಿತ್ತು. ಅದನ್ನು ಕಾಗದದ ಮೇಲೆ ಹಾಕುವ ಪ್ರಚೋದನೆಯನ್ನು ನಾನು ನಿರ್ಲಕ್ಷಿಸಲಾಗಲಿಲ್ಲ. ಓದುಗರು ವೇಗ  ಹಾಗೂ  ಒಳನೋಟಗಳನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ನಟಿ ತಮ್ಮ ಮುಂಬರುವ ಪುಸ್ತಕದ ಬಗ್ಗೆ  ಹೇಳಿದ್ದಾರೆ.

ಲಾಲ್ ಸಲಾಂ ಯುವ ಅಧಿಕಾರಿ ವಿಕ್ರಮ್ ಪ್ರತಾಪ್ ಸಿಂಗ್  ಹಾಗೂ ಅವರು  ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯವಸ್ಥೆಯ ವಿರುದ್ಧ ಎದುರಿಸಿರುವ ಸವಾಲುಗಳ ಕಥೆಯಾಗಿದೆ. 


SHARE THIS

Author:

0 التعليقات: