Monday, 15 November 2021

ಮುಹಿಮ್ಮಾತಿನಲ್ಲಿ ಆಲಂಪಾಡಿ ಉಸ್ತಾದ್ ಸ್ಮಾರಕ ಕುತುಬ್ ಖಾನ, ಪೇರೋಡ್ ಉಸ್ತಾದ್ ಉದ್ಘಾಟಿಸಿದರು


 ಮುಹಿಮ್ಮಾತಿನಲ್ಲಿ ಆಲಂಪಾಡಿ ಉಸ್ತಾದ್ ಸ್ಮಾರಕ ಕುತುಬ್ ಖಾನ, ಪೇರೋಡ್ ಉಸ್ತಾದ್ ಉದ್ಘಾಟಿಸಿದರು 

ಕಾಸರಗೋಡು: ಪ್ರಮುಖ ಆಧ್ಯಾತ್ಮಿಕ ವಿದ್ವಾಂಸ ಆಲಂಪಾಡಿ ಉಸ್ತಾದ್ ಅವರ ಹೆಸರಿನಲ್ಲಿ ಕುಂಬಳೆ ಸಮೀಪದ ಪುತ್ತಿಗೆ ಮುಹಿಮ್ಮಾತ್ ನಲ್ಲಿ ಕುತುಬ್ ಖಾನ ತೆರೆಯಲಾಯಿತು. ವಿವಿಧ ಇಸ್ಲಾಮಿಕ ಜ್ಞಾನ ಶಾಖೆಗಳಲ್ಲಿ ಕಲಿಕೆಗೆ ಮತ್ತು ಸಂಶೋಧನೆಗಾಗಿ ಅವಕಾಶ ನೀಡುತ್ತಾ ಸಾವಿರಾರು ಗ್ರಂಥಗಳು ಆಲಂಪಾಡಿ ಉಸ್ತಾದ್ ಸ್ಮಾರಕ ಕುತುಬ್ ಖಾನದಲ್ಲಿ ಶೇಕರಿಸಲಾಗಿದೆ.

ಕೇರಳ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಆಗಿರುವ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉದ್ಘಾಟಿಸಿದರು. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್  ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಅಬ್ದುಲ್ ಅಝೀಝ್ ತಂಙಳ್, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಹಾಜಿ ಅಮೀರಲಿ ಚೂರಿ, ವೈ.ಎಂ ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಕೆ.ಪಿ ಅಬ್ದುರ್ರಹ್ಮಾನ್ ಸಖಾಫಿ ಪಝಯ ಕಡಪ್ಪುರಂ, ಅಬೂಬಕರ್ ಕಾಮಿಲ್ ಸಖಾಫಿ ಮುಂತಾದವರು ಭಾಗವಹಿಸಿದರು.


SHARE THIS

Author:

0 التعليقات: