ಪುತ್ತೂರು; ಮಹಿಳೆಗೆ ಗುಂಡು ಹಾರಿಸಿದ ಪ್ರಕರಣ : ಆರೋಪಿಗೆ ನ್ಯಾಯಾಂಗ ಬಂಧನ
ಪುತ್ತೂರು: ತಾಲ್ಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಕೊಯಕುಡೆ ಎಂಬಲ್ಲಿ ಜಮೀನು ತಕರಾರಿನ ವಿಚಾರದಲ್ಲಿ ಬಂದೂಕಿನಿಂದ ಮಹಿಳೆಯೋರ್ವರಿಗೆ ಗುರಿಯಿಟ್ಟು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದೇವಪ್ಪ ಗೌಡ ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದೇವಪ್ಪ ಗೌಡ ಜ.21ರಂದು ಜಮೀನು ಸ್ವಾಧೀನತೆಯ ತಕಾರಿನ ದ್ವೇಷದಿಂದ ಬಂದೂಕಿನಿಂದ ತನ್ನ ಸಹೋದರ ಬಾಬು ಗೌಡ ಅವರ ಪತ್ನಿ ಧರ್ನಮ್ಮ ಎಂಬವರಿಗೆ ಗುರಿಯಿಟ್ಟು ಗುಂಡು ಹಾರಿಸಿದ್ದನು. ಈ ವೇಳೆ ಧರ್ನಮ್ಮ ತಪ್ಪಿಸಿಕೊಂಡ ಪರಿಣಾಮ ಗುಂಡು ಅವರ ಪಕ್ಕಂದಿ ಹಾರಿ ಹೋಗಿತ್ತು. ಈ ಘಟನೆಯ ಕುರಿತು ಧರ್ನಮ್ಮ ಅವರು ನೀಡಿದ ದೂರಿನಂತೆ ಆರೋಪಿ ದೇವಪ್ಪ ಗೌಡನ ವಿರುದ್ಧ ಠಾಣಾ ಅ.ಕ್ರ: 97/2021` ಕಲಂ: 506, 307 ಐಪಿಸಿ ಮತ್ತು 25, 27 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.
ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
0 التعليقات: