Friday, 26 November 2021

ಧಾರವಾಡ ಸೇರಿ ರಾಜ್ಯದಲ್ಲಿಂದು ಕೊರೋನಾ ದಿಢೀರ್ ಹೆಚ್ಚಳ

ಧಾರವಾಡ ಸೇರಿ ರಾಜ್ಯದಲ್ಲಿಂದು ಕೊರೋನಾ ದಿಢೀರ್ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 402 ಜನರಿಗೆ ಕೊರೊನಾ ಸೋಂಕು ತಗುಲಿದೆ. 6 ಜನ ಸೋಂಕಿತರು ಮೃತಪಟ್ಟಿದ್ದಾರೆ. 277 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 29,94,963 ಕ್ಕೆ ಏರಿಕೆಯಾಗಿದೆ.

ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಇದುವರೆಗೆ 29,50,130 ಮಂದಿ ಗುಣಮುಖರಾಗಿದ್ದಾರೆ. 38,193 ಜನ ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.60 ರಷ್ಟು ಇದೆ. ರಾಜ್ಯದಲ್ಲಿ 6611 ಸಕ್ರಿಯ ಪ್ರಕರಣಗಳು ಇವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 224 ಜನರಿಗೆ ಕೊರೊನಾ ಸೋಂಕು ತಗುಲಿದೆ. ಒಬ್ಬರು ಮೃತಪಟ್ಟಿದ್ದಾರೆ. 129 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5235 ಸಕ್ರಿಯ ಪ್ರಕರಣಗಳು ಇವೆ.

ಬೀದರ್, ಚಿಕ್ಕಬಳ್ಳಾಪುರ, ದಾವಣಗೆರೆ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ರಾಮನಗರ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಇಂದು ಯಾವುದೇ ಪ್ರಕರಣ ವರದಿಯಾಗಿಲ್ಲ. ಬೆಂಗಳೂರು ನಗರ 224, ದಕ್ಷಿಣಕನ್ನಡ 19, ಧಾರವಾಡ 85, ಮೈಸೂರು 25 ಹೊಸ ಪ್ರಕರಣ ವರದಿಯಾಗಿವೆ.

ಬೆಂಗಳೂರು ನಗರ, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು, ರಾಯಚೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.


SHARE THIS

Author:

0 التعليقات: