Friday, 5 November 2021

ಡ್ರಗ್ಸ್‌ ಪ್ರಕರಣದ ತನಿಖಾ ತಂಡದಿಂದ ಸಮೀರ್‌ ವಾಂಖೆಡೆ ತೆರವು

 ಡ್ರಗ್ಸ್‌ ಪ್ರಕರಣದ ತನಿಖಾ ತಂಡದಿಂದ ಸಮೀರ್‌ ವಾಂಖೆಡೆ ತೆರವು

ಹೊಸದಿಲ್ಲಿ: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖೆಯ ನೇತೃತ್ವದ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮತ್ತು ಅವರ ವಿರುದ್ಧ ₹ 8 ಕೋಟಿ ರೂ. ಪಾವತಿ ಮತ್ತು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ತನಿಖಾ ತಂಡದಿಂದ ತೆಗೆದುಹಾಕಲಾಗಿದೆ ಎಂದು ndtv.com ವರದಿ ಮಾಡಿದೆ.

ಹಿರಿಯ ಪೊಲೀಸ್‌ ಅಧಿಕಾರಿ ಸಂಜಯ್‌ ಸಿಂಗ್‌ ನೇತೃತ್ವದ ಎಸ್‌ಐಟಿ ಅಥವಾ ವಿಶೇಷ ತನಿಖಾ ತಂಡಕ್ಕೆ ಕ್ರೂಸ್‌ ಹಡಗಿನಲ್ಲಿ ಡ್ರಗ್ಸ್‌ ದೊರಕಿದ  ಪ್ರಕರಣ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳನ್ನು ಸಮೀರ್‌ ವಾಂಖೆಡೆಯಿಂದ ಹಸ್ತಾಂತರಿಸಲಾಗಿದೆ.

ಮಹಾರಾಷ್ಟ್ರದ ಸಚಿವ ನವಾಬ್‌ ಮಲಿಕ್‌ ಹಾಗೂ ಪ್ರಮುಖವಾಗಿ ಆರ್ಯನ್‌ ಖಾನ್‌ ಪ್ರಕರಣದ ಎನ್ಸಿಬಿ ಸಾಕ್ಷಿ ಪ್ರಭಾಕರ್‌ ಸೈಲ್‌ ಎತ್ತಿದ ಹಲವು ಪ್ರಶ್ನೆಗಳು ಹಾಗೂ ಸಲ್ಲಿಸಿದ ಕೆಲ ದಾಖಲೆಗಳ ಬಳಿಕ ಸಮೀರ್‌ ವಾಂಖೆಡೆ ಪ್ರಮುಖ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.


SHARE THIS

Author:

0 التعليقات: