Monday, 22 November 2021

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ರಿಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂಕೋರ್ಟ್


 ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ರಿಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂಕೋರ್ಟ್

ಹೊಸದಿಲ್ಲಿ:ಅಕ್ಟೋಬರ್‌ನಿಂದ ನಾಪತ್ತೆಯಾಗಿರುವ ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಬಂಧನದಿಂದ ರಕ್ಷಣೆ ನೀಡಿದ್ದು ಅವರ ವಿರುದ್ಧದ ಸುಲಿಗೆ ಪ್ರಕರಣದ ತನಿಖೆಗೆ ಸಹಕರಿಸುವಂತೆ  ಕೇಳಿದೆ.

ಸಿಂಗ್ ಅವರು ತಲೆಮರೆಸಿಕೊಂಡಿಲ್ಲ. ಅವರು ಭಾರತದಲ್ಲಿದ್ದಾರೆ ಎಂದು ಸಿಂಗ್ ಪರ  ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಮಾಜಿ ಪೊಲೀಸ್ ಆಯುಕ್ತ ಸಿಂಗ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿತ್ತು ಹಾಗೂ ಅವರು ಎಲ್ಲಿದ್ದಾರೆ ಎಂದು ಕೇಳಿತ್ತು.

ಪರಮ್ ಬೀರ್ ಸಿಂಗ್ "ಪರಾರಿಯಾಗಲು ಬಯಸುವುದಿಲ್ಲ ಹಾಗೂ  ಎಲ್ಲಿಯೂ ಓಡಿಹೋಗಲು ಬಯಸುವುದಿಲ್ಲ. ಆದರೆ ಅವರ ಜೀವಕ್ಕೆ ಬೆದರಿಕೆ ಇದೆ'' ಎಂದು ಸಿಂಗ್ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

“ನನಗೆ ಭೀತಿ ಇದೆ ಎಂದು  ಕೋರ್ಟ್‌ಗೆ ಗೊತ್ತಾಗಬಾರದು. ನನಗೆ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೆ. ಸಿಬಿಐ ಕೋರ್ಟ್‌ಗೆ ಹಾಜರಾಗಲು ನಾನು ಸಿದ್ಧ, ನನ್ನನ್ನು ಬೇಟೆಯಾಡಲಾಗುತ್ತಿದೆ.  ನನ್ನ ವಿರುದ್ಧ ಆರು ಪ್ರಕರಣಗಳಿವೆ. ನಾನು ಬಳಲುತ್ತಿದ್ದೇನೆ, ದಯವಿಟ್ಟು ನನಗೆ ಬಂಧನದಿಂದ ರಕ್ಷಣೆ  ಕೊಡಿ. ನಾನು ಅತ್ಯಂತ ಹಿರಿಯ ಪೊಲೀಸ್ ಅಧಿಕಾರಿ ಹಾಗೂ  ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ”ಎಂದು ಸಿಂಗ್ ಮನವಿ ಮಾಡಿದರು.


SHARE THIS

Author:

0 التعليقات: