Monday, 22 November 2021

ಟಿಪ್ಪರ್ ಮತ್ತು ಕಾರು ಢಿಕ್ಕಿ; ಆರು ಮಂದಿಗೆ ಗಾಯ


ಟಿಪ್ಪರ್ ಮತ್ತು ಕಾರು ಢಿಕ್ಕಿ; 
ಆರು ಮಂದಿಗೆ ಗಾಯ

ಕಾಸರಗೋಡು: ಟಿಪ್ಪರ್ ಲಾರಿ ಮತ್ತು ಕಾರು ನಡುವೆ ಢಿಕ್ಕಿಯಾದ ಘಟನೆ ಕುಂಬಳೆ ಆರಿಕ್ಕಾಡಿಯಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಕಾರಿನಲ್ಲಿದ್ದ ಆರು ಮಂದಿ  ಗಾಯಗೊಂಡಿದ್ದಾರೆ.

ಬಂದ್ಯೋಡಿನ ಮುಹಮ್ಮದ್ ಶರೀಫ್  ( 32), ಸಾನಿಯಾ (25), ಆಯಿಷಾ (55), ಇಸಾನ್ (4), ಶೈಸೀನ್ (4), ಲಾಸಿನ್ (2) ಗಾಯಗೊಂಡವರು ಎಂದು ತಿಳಿದುಬಂದಿದೆ.

ಇವರನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹಾಗೂ ಕಾರು ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ ಕಾರು 20ಅಡಿ ಆಳದ ಹೊಂಡಕ್ಕೆ ಬಿದ್ದಿದೆ. ಅಪಘಾತದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂ ಗಂಟೆಗೂ ಅಧಿಕ ಸಮಯ ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ಕುಂಬಳೆ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


SHARE THIS

Author:

0 التعليقات: