ಹಂಸಲೇಖ ಹೇಳಿಕೆಯಲ್ಲಿ ತಪ್ಪೇನಿದೆ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ
ಬೆಂಗಳೂರು: ಪೇಜಾವರ ಶ್ರೀಗಳ ಕುರಿತು ಹೇಳಿಕೆ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಇಂದು ವಿಚಾರಣೆಗಾಗಿ ನಗರದ ಬಸವನಗುಡಿ ಠಾಣೆಗೆ ಹಾಜರಾಗಿದ್ದು, 'ಹಂಸಲೇಖ ಹೇಳಿಕೆಯಲ್ಲಿ ತಪ್ಪೇನಿದೆ' ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಹಂಸಲೇಖ ಅವರು ತಪ್ಪಾಗಿ ಹೇಳಿಲ್ಲ. ಉಳ್ಳವರು, ದಲಿತರ ಮನೆಗೆ ಹೋಗಿ ಆಹಾರ ತಿನ್ನುತ್ತಾರಾ? ದಲಿತರ ಮನೆಗೆ ಹೋಗಿ ಹೊಟೇಲ್ನಿಂದ ತಿಂಡಿ ತರಿಸಿಕೊಳ್ಳುತ್ತಾರೆ. ಹೀಗಾಗಿ ಸುಖಾ ಸುಮ್ಮನೆ ದಲಿತರ ಮನೆಗೆ ಏಕೆ ಹೋಗಬೇಕು. ಬಿಜೆಪಿಯಲ್ಲಿ ಮನುವಾದಿಗಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
0 التعليقات: