Sunday, 14 November 2021

ಪ್ರಿಯಾಂಕ್ ಖರ್ಗೆ ಹೆಸರು ಗಂಡೋ ಹೆಣ್ಣೊ ಎಂಬ ಬಗ್ಗೆ ಕ್ಲಾರಿಟಿನೇ ಇಲ್ಲ: ಸಂಸದ ಪ್ರತಾಪ ಸಿಂಹ ಟೀಕೆ


 ಪ್ರಿಯಾಂಕ್ ಖರ್ಗೆ ಹೆಸರು ಗಂಡೋ ಹೆಣ್ಣೊ ಎಂಬ ಬಗ್ಗೆ ಕ್ಲಾರಿಟಿನೇ ಇಲ್ಲ: ಸಂಸದ ಪ್ರತಾಪ ಸಿಂಹ ಟೀಕೆ

ಮೈಸೂರು: ಪ್ರಿಯಾಂಕ್ ಖರ್ಗೆ ಹೆಸರು ಗಂಡೋ ಹೆಣ್ಣೊ ಎಂಬ ಬಗ್ಗೆ ಕ್ಲಾರಿಟಿನೇ ಇಲ್ಲ ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮರಿ ಖರ್ಗೆಗೆ ಸ್ವಂತಿಕೆ ಎಂಬುದೇ ಇಲ್ಲ, ನನ್ನನ್ನು ಪೇಪರ್ ಸಿಂಹ ಎಂದು ಕರೆದರೆ ಬೇಸರವಿಲ್ಲ, ನಾನು ಪತ್ರಿಕೆ ಮೂಲಕವೇ ಘರ್ಜಿಸಿ ಈ ಸ್ಥಾನಕ್ಕೆ ಬಂದಿದ್ದೇನೆ.ಪ್ರಿಯಾಂಕ್ ಖರ್ಗೆ ಹೆಸರು ಗಂಡೋ ಹೆಣ್ಣೊ ಎಂಬ ಬಗ್ಗೆ ಕ್ಲಾರಿಟಿನೇ ಇಲ್ಲ, ರಾಜೀವ್ ಗಾಂಧಿ ಮಗಳ ಹೆಸರಿಟ್ಟುಕೊಂಡಿದ್ದಾರೆ. ಅವರ ಹೆಸರಿನಲ್ಲೇ ಅವರಿಗೆ ಸ್ವಂತಿಕೆ ಇಲ್ಲ ಎಂದು  ವ್ಯಂಗ್ಯವಾಡಿದರು.

ಶೋಷಿತರ ಹೆಸರೇಳಿಕೊಂಡು ಮರಿ ಖರ್ಗೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಬಾಯಲ್ಲಿ ಭ್ರಷ್ಟಾಚಾರದ ಮಾತು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗೆ ಆಗುತ್ತದೆ ಎಂದು ಲೇವಡಿ ಮಾಡಿದರು.

ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಏನೆಲ್ಲಾ ಅಪಪ್ರಚಾರ ಮಾಡಿದರೂ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಕಾಂಗ್ರಸ್ ನವರು ಸುಳ್ಳು ಅಪಪ್ರಚಾರ ಮಾಡಿ ಬಿಜೆಪಿ ವಿರುದ್ಧ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಬಿಟ್ ಕಾಯಿನ್ ಹಗರಣ ನಡೆದಿದ್ದು ಕೋಟ್ಯಂತರ ರೂ. ಹಗರಣ ನಡೆದಿದೆ ಎನ್ನುತ್ತಾರೆ. ದಿಲ್ಲಿಯಲ್ಲಿ ಪವನ್ ಕೇರ ಆರೋಪ ಮಾಡುತ್ತಾರೆ. ಮತ್ತೆ ಬೆಂಗಳೂರಿನಲ್ಲಿ ಮರಿ ಖರ್ಗೆ ಬಿಟ್ ಕಾಯಿನ್ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ನಿನ್ನೆ ಸಹ ಸುರ್ಜೇವಾಲ ದಿಲ್ಲಿಯಲ್ಲಿ ಕುಳಿತು 7 ಸಾವಿರ ಕೋಟಿ ರೂ. ಹಗರಣ ಎಂದು ಹೇಳುತ್ತಾರೆ. ಇವರಲ್ಲೆ ಒಬ್ಬರಿಗೊಬ್ಬರಿಗೆ ಸ್ಪಷ್ಟತೆ ಇಲ್ಲ. ಸುಮ್ಮನೆ ಬಿಜೆಪಿ ವಿರುದ್ಧ ಅರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.


SHARE THIS

Author:

0 التعليقات: