Monday, 1 November 2021

ಸಿಂದಗಿ ಉಪಚುನಾವಣೆ; ಬಿಜೆಪಿ ಅಭ್ಯರ್ಥಿಗೆ ಭಾರೀ ಮುನ್ನಡೆ


ಸಿಂದಗಿ ಉಪಚುನಾವಣೆ; 
ಬಿಜೆಪಿ ಅಭ್ಯರ್ಥಿಗೆ ಭಾರೀ ಮುನ್ನಡೆ

ವಿಜಯಪುರ : ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಹಾನಗಲ್, ಸಿಂದಗಿ  ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ.

ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದು, 3 ನೇ ಸುತ್ತಿನ ಮುಕ್ತಾಯದ ನಂತರ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 13081, ಕಾಂಗ್ರೆಸ್ ಅಶೋಕ ಮನಗೂಳಿ 8231, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 423 ಮತಗಳನ್ನು ಪಡೆದಿದ್ದಾರೆ.


SHARE THIS

Author:

0 التعليقات: