Thursday, 25 November 2021

ಬೆಳೆ ಹಾನಿಯಿಂದ ಮನನೊಂದು ಇಬ್ಬರು ರೈತರು ಆತ್ಮಹತ್ಯೆ!


ಬೆಳೆ ಹಾನಿಯಿಂದ ಮನನೊಂದು ಇಬ್ಬರು ರೈತರು ಆತ್ಮಹತ್ಯೆ!

ದಾವಣಗೆರೆ: ಜಿಲ್ಲೆಯ ಹೊನ್ನಾಳ್ಳಿ, ನ್ಯಾಮತಿ ತಾಲೂಕಿನಲ್ಲಿ ಇಬ್ಬರು ರೈತರು ಬೆಳೆ ನಷ್ಟದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ. 

ನ್ಯಾಮತಿ ತಾಲೂಕಿನ  ಆರುಂಡಿ ಗ್ರಾಮದಲ್ಲಿ ಧಾರುಕೇಶ್( 50),  ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರಿನ ಸಿದ್ದಪ್ಪ (60) ಆತ್ಮಹತ್ಯೆ ಶರಣಾದ ರೈತರು. 

ಭತ್ತದ ಬೆಳೆ ಕಳೆದುಕೊಂಡಿದ್ದ ರೈತ ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದಪ್ಪ ಅವರ ಎರಡು ಎಕರೆ ಭತ್ತದ ಬೆಳೆ ನಾಶವಾಗಿತ್ತು. ಅಲ್ಲದೇ  2 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊನ್ನಾಳ್ಳಿಯಲ್ಲಿ ಗ್ರಾಮಾಂತರ ಠಾಣೆ ಹಾಗೂ ನ್ಯಾಮತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸದರಿಂದ ಭೇಟಿ ಸಾಂತ್ವನ

 ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರು ಆತ್ಮಹತ್ಯೆ ಮಾಡಿಕೊಂಡ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರಿಗೆ ಭೇಟಿ ಕುಟುಂಬಕ್ಕೆ ಸಾಂತ್ವನ ಹೇಳಿದರು.  SHARE THIS

Author:

0 التعليقات: