Tuesday, 2 November 2021

ಉಪಚುನಾವಣೆ ಫಲಿತಾಂಶ: ಸಿಂದಗಿ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ; ಸಿದ್ದರಾಮಯ್ಯ


 ಉಪಚುನಾವಣೆ ಫಲಿತಾಂಶ: ಸಿಂದಗಿ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ; ಸಿದ್ದರಾಮಯ್ಯ

ಬೆಂಗಳೂರು: 'ಸಿಂದಗಿ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ' ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಉಪ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರು ಅವರು, '' ಕಾಂಗ್ರೆಸ್ ಪಕ್ಷ ಕಳೆದ ಬಾರಿ ಸಿಂದಗಿಯಲ್ಲಿ 3ನೇ ಸ್ಥಾನದಲ್ಲಿತ್ತು. ಈ ಬಾರಿ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಬಂದಿದ್ದು ಸಮಾಧಾನ ತಂದಿದೆ ಎಂದ ಅವರು,  ಸೋಲು ಸೋಲೇ. ಸಿಂದಗಿ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ'' ಎಂದು ಹೇಳಿದ್ದಾರೆ. 

ಬೆಲೆ ಏರಿಕೆಯಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ನಾನು ಮೊದಲೇ ಹೇಳಿದ್ದೆ ಜೆಡಿಎಸ್ ಠೇವಣಿ ಕಳೆದುಕೊಳ್ಳುತ್ತದೆ ಎಂದು. ಅಲ್ಪ ಸಂಖ್ಯಾತ ಅಭ್ಯರ್ಥಿ ಹಾಕಿದ ಮಾತ್ರಕ್ಕೆ ಜನ ವೋಟ್ ಹಾಕೋಲ್ಲ, ಅಲ್ಪಸಂಖ್ಯಾತರು ಬುದ್ಧಿವಂತರಿದ್ದಾರೆ ಎಂದು ಜೆಡಿಎಸ್ ವಿರುದ್ಧ ಟೀಕಿಸಿದ್ದಾರೆ.

ನಾನು ಜೆಡಿಎಸ್ ಬಗ್ಗೆ ಮಾತಾಡೋಲ್ಲ. ಅವರು ಸ್ಪರ್ಧೆಯಲ್ಲೇ ಇಲ್ಲ. 2023 ರಲ್ಲೂ ಸ್ಪರ್ಧೆಗೆ ಇರೋಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜನರಿಗೆ ಬೇಸರವಿದೆ ಎಂದು ಹೇಳಿದರು. 


SHARE THIS

Author:

0 التعليقات: