Wednesday, 3 November 2021

ಶ್ರೀನಗರ-ಶಾರ್ಜಾ ವಿಮಾನಗಳಿಗೆ ತನ್ನ ವಾಯುಪ್ರದೇಶ ಬಳಕೆಗೆ ಪಾಕಿಸ್ತಾನ ನಕಾರ


 ಶ್ರೀನಗರ-ಶಾರ್ಜಾ ವಿಮಾನಗಳಿಗೆ ತನ್ನ ವಾಯುಪ್ರದೇಶ ಬಳಕೆಗೆ ಪಾಕಿಸ್ತಾನ ನಕಾರ

ಶ್ರೀನಗರ: 11 ವರ್ಷಗಳ ನಂತರ ಪುನರಾರಂಭಗೊಂಡಿರುವ ಜಮ್ಮು-ಕಾಶ್ಮೀರದ ಶ್ರೀನಗರದಿಂದ ಶಾರ್ಜಾಕ್ಕೆ ತೆರಳುವ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನ ನಿರಾಕರಿಸಿದೆ. ಈ ಕ್ರಮವು ಜಮ್ಮು ಮತ್ತು ಕಾಶ್ಮೀರದ ಜನರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.

ಈ ನಿರ್ಧಾರದಿಂದಾಗಿ ಶ್ರೀನಗರದಿಂದ ಶಾರ್ಜಾಕ್ಕೆ ವಿಮಾನಗಳು ಉದಯಪುರ, ಅಹಮದಾಬಾದ್ ಹಾಗೂ ಒಮಾನ್ ಮೂಲಕ ಹಾರಾಟ ನಡೆಸಬೇಕಾಗಿರುವುದರಿಂದ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ವಿಮಾನ ಪ್ರಯಾಣವೂ ದುಬಾರಿಯಾಗಲಿದೆ.

ಈ ಕ್ರಮವನ್ನು "ಅತ್ಯಂತ ದುರದೃಷ್ಟಕರ" ಎಂದ ಜಮ್ಮು-ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, "2009-2010ರಲ್ಲಿ ಶ್ರೀನಗರದಿಂದ ದುಬೈಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಕ್ಕೂ ಪಾಕಿಸ್ತಾನವು ಅದೇ ರೀತಿಯ ಕೆಲಸವನ್ನು ಮಾಡಿತ್ತು. ಪಾಕ್ ವಾಯುಪ್ರದೇಶವನ್ನು ಅತಿಕ್ರಮಿಸಲು ಗೋ ಫಸ್ಟ್ಗೆ ಅನುಮತಿ ನೀಡಬೇಕೆಂದು ನಾನು ಆಶಿಸಿದ್ದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಕ್ಟೋಬರ್ 23 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀನಗರದ ಶೇಖ್ ಉಲ್-ಆಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉದ್ಘಾಟನಾ ಶ್ರೀನಗರ-ಶಾರ್ಜಾ ವಿಮಾನಕ್ಕೆ ಚಾಲನೆ ನೀಡಿದ್ದರು. 11 ವರ್ಷಗಳ ನಂತರ ಕಾಶ್ಮೀರ ಹಾಗೂ ಯುಎಇ ನಡುವಿನ ನೇರ ವಿಮಾನ ಸಂಪರ್ಕವನ್ನು ಪುನರಾರಂಭಿಸಿದ್ದರು.


SHARE THIS

Author:

0 التعليقات: