Thursday, 11 November 2021

ಭಾರತದಲ್ಲಿ ವ್ಯವಸ್ಥಿತ ಮುಸ್ಲಿಮ್ ವಿರುದ್ಧ ದಾಳಿ : ಅರಬ್ ದೇಶದಿಂದ ಆರ್ಥಿಕ ದಿಗ್ಬಂಧನ ಎಚ್ಚರಿಕೆ


 ಭಾರತದಲ್ಲಿ ವ್ಯವಸ್ಥಿತ ಮುಸ್ಲಿಮ್ ವಿರುದ್ಧ ದಾಳಿ : ಅರಬ್ ದೇಶದಿಂದ ಆರ್ಥಿಕ ದಿಗ್ಬಂಧನ ಎಚ್ಚರಿಕೆ

ಮನಾಮ: ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ, ಮುಸ್ಲಿಮರ ವಿರುದ್ಧ ಸಂಘಪರಿವಾರ ನಡೆಸುತ್ತಿರುವ ವ್ಯವಸ್ಥಿತ ಹಿಂಸಾಚಾರ ಮತ್ತು ಹತ್ಯೆಯನ್ನು ಬಹ್ರೇನ್ ತೀವ್ರವಾಗಿ ಖಂಡಿಸಿದೆ.

ಭಾರತವು, ಹಿಂಸಾಚಾರಗಳಿಗೆ ಕಡಿವಾಣ ಹಾಕದಿದ್ದರೆ ಭಾರತದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಬಹಿಷ್ಕರಿಸುವುದರೊಂದಿಗೆ ಭಾರತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಹ್ರೈನ್ ಮಂತ್ರಿಮಂಡಲದ ಶಾಸಕ ಅಬ್ದುಲ್ ರಝಾಕ್ ಹತ್ತಾಬ್ ಅವರು ಎಚ್ಚರಿಸಿದ್ದಾರೆ.

ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ, ಅಸ್ಸಾಂ ಮತ್ತು ಕಾಶ್ಮೀರದಲ್ಲಿ ಮುಸ್ಲಿಮರು ವ್ಯಾಪಕ ಹಿಂಸಾಚಾರ, ನಿಂದನೆ ಮತ್ತು ವ್ಯವಸ್ಥಿತ ಹತ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಉಲ್ಲೇಖಿಸಿದರು. ಮುಸ್ಲಿಮರ ಸ್ವಾತಂತ್ರ್ಯ, ಹಕ್ಕು ಹಾಗೂ ಧಾರ್ಮಿಕ ಆಚರಣೆಗಳನ್ನೂ ತಡೆಯಲಾಗುತ್ತಿದೆ ಎಂದರು.

ಭಾರತದ ಈ ನಡೆ ಅಂತರಾಷ್ಟ್ರೀಯ ಕಾನೂನು ಮತ್ತು ಅಬ್ರಹಾಮಿಕ್ ಧಾರ್ಮಿಕ ಆಚರಣೆಗೆ ವಿರುದ್ಧವಾಗಿದೆ. ಮಾತ್ರವಲ್ಲ ಮಾನವೀಯತೆ ಮತ್ತು ನಾಗರಿಕರ ಸುರಕ್ಷತೆ, ಧರ್ಮ ಮತ್ತು ನಂಬಿಕೆಗಳನ್ನು ಲೆಕ್ಕಿಸದೆ ಸ್ವಾತಂತ್ರ್ಯವನ್ನು ಒದಗಿಸುವ ದೇಶದ ಜವಾಬ್ದಾರಿಗೆ ವಿರುದ್ಧವಾಗಿದೆ ಎಂದು ಬಹ್ರೇನ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಹ್ರೇನ್‌ನ ಭಾರತೀಯ ರಾಯಭಾರಿ ಮೂಲಕ ನಮ್ಮ ನಿಲುವನ್ನು ಭಾರತ ಸರ್ಕಾರಕ್ಕೆ ತಲುಪಿಸುವಂತೆ ಪದೇ ಪದೇ ಕೇಳಿಕೊಂಡಿದ್ದು, ನ್ಯಾಯಸಮ್ಮತವಲ್ಲದ ಕಾರಣಗಳಿಂದ ನುಣುಚಿಕೊಂಡಿದ್ದಾರೆ. ಭಾರತೀಯ ಮುಸ್ಲಿಮರ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಸಂರಕ್ಷಣೆಗಾಗಿ ಪ್ರಪಂಚಾದ್ಯಂತವಿರುವ ಮುಸ್ಲಿಮರು ಒಗ್ಗಟ್ಟಾಗಬೇಕೆಂದು ಅವರು ಕರೆ ನೀಡಿದರು.

ಬಹ್ರೇನ್ ಮತ್ತು ಭಾರತದ ನಡುವಿನ ಅಂತರಾಷ್ಟ್ರೀಯ ವ್ಯಾಪಾರ ವಹಿವಾಟು ವಾರ್ಷಿಕ 105 ಶತಕೋಟಿ ಡಾಲರ್ ಗಳನ್ನು ಮೀರಿದೆ. ಮುಸ್ಲಿಮರ ಮೇಲಿನ ಹಿಂಸಾಚಾರ, ನಿರ್ಬಂಧವನ್ನು ಮುಂದುವರಿಸಿದರೆ ಭಾರತವು ಆರ್ಥಿಕ ದಿಗ್ನಂಧನವನ್ನು ಎದುರಿಸಬೇಕಾಗುತ್ತದೆ ಎಂದು ಅಬ್ದುಲ್ ರಝಾಕ್ ಎಚ್ಚರಿಸಿದರು.


SHARE THIS

Author:

0 التعليقات: