ಹಸು, ಗೋಮೂತ್ರ, ಸೆಗಣಿ ಭಾರತದ ಆರ್ಥಿಕತೆ ಬಲಪಡಿಸಲು ಸಹಾಯ ಮಾಡುತ್ತದೆ: ಮಧ್ಯಪ್ರದೇಶ ಸಿಎಂ ಚೌಹಾಣ್
ಹೊಸದಿಲ್ಲಿ: ಹಸುಗಳು ಹಾಗೂ ಅವುಗಳ ಸೆಗಣಿ ಮತ್ತು ಮೂತ್ರವು ಸರಿಯಾದ ವ್ಯವಸ್ಥೆಯನ್ನು ಜಾರಿಗೆ ತಂದರೆ ರಾಜ್ಯ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಹೇಳಿದ್ದಾರೆ ಎಂದು theprint.in ವರದಿ ಮಾಡಿದೆ.
“ಜಾನುವಾರು ಸಾಕಣೆ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರು ಮುಂದೆ ಬಂದರೆ ನಮ್ಮ ಯಶಸ್ಸು ಖಚಿತ’’ ಎಂದು ಚೌಹಾಣ್ ಹೇಳಿಕೊಂಡಿದ್ದಾರೆ.
ಭೋಪಾಲ್ನಲ್ಲಿ ನಡೆದ ಭಾರತೀಯ ಪಶುವೈದ್ಯಕೀಯ ಸಂಘದ ಮಹಿಳಾ ವಿಭಾಗದ ಮೊದಲ ವಾರ್ಷಿಕ ಸಮಾವೇಶದಲ್ಲಿ ಚೌಹಾಣ್ ಮಾತನಾಡಿದರು. "ಶಕ್ತಿ 2021" ಎಂಬ ಶೀರ್ಷಿಕೆಯ ಕಾರ್ಯಕ್ರಮವು ದೇಶಾದ್ಯಂತ ಮಹಿಳಾ ಪಶುವೈದ್ಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಚರ್ಚಿಸಲು ಮತ್ತು ಪರಿಹರಿಸಲು ಒಂದು ವೇದಿಕೆಯಾಗಿದೆ.
ಹಸುವಿನ ಸೆಗಣಿ ಹಾಗೂ ಮೂತ್ರದ ಪ್ರಯೋಜನಗಳು ಮತ್ತು ಉಪಯುಕ್ತತೆಯ ಕುರಿತು ಮಾತನಾಡಿದ ಚೌಹಾಣ್, "ಹಸುವಿನ ಸೆಗಣಿ ಮತ್ತು ಮೂತ್ರವನ್ನು ಕೀಟನಾಶಕಗಳು, ರಸಗೊಬ್ಬರಗಳು ಇತರ ಹಲವು ವಸ್ತುಗಳನ್ನು ತಯಾರಿಸಲು ಬಳಸಬಹುದು’’ ಎಂದರು.
"ಸ್ಮಶಾನದಲ್ಲಿ ಮರವನ್ನು ಇನ್ನು ಮುಂದೆ ಬಳಸದೇ ಇರಲು ನಾವು ಪ್ರಯತ್ನಿಸುತ್ತಿದ್ದೇವೆ. ಬದಲಾಗಿ ಹಸುವಿನ ಸೆಗಣಿ ಕೇಕ್ ಗಳನ್ನು ಇಲ್ಲಿ ಬಳಸಲಾಗುತ್ತದೆ. ಗೋಶಾಲೆಗಳು ಈಗ ಆತ್ಮನಿರ್ಭರ್ (ಸ್ವತಂತ್ರ) ಪಡೆಯುತ್ತಿವೆ. ನಾವು ಹಸುವಿನ ಸೆಗಣಿ ಶೋಧಿಸುತ್ತಿದ್ದೇವೆ ಹಾಗೂ ಅದನ್ನು ಗೊಬ್ಬರ ತಯಾರಿಕೆಗೆ ಹೇಗೆ ಬಳಸಬಹುದು ಎಂಬ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ’’ ಎಂದು ಅವರು ಹೇಳಿದರು.
0 التعليقات: