Monday, 15 November 2021

600 ಕೋ.ರೂ. ಮೌಲ್ಯದ ಹೆರಾಯಿನ್ ವಶ, ಮೂವರ ಬಂಧನ

600 ಕೋ.ರೂ. ಮೌಲ್ಯದ ಹೆರಾಯಿನ್ ವಶ, ಮೂವರ ಬಂಧನ

ಗಾಂಧಿನಗರ, ನ. 15: ಗುಜರಾತ್ನ ಎಟಿಎಸ್ ಮೊರ್ಬಿ ಜಿಲ್ಲೆಯ ಝಿಂಝುಡಾ ಗ್ರಾಮದಲ್ಲಿ ಸುಮಾರು 600 ಕೋಟಿ ರೂಪಾಯಿ ಮೌಲ್ಯದ 120 ಕಿ.ಗ್ರಾಂ. ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ ಹಾಗೂ ಇದಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 

ಈ ಹೆರಾಯಿನ್ ಅನ್ನು ಗುಜರಾತ್ ಮೂಲಕ ಸಾಗಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘‘ಬೇಹುಗಾರಿಕೆ ಮಾಹಿತಿಯ ಆಧಾರದಲ್ಲಿ ಹೆರಾಯಿನ್ ಅನ್ನು ಇಲ್ಲಿಗೆ ತರಲಾಗುತ್ತದೆ ಎಂಬುದು ಗುಜರಾತ್ ಎಟಿಎಸ್ಗೆ ತಿಳಿಯಿತು. ಈ ಮಾಹಿತಿ ಆಧಾರದಲ್ಲಿ ಎಟಿಎಸ್ ತಂಡ ಮೊರ್ಬಿ ಜಿಲ್ಲೆಯ ಝಿನ್ಝುಡಾ ಗ್ರಾಮದ ಮುಖ್ತರ್ ಹುಸೈನ್ ಸೈಯದ್ ಅವರ ಮನೆ ಮೇಲೆ ದಾಳಿ ನಡೆಸಿತು. ಅಲ್ಲಿ 120 ಕಿ.ಗ್ರಾಂ. ಹೆರಾಯಿನ್ ಪತ್ತೆಯಾಯಿತು. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 600 ಕೋಟಿ ರೂಪಾಯಿ ಮೌಲ್ಯವಿದೆ’’ ಎಂದು ಡಿಜಿಪಿ ಆಶಿಶ್ ಭಾಟಿಯಾ ತಿಳಿಸಿದ್ದಾರೆ. SHARE THIS

Author:

0 التعليقات: