ಜಮ್ಮುಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನ :
ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು
ಜಮ್ಮುಕಾಶ್ಮೀರ : ಇಂದು ಬೆಳ್ಳಂಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪನವಾಗಿದ್ದು , ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಇಂದು ಬೆಳಿಗ್ಗೆ 9.21 ಕ್ಕೆ ಅನುಭವವಾಗಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 4.3 ದಾಖಲಾಗಿದೆ. ರಾಜ್ಯದ ಹೆನ್ಲೆ ಗ್ರಾಮದಿಂದ ಪೂರ್ವಕ್ಕೆ 513 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.
ಕಂಪನದ ಅನುಭವವಾದಾಗ ಜನರು ತಮ್ಮ ಮನೆಗಳಿಂದ ಹೊರಬಂದರು ಎಂದು ವರದಿಯಾಗಿದೆ. ಆದರೆ, ಭೂಕಂಪದಿಂದಾಗಿ ಇನ್ನೂ ಯಾವುದೇ ಜೀವ ಹಾನಿ ಅಥವಾ ಆಸ್ತಿ-ಹಾನಿ ವರದಿಯಾಗಿಲ್ಲ.
ಈ ಮೊದಲು ಶನಿವಾರ ರಾತ್ರಿಕೂಡ ರಾಜ್ಯದಲ್ಲಿ ಕಂಪನದ ಅನುಭವವಾಗಿತ್ತು. ಲೇಹ್ ನ ಅಲ್ಚಿ ಪ್ರದೇಶದಲ್ಲಿ ಕಂಪನಗಳು ಅಪ್ಪಳಿಸಿದವು. ಅಲ್ಚಿ (ಲೇಹ್) ನ ಜಮ್ಮು ಮತ್ತು ಕಾಶ್ಮೀರದ ಬಳಿ ಶನಿವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆಯ ಕಂಪನ ಅನುಭವವಾಗಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
0 التعليقات: