ಶಿವಮೊಗ್ಗ: ಶಿರಾಳಕೊಪ್ಪದಲ್ಲಿ ಬೈಕ್ ಗೆ 407 ವಾಹನ ಡಿಕ್ಕಿ:
ಅಪ್ಪ, ಮಕ್ಕಳು ಸೇರಿ ಮೂವರು ಸಾವು
ಶಿವಮೊಗ್ಗ: ದೀಪಾವಳಿ ಹಬ್ಬದ ಸಡಗರ, ಸಂಭ್ರಮಕ್ಕಾಗಿ ಬೈಕ್ ನಲ್ಲಿ ತಂದೆ, ತಾಯಿ, ಮಕ್ಕಳು ತೆರಳುತ್ತಿದ್ದಂತ ಸಂದರ್ಭದಲ್ಲಿ 407 ವಾಹನವೊಂದು ಡಿಕ್ಕಿಯಾದ ಪರಿಣಾಮ , ಸ್ಥಳದಲ್ಲಿಯೇ ಅಪ್ಪ ಮಕ್ಕಳು ಸೇರಿ ಮೂವರು ಸಾವನ್ನಪ್ಪಿರೋ ಘಟನೆ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗುಂಜನೂರಿನಿಂದ ಚಿಕ್ಕಜಂಬೂರಿಗೆ ಊರಿನಲ್ಲಿ ದೀಪಾವಳಿ ಹಬ್ಬದ ನಿಮಿತ್ತ, ಬೈಕ್ ನಲ್ಲಿ ರಾಮಚಂದ್ರಪ್ಪ(42), ಪತ್ನಿ ಭಾಗ್ಯ, ಮಕ್ಕಳಾದ ಶಶಾಂಕ್(10), ಆದರ್ಶ (06 ) ತೆರಳುತ್ತಿದ್ದರು. ಇವರ ಬೈಕಿಗೆ 407 ವಾಹನವೊಂದು ಬೆಲವಂತಕೊಪ್ಪದ ವಿಜಯ ರೈಸ್ ಮಿಲ್ ಬಳಿ ಡಿಕ್ಕಿಯಾದ ಪರಿಣಾಮ ಬೈಕ್ ಚಲಾಯಿಸುತ್ತಿದ್ದಂತ ರಾಮಚಂದ್ರಪ್ಪ ಹಾಗೂ ಅವರ ಪುತ್ರ ಆದರ್ಶ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಇನ್ನೂ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಂತ ತಾಯಿ ಭಾಗ್ಯ ಹಾಗೂ ಮಗ ಶಶಾಂಕ್ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆಗೆ ದಾಖಲಿಸೋ ವೇಳೆಯಲ್ಲಿ ಮಾರ್ಗಮಧ್ಯೆ ಶಶಾಂಕ್ ಕೂಡ ಸಾವನ್ನಪ್ಪಿದ್ದಾನೆ. ತೀವ್ರವಾಗಿ ಗಾಯಗೊಂಡ ಭಾಗ್ಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು, ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 التعليقات: