Tuesday, 23 November 2021

ದೆಹಲಿಯಲ್ಲಿ 22 ದಿನಗಳ ನಂತರ ಗಾಳಿ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ

ದೆಹಲಿಯಲ್ಲಿ 22 ದಿನಗಳ ನಂತರ ಗಾಳಿ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 22 ದಿನಗಳ ನಂತರ ಮೊದಲ ಬಾರಿಗೆ ಗಾಳಿಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ. ಬುಧವಾರ ಬೆಳಗ್ಗೆ ಹೊತ್ತಿಗೆ ದೆಹಲಿಯಲ್ಲಿ ವಾಯು ಗುಣಣಟ್ಟ ಸೂಚ್ಯಂಕವು 280ಕ್ಕೆ ಇಳಿಕೆಯಾಗಿದೆ. ಆ ಮೂಲಕ ಅತ್ಯಂತ ಕಳಪೆ ವರ್ಗದಿಂದ ವಾಯು ಗುಣಮಟ್ಟ ಸೂಚ್ಯಂಕವು ಕಳಪೆ ವರ್ಗಕ್ಕೆ ಬದಲಾಗಿದೆ.

ಭಾನುವಾರದಂದು ಗಂಟೆಗೆ 20 ಕಿಮೀ ಮತ್ತು ಸೋಮವಾರ 25 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗಾಳಿಯ ಗುಣಮಟ್ಟ ಮತ್ತು ಗೋಚರತೆಯಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಯಿತು ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಮಾಲಿನ್ಯ ಸುಧಾರಣೆ: ಕಟ್ಟಡ ಕಾಮಗಾರಿಗೆ ಅನುಮತಿ, ಶಾಲೆ ಪುನರಾರಂಭಕ್ಕೆ ಚಿಂತನೆ

ಭಾನುವಾರ (349) ಮತ್ತು ಸೋಮವಾರದಂದು (311) ದೆಹಲಿಯ ಗಾಳಿಯ ಗುಣಮಟ್ಟವು "ಅತ್ಯಂತ ಕಳಪೆ" ವಿಭಾಗದಲ್ಲಿ ದಾಖಲಾಗಿದೆ. ನೆರೆಯ ಫರಿದಾಬಾದ್ (279), ಘಾಜಿಯಾಬಾದ್ (268), ಗ್ರೇಟರ್ ನೋಯ್ಡಾ (255), ಗುರ್ಗಾಂವ್ (276) ಮತ್ತು ನೋಯ್ಡಾ (252) ಸಹ ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇದೀಗ ಕಳಪೆ ಹಂತಕ್ಕೆ ತಲುಪಿದೆ. ವಾಯು ಮಾಲಿನ್ಯ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ಒಂದು ಮಾನದಂಡವಿದೆ. ಅದರ ಪ್ರಕಾರ, 00-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತಿಕಳಪೆ, 401-500 ಅಪಾಯಕಾರಿ, ಹಾಗೂ 500 ನಂತರ ಅತಿ ಅಪಾಯಕಾರಿ ಎಂದು ಹೇಳಲಾಗುತ್ತದೆ.

ದೆಹಲಿಯಲ್ಲಿ ಮೂರು ದಿನ ಗಾಳಿ ಗುಣಮಟ್ಟ:

ಭೂ ವಿಜ್ಞಾನ ಸಚಿವಾಲಯದ ವಾಯು ಗುಣಮಟ್ಟದ ಮಾನಿಟರ್ SAFAR ಸಾರಿಗೆ ಮಟ್ಟದ ಗಾಳಿಯು ನಿಧಾನಗೊಳ್ಳುವ ಸಾಧ್ಯತೆಯಿದೆ. ವಾಯುವ್ಯದಿಂದ ದಕ್ಷಿಣ-ಆಗ್ನೇಯಕ್ಕೆ ದಿಕ್ಕನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಇದು "ಕಳಪೆ" ವರ್ಗದೊಳಗಿದ್ದರೂ ಗಾಳಿಯ ಗುಣಮಟ್ಟದಲ್ಲಿ ಮತ್ತಷ್ಟು ಸುಧಾರಣೆಗೆ ಕಾರಣವಾಗುತ್ತದೆ. ಸೋಮವಾರ ಪಶ್ಚಿಮ ದಿಕ್ಕಿನ ಮಾರುತಗಳು ಗಂಟೆಗೆ 25 ಕಿಮೀ ವೇಗದಲ್ಲಿ 3,200 ಮೀಟರ್‌ಗೆ ಗೋಚರತೆಯನ್ನು ಸುಧಾರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಹಿರಿಯ ವಿಜ್ಞಾನಿ ಆರ್ ಕೆ ಜೆನಮಣಿ ಹೇಳಿದ್ದಾರೆ. ಪಾಲಂ ವೀಕ್ಷಣಾಲಯದ ಪ್ರಕಾರ, ನವೆಂಬರ್ ತಿಂಗಳಿನಲ್ಲೇ ಮೊದಲ ಬಾರಿಗೆ "3,000 ಮೀ ಗಿಂತ ಹೆಚ್ಚು ಗೋಚರತೆ ಮತ್ತು ಅಂತಹ ಬಲವಾದ ಗಾಳಿ" ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಮೇಲ್ಮೈ ಗಾಳಿಯ ವೇಗವು ಮುಂದಿನ ಮೂರು ದಿನಗಳವರೆಗೆ ತುಲನಾತ್ಮಕವಾಗಿ ಕಡಿಮೆ ಇರುತ್ತದೆ ಮತ್ತು ಮಾಲಿನ್ಯಕಾರಕಗಳ ಪ್ರಸರಣವನ್ನು ಕಡಿಮೆ ಮಾಡುತ್ತದೆ. ನವೆಂಬರ್ 27 ರಿಂದ ಮೇಲ್ಮೈ ಮಾರುತಗಳು ಹೆಚ್ಚಾಗುವ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳ ಕಾಲ ಗಾಳಿಯ ಗುಣಮಟ್ಟ ಕಳಪೆ ವಿಭಾಗದಲ್ಲಿ ಇರಬಹುದು ಎಂದು ತಿಳಿದು ಬಂದಿದೆ.
SHARE THIS

Author:

0 التعليقات: