Thursday, 11 November 2021

ಟ್ವೆಂಟಿ-20 ವಿಶ್ವಕಪ್: ಮುಹಮ್ಮದ್ ರಿಝ್ವಾನ್, ಶುಐಬ್ ಮಲಿಕ್ ಗೆ ಜ್ವರ, ಸೆಮಿ ಫೈನಲ್ ನಲ್ಲಿ ಆಡುವುದು ಅನುಮಾನ


 ಟ್ವೆಂಟಿ-20 ವಿಶ್ವಕಪ್: ಮುಹಮ್ಮದ್ ರಿಝ್ವಾನ್, ಶುಐಬ್ ಮಲಿಕ್ ಗೆ ಜ್ವರ, ಸೆಮಿ ಫೈನಲ್ ನಲ್ಲಿ ಆಡುವುದು ಅನುಮಾನ

ದುಬೈ: ಪಾಕಿಸ್ತಾನದ ಬ್ಯಾಟರ್‌ಗಳಾದ ಮುಹಮ್ಮದ್ ರಿಝ್ವಾನ್ ಹಾಗೂ ಶುಐಬ್ ಮಲಿಕ್ ಅವರು 'ಸೌಮ್ಯ ಜ್ವರ' ದಿಂದ ಬಳಲುತ್ತಿದ್ದು, ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಡುವುದು ಅನುಮಾನವಾಗಿದೆ.

ರಿಝ್ವಾನ್ ಹಾಗೂ  ಮಲಿಕ್ ಅವರು ಬುಧವಾರದಂದು ತಂಡದ ತರಬೇತಿ ಅವಧಿಯನ್ನು ತಪ್ಪಿಸಿಕೊಂಡರು. ಆದರೂ ಅವರು ಕೋವಿಡ್-19  ಪರೀಕ್ಷೆಯಲ್ಲಿ ನೆಗೆಟಿವ್ ಆಗಿವೆ.

"ಇಬ್ಬರೂ ಆಟಗಾರರನ್ನು ಕೋವಿಡ್-19 ಗಾಗಿ ಪರೀಕ್ಷಿಸಲಾಯಿತು ಮತ್ತು ಇಬ್ಬರೂ ನೆಗೆಟಿವ್ ಆಗಿದ್ದಾರೆ" ಎಂದು 'ESPNCricinfo' ವರದಿ ಮಾಡಿದೆ.

ವರದಿಯ ಪ್ರಕಾರ, ಇಬ್ಬರು ಆಟಗಾರರಿಗೆ ಬುಧವಾರ ಬೆಳಿಗ್ಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿತ್ತು. ಮೊದಲು ಅಭ್ಯಾಸವನ್ನು ವಿಳಂಬಗೊಳಿಸಲು ಸಲಹೆ ನೀಡಲಾಯಿತು. ಆದರೆ ನಂತರ ಅಭ್ಯಾಸ ನಡೆಸದಂತೆ ಅನುಮತಿಸಲಾಯಿತು.

"ಇಬ್ಬರು ಆಟಗಾರರು ಗುರುವಾರದ ಪಂದ್ಯದಲ್ಲಿ ಪಾಲ್ಗೊಳ್ಳುವ ಬಗ್ಗೆ ಪಾಕಿಸ್ತಾನವು ಈ ಸಮಯದಲ್ಲಿ ಹೆಚ್ಚು ಕಳವಳವನ್ನು ಹೊಂದಿಲ್ಲ. ಬೆಳಿಗ್ಗೆ (ಗುರುವಾರ) ಮತ್ತೆ ಇಬ್ಬರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ" ಎಂದು ವರದಿ ಹೇಳಿದೆ.

ಇಬ್ಬರೂ ಆಟಗಾರರು ಈಗ ನಡೆಯುತ್ತಿರುವ ಪಂದ್ಯಾವಳಿಯಲ್ಲಿಪಾಕ್ ಯಶಸ್ವಿ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಹಾಗೂ  ಇಬ್ಬರ ಸೇವೆಯನ್ನು ಕಳೆದುಕೊಳ್ಳುವುದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗಿದೆ.

ರಿಝ್ವಾನ್ ಬದಲಿಗೆ ವಿಕೆಟ್ ಕೀಪರ್ ಆಗಿ  ಮಾಜಿ ನಾಯಕ ಸರ್ಫರಾಝ್ ಅಹ್ಮದ್ ಬರಬಹುದು ಹಾಗೂ ಹೈದರ್ ಅಲಿ  ಅವರು ಮಲಿಕ್ ಸ್ಥಾನವನ್ನು ತುಂಬಬಹುದು.

ಭಾರತ, ನ್ಯೂಝಿಲ್ಯಾಂಡ್, ಅಫ್ಘಾನಿಸ್ತಾನ, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ತಂಡಗಳನ್ನು ಸೋಲಿಸಿದ ಪಾಕಿಸ್ತಾನ ಪಂದ್ಯಾವಳಿಯ 'ಸೂಪರ್ 12' ಹಂತದಲ್ಲಿ ಅಜೇಯವಾಗಿ ಉಳಿದಿತ್ತು.


SHARE THIS

Author:

0 التعليقات: