Wednesday, 17 November 2021

ಮೊದಲ ಟ್ವೆಂಟಿ-20: ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಜಯ


ಮೊದಲ ಟ್ವೆಂಟಿ-20: ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಜಯ

ಜೈಪುರ: ಅಗ್ರ ಸರದಿಯ ಬ್ಯಾಟ್ಸ್ ಮನ್  ಸೂರ್ಯಕುಮಾರ್ ಯಾದವ್(62, 40 ಎಸೆತ, 6 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ತಂಡವು ಬುಧವಾರ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯವನ್ನು 5 ವಿಕೆಟ್ ನಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಗೆಲ್ಲಲು 165 ರನ್ ಗುರಿ ಪಡೆದಿದ್ದ ಭಾರತವು 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ನಾಯಕ ರೋಹಿತ್ ಶರ್ಮಾ 48 ರನ್ , ಕೆಎಲ್ ರಾಹುಲ್ 15 ಹಾಗೂ  ರಿಷಭ್ ಪಂತ್ ಔಟಾಗದೆ 17 ರನ್ ಗಳಿಸಿದರು.

ಇದಕ್ಕೂ ಮೊದಲು ಆರಂಬಿಕ ಬ್ಯಾಟ್ಸ್ ಮನ್ ಮಾರ್ಟಿನ್ ಗಪ್ಟಿಲ್(70, 42 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಮಾರ್ಕ್ ಚಾಪ್ ಮನ್(63,50 ಎಸೆತ, 6 ಬೌಂಡರಿ, 2 ಸಿಕ್ಸರ್)ಅರ್ಧಶತಕಗಳ ನೆರವಿನಿಂದ ನ್ಯೂಝಿಲ್ಯಾಂಡ್ ತಂಡ ಭಾರತ ತಂಡಕ್ಕೆ ಮೊದಲ  ಪಂದ್ಯದ ಗೆಲುವಿಗೆ 165 ರನ್ ಗುರಿ ನೀಡಿತ್ತು.SHARE THIS

Author:

0 التعليقات: