Tuesday, 2 November 2021

ಕಾಬೂಲ್: ಮಿಲಿಟರಿ ಆಸ್ಪತ್ರೆ ಮೇಲೆ ಉಗ್ರರ ದಾಳಿಗೆ 19 ಜನ ಬಲಿ, 50 ಮಂದಿಗೆ ಗಾಯ


ಕಾಬೂಲ್: ಮಿಲಿಟರಿ ಆಸ್ಪತ್ರೆ ಮೇಲೆ ಉಗ್ರರ ದಾಳಿಗೆ 19 ಜನ ಬಲಿ, 50 ಮಂದಿಗೆ ಗಾಯ

ಕಾಬೂಲ್ ನವೆಂಬರ್ 3: ಕಾಬೂಲ್‌ನ ಸೇನಾ ಆಸ್ಪತ್ರೆಯ ಮೇಲೆ ಮಂಗಳವಾರ ISIS ಉಗ್ರರು ದಾಳಿ ಮಾಡಿದ್ದಾರೆ. ದಾಳಿಯಲ್ಲಿ 19 ಜನರು ಸಾವನ್ನಪ್ಪಿದ್ದು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನವನ್ನು ಬೆಚ್ಚಿಬೀಳಿಸಿದ ಇತ್ತೀಚಿನ ದುಷ್ಕೃತ್ಯದಂತಿದೆ.

ತಾಲಿಬಾನ್‌ನ ಪ್ರತಿಸ್ಪರ್ಧಿಗಳಾದ ISIS ರಾಜಧಾನಿಯ ಮಧ್ಯಭಾಗದಲ್ಲಿ ಬಂದೂಕು ಮತ್ತು ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

"ಐಎಸ್ ಬಂಡುಕೋರರು ಆಸ್ಪತ್ರೆಯಲ್ಲಿದ್ದ ನಾಗರಿಕರು, ವೈದ್ಯರು ಮತ್ತು ರೋಗಿಗಳನ್ನು ಗುರಿಯಾಗಿಸಲು ಬಯಸಿದ್ದರು" ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ. ತಾಲಿಬಾನ್ ಪಡೆಗಳು 15 ನಿಮಿಷಗಳಲ್ಲಿ ದಾಳಿಯನ್ನು ಹಿಮ್ಮೆಟ್ಟಿಸಿದೆ ಎಂದು ಹೇಳಿದ್ದಾರೆ. ಭಯೋತ್ಪಾದಕ ಗುಂಪು ISISನ ಅಂಗಸಂಸ್ಥೆಯಾದ ಇಸ್ಲಾಮಿಕ್ ಸ್ಟೇಟ್-ಖೋರಾಸನ್ (ಐಎಸ್-ಕೆ) ತನ್ನ ಟೆಲಿಗ್ರಾಮ್ ಚಾನೆಲ್‌ಗಳ ಹೇಳಿಕೆಯಲ್ಲಿ "ಐದು ಇಸ್ಲಾಮಿಕ್ ಸ್ಟೇಟ್ ಗುಂಪಿನ ಹೋರಾಟಗಾರರು ಏಕಕಾಲದಲ್ಲಿ ಸಂಘಟಿತ ದಾಳಿಗಳನ್ನು ನಡೆಸಿದರು" ಎಂದು ಹೇಳಿದೆ.

ಅಫ್ಘಾನಿಸ್ತಾನದ ಹಿಂದಿನ ಯುಎಸ್ ಬೆಂಬಲಿತ ಸರ್ಕಾರದಿಂದ ಗುಂಪು ವಶಪಡಿಸಿಕೊಂಡ ಹೆಲಿಕಾಪ್ಟರ್‌ಗಳಲ್ಲಿ ಒಂದರಿಂದ ತಾಲಿಬಾನ್ ವಿಶೇಷ ಪಡೆಗಳನ್ನು ಆಸ್ಪತ್ರೆಯ ಛಾವಣಿಯ ಮೇಲೆ ಇಳಿಸಲಾಯಿತು. ಆಸ್ಪತ್ರೆಯ ಸೌಲಭ್ಯದ ಪ್ರವೇಶದ್ವಾರದ ಬಳಿ ಆತ್ಮಹತ್ಯಾ ಬಾಂಬರ್ ತನ್ನ ಸ್ಫೋಟಕಗಳನ್ನು ಸ್ಫೋಟಿಸಿದಾಗ ದಾಳಿ ಪ್ರಾರಂಭವಾಯಿತು. ನಂತರ ಬಂದೂಕುಧಾರಿಗಳು ತಮ್ಮ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿದರು. ಈ ವೇಳೆ ಭಾರೀ ಗುಂಡಿನ ದಾಳಿ ಪ್ರತಿದಾಳಿ ನಡೆದಿದೆ. ಘಟನೆಯಲ್ಲಿ "ಹತ್ತೊಂಬತ್ತು ಜನ ಮೃತಪಟ್ಟಿದ್ದು ಅವರ ದೇಹಗಳು ಮತ್ತು ಸುಮಾರು 50 ಗಾಯಾಳುಗಳನ್ನು ಕಾಬೂಲ್‌ನ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದೆ" ಎಂದು ಹೆಸರಿಸದ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

ಆದರೆ ತಾಲಿಬಾನ್ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿದ್ದು ಇಬ್ಬರು ತಾಲಿಬಾನ್ ಸದಸ್ಯರು, ಇಬ್ಬರು ಮಹಿಳೆಯರು ಮತ್ತು ಒಂದು ಮಗುವನ್ನು ಆಸ್ಪತ್ರೆಯ ಹೊರಗೆ ಕೊಲ್ಲಲಾಗಿದೆ ಎಂದು ದೃಢಪಡಿಸಿದೆ.

ದಾಳಿ ಪ್ರಾರಂಭವಾದಾಗ ಆಸ್ಪತ್ರೆಯಲ್ಲಿದ್ದ ಜನ ಘಟನೆಯ ಬಗ್ಗೆ ಕರೆಯಲ್ಲಿ ವಿವರಿಸಿದ್ದಾರೆ. ಆಸ್ಪತ್ರೆಯಲ್ಲಿ ಸಿಕ್ಕಿಬಿದ್ದ ಮಹಿಳೆಯೊಬ್ಬರು AFP ಗೆ ತಿಳಿಸಿದ್ದು ಹೀಗೆ "ನಾವು ಸಾಯುತ್ತೇವೆ ಎಂದು ಭಾವಿಸಿದ್ದೇವೆ, ನಮ್ಮ ಜೀವನವು ಕೊನೆಗೊಳ್ಳುತ್ತಿದೆ" ಎಂದು ಹೇಳಿದರು. "ಬಾಗಿಲಲ್ಲಿ ಸ್ಫೋಟ ಸಂಭವಿಸಿದೆ. ಉಗ್ರರು ಗುಂಡು ಹಾರಿಸಲು ಪ್ರಾರಂಭಿಸಿದರು. ನಾವು ಆಸ್ಪತ್ರೆಯಲ್ಲಿ ಸಿಲುಕಿಕೊಂಡೆವು. ನಾವು ಗುಂಡು ಹಾರಿಸುವುದನ್ನು, ಗಾಜು ಒಡೆಯುವ ಶಬ್ದವನ್ನು ನಾವು ಕೇಳಿದ್ದೇವೆ. ಹೀಗಾಗಿ ಭಯದಲ್ಲಿ ಬಾತ್ರೂಮ್‌ನಲ್ಲಿ ನಮ್ಮನ್ನು ಲಾಕ್ ಮಾಡಿಕೊಂಡಿದ್ದೇವೆ" ಎಂದು ಸ್ಥಳೀಯರು ಐಸಿಸ್ ಗೆ ತಿಳಿಸಿದ್ದಾರೆ. ತಾಲಿಬಾನ್ ಸದಸ್ಯರು ಬಂದು ಅವರನ್ನು ಕಂಡುಕೊಳ್ಳುವವರೆಗೂ ಅವರು ಅಡಗಿಕೊಂಡಿರುವುದಾಗಿ ಹೇಳಿದ್ದಾರೆ. ನಂತರ ವಿಶೇಷ ಪಡೆಗಳು ಬಂದು ತಮ್ಮನ್ನು ಕಾಪಾಡಿದೆ ಎಂದು ಕೆಲವರು ಆತಂಕದಲ್ಲಿ ತಿಳಿಸಿದ್ದಾರೆ.

"ಎಲ್ಲ ದಾಳಿಕೋರರು ಸತ್ತಿದ್ದಾರೆ. ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಆತ್ಮಾಹುತಿ ಬಾಂಬರ್ ಮೋಟರ್‌ಸೈಕಲ್‌ನಲ್ಲಿ ತನ್ನನ್ನು ತಾನೇ ಸ್ಫೋಟಿಸಿಕೊಂಡು ದಾಳಿಯನ್ನು ಪ್ರಾರಂಭಿಸಿದ್ದಾನೆ" ಎಂದು ತಾಲಿಬಾನ್ ಮಾಧ್ಯಮ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಸ್ಪತ್ರೆಯ ಪ್ರದೇಶವನ್ನು ಗುರಿಯಾಗಿಸಿಕೊಂಡು ಎರಡು ಸ್ಫೋಟಗಳು ನಡೆದಿವೆ ಎಂದು ಅವರು ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೊದಲನೆಯದು ವರದಿಯಾದ ಸುಮಾರು 30 ನಿಮಿಷಗಳ ನಂತರ ನಗರದಲ್ಲಿ ಎಎಫ್‌ಪಿ ಸಿಬ್ಬಂದಿ ಎರಡನೇ ಸ್ಫೋಟದ ಬಗ್ಗೆ ಮಾಹಿತಿ ನೀಡಿದ್ದಾರೆ.

"ಮೊದಲ ಚೆಕ್‌ಪಾಯಿಂಟ್‌ನಿಂದ ನಾನು ದೊಡ್ಡ ಸ್ಫೋಟವನ್ನು ಕೇಳಿದೆ. ನಮಗೆ ಸುರಕ್ಷಿತ ಕೊಠಡಿಗಳಿಗೆ ಹೋಗುವಂತೆ ಹೇಳಲಾಯಿತು. ನಾನು ಬಂದೂಕುಗಳ ಗುಂಡು ಹಾರಿಸುವುದನ್ನು ಸಹ ಕೇಳಿದೆ. ಆಸ್ಪತ್ರೆಯ ಕಟ್ಟಡದೊಳಗೆ ಗುಂಡಿನ ಸದ್ದು ನನಗೆ ಇನ್ನೂ ಕೇಳುತ್ತಿದೆ. ದಾಳಿಕೋರರು ಕೋಣೆಯಿಂದ ಕೋಣೆಗೆ ಹೋಗುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದು ಮೊದಲ ಬಾರಿಗೆ ದಾಳಿ ಮಾಡಿದಂತಿದೆ" ಎಂದು ಆಸ್ಪತ್ರೆಯ ವೈದ್ಯರು ಸರ್ದಾರ್ ಮೊಹಮ್ಮದ್ ದೌದ್ ಖಾನ್ ದಾಳಿ ನಡೆಸುತ್ತಿರುವಾಗ AFP ಗೆ ತಿಳಿಸಿದರು.

ತಾಲಿಬಾನ್ ಮತ್ತು ಮಾಜಿ ಅಫ್ಘಾನ್ ಭದ್ರತಾ ಪಡೆಗಳಿಂದ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯ ಮೇಲೆ ಈ ಹಿಂದೆ 2017 ರಲ್ಲಿ ದಾಳಿ ನಡೆಸಲಾಯಿತು. ವೈದ್ಯಕೀಯ ಸಿಬ್ಬಂದಿಯಂತೆ ವೇಷ ಧರಿಸಿದ ಬಂದೂಕುಧಾರಿಗಳು ಗಂಟೆಗಳ ಕಾಲ ದಾಳಿಯಿಂದ 30 ಜನರನ್ನು ಕೊಂದರು.SHARE THIS

Author:

0 التعليقات: