Wednesday, 10 November 2021

ರಾಜಸ್ಥಾನ: ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಬಸ್‌, 12 ಮಂದಿ ಸಜೀವ ದಹನ


ರಾಜಸ್ಥಾನ: ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಬಸ್‌, 12 ಮಂದಿ ಸಜೀವ ದಹನ

ಜೈಪುರ: ರಾಜಸ್ಥಾನದ ಬಾರ್ಮರ್-ಜೋಧ್‌ಪುರ ಹೆದ್ದಾರಿಯಲ್ಲಿ ಬುಧವಾರ ಖಾಸಗಿ ಬಸ್‌ವೊಂದು ಟ್ಯಾಂಕರ್ ಟ್ರೇಲರ್‌ಗೆ ಡಿಕ್ಕಿ ಹೊಡೆದ ಬಳಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಪ್ರಯಾಣಿಕರೊಬ್ಬರ ಪ್ರಕಾರ, ಬಸ್ ಬೆಳಿಗ್ಗೆ 9:55 ಕ್ಕೆ ಬಲೋತ್ರಾದಿಂದ ಹೊರಟಿತು ಹಾಗೂ  ರಸ್ತೆಯ ತಪ್ಪು ಬದಿಯಿಂದ ಬಂದ ಟ್ಯಾಂಕರ್ ವೊಂದು  ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬಸ್ ಹೊತ್ತಿ ಉರಿದಿದೆ.

ಅಪಘಾತದ ವೇಳೆ ಬಸ್‌ನಲ್ಲಿ 25 ಮಂದಿ ಪ್ರಯಾಣಿಸುತ್ತಿದ್ದರು. ಇದುವರೆಗೆ 10 ಮಂದಿಯನ್ನು ರಕ್ಷಿಸಲಾಗಿದೆ.

ಅಪಘಾತದ ನಂತರ ಜಿಲ್ಲಾಡಳಿತ ಹಾಗೂ  ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪಚ್ಪದ್ರಾ ಶಾಸಕ ಮದನ್ ಪ್ರಜಾಪತ್ ಹಾಗೂ  ರಾಜ್ಯ ಪರಿಸರ ಮತ್ತು ಅರಣ್ಯ ಸಚಿವ ಸುಖರಾಮ್ ಬಿಷ್ಣೋಯ್ ಅವರು ಅಪಘಾತ ಸ್ಥಳದಲ್ಲಿ ಉಪಸ್ಥಿತರಿದ್ದರು.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. 


SHARE THIS

Author:

0 التعليقات: