Saturday, 20 November 2021

1 ಕೆಜಿ ಟೊಮೆಟೊ ಬೆಲೆ 125 ರೂ.ಗೆ ಏರಿಕೆ!


1 ಕೆಜಿ ಟೊಮೆಟೊ ಬೆಲೆ 125 ರೂ.ಗೆ ಏರಿಕೆ!

ಬೆಂಗಳೂರು : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಪೆಟ್ರೋಲ್ ಬಳಿಕ ಟೊಮೊಟೊ ಬೆಲೆ ಶತಕದಾಟಿದೆ. 1 ಕೆಜಿ ಟೊಮೊಟೊ ಬೆಲೆ 125 ರೂ. ಗಡಿ ದಾಟಿದೆ.

ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಟೊಮೊಟೊ ಬೆಲೆ 125 ರೂ.ಗೆ ಏರಿಕೆಯಾಗಿದೆ.

ಕೋಲಾರದ ಎಪಿಎಂಸಿಯಲ್ಲಿ ಒಂದು ಕೆಜಿ ಟೊಮೆಟೊ 125 ರೂ. ಮಾರಾಟವಾಗುವುದರೊಂದಿಗೆ ದಾಖಲೆ ಬರೆದಿದೆ. 15 ಕೆಜಿ 1 ಬಾಕ್ಸ್ ಟೊಮೆಟೊ 1,900 ರೂ. ಗೆ ಮಾರಾಟವಾಗಿದೆ. ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ಟೊಮೆಟೊ ಬೆಲೆ ಏರಿಕೆಯಾಗಿದೆ. ಭಾರೀ ಮಳೆಯಿಂದಾಗಿ ಕೋಲಾರ ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಟೊಮೊಟೊ ಬೆಳೆ ಹಾನಿಯಾಗಿದೆ. ಹೀಗಾಗಿ ಟೊಮೊಟೊ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಬೀನ್ಸ್, ಈರುಳ್ಳಿ, ಟೊಮೊಟೊ, ಹೀರೇಕಾಯಿ, ತೊಗರಿ ಕಾಯಿ, ಬೆಂಡೆಕಾಯಿ, ಬದನೆಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆ 100 ರೂ ಗಡಿ ದಾಟಿದೆ. ಕ್ಯಾಪ್ಸಿಕಾಂ, ತೊಂಡೆಕಾಯಿ, ಕ್ಯಾರೇಟ್, ನುಗ್ಗೇಕಾಯಿ ಬೆಲೆ, ಸೊಪ್ಪಿನ ದರಗಳಲ್ಲಿಯೂ ಏರಿಕೆ ಕಂಡಿವೆ.


SHARE THIS

Author:

0 التعليقات: