Tuesday, 16 November 2021

ಅಮೆರಿಕವನ್ನು ಹಿಂದಿಕ್ಕಿ, ಚೀನಾ ವಿಶ್ವದ ನಂ.1 ಶ್ರೀಮಂತ ದೇಶ


ಅಮೆರಿಕವನ್ನು ಹಿಂದಿಕ್ಕಿ,
ಚೀನಾ ವಿಶ್ವದ ನಂ.1 ಶ್ರೀಮಂತ ದೇಶ

ವಾಷಿಂಗ್ಟನ್ : ಜಾಗತಿಕ ಸಂಪತ್ತಿನ ಬೆಳವಣಿಗೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಚೀನಾ ದೇಶವು ವಿಶ್ವದ ನಂಬರ್ 1 ಶ್ರೀಮಂತ ರಾಷ್ಟ್ರವಾಗಿದೆ ಎಂದು ವರದಿಯಾಗಿದೆ.

ವಿಶ್ವದ 10 ಪ್ರಬಲ ರಾಷ್ಟ್ರಗಳು ಜಗತ್ತಿನ ಶೇ.60 ಕ್ಕೂ ಹೆಚ್ಚು ಆದಾಯವನ್ನು ಹೊಂದಿವೆ. ಚೀನಾ ಜಾಗತಿಕ ಸಂಪತ್ತಿನ ಮೂರನೇ ಒಂದಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಜಾಗತಿಕ ಹಣಕಾಸು ಸೇವಾ ಸಂಸ್ಥೆ ಮೆಕೆನ್ಸಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಅಮೆರಿಕವನ್ನು ಹಿಂದಿಕ್ಕಿರುವ ಚೀನಾ 9000 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. 6,750 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಅಮೆರಿಕ 2 ನೇ ಸ್ಥಾನಕ್ಕೆ ಕುಸಿದಿದೆ.

ಮೆಕೆನ್ಸಿ ಸಂಸ್ಥೆಯು 10 ದೇಶಗಳ ವಾರ್ಷಿಕ ಲೆಕ್ಕಪತ್ರ ಆಧರಿಸಿ ವರದಿ ಬಿಡುಗಡೆ ಮಾಡಿದ್ದು, ಚೀನಾ, ಅಮೆರಿಕ, ಜರ್ಮನಿ, ಫ್ರಾನ್ಸ್, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಜಾಪನ್, ಮೆಕ್ಸಿಕೊ, ಸ್ವಿಡನ್ ದೇಶಗಳು ಟಾಪ್ 10 ರಲ್ಲಿ ಸ್ಥಾನಪಡೆದುಕೊಂಡಿವೆ.




SHARE THIS

Author:

0 التعليقات: