Tuesday, 30 November 2021

ನದಿಗೆ ಬಿದ್ದು ಮೀನುಗಾರ ಮೃತ್ಯು

ನದಿಗೆ ಬಿದ್ದು ಮೀನುಗಾರ ಮೃತ್ಯು


ನದಿಗೆ ಬಿದ್ದು ಮೀನುಗಾರ ಮೃತ್ಯು

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಕಾರ್ಮಿಕನೋರ್ವ ಆಕಸ್ಮಿಕವಾಗಿ ನದಿಗೆ ಬಿದ್ದು ಮೃತಪಟ್ಟ ಘಟನೆ ನಗರದ ಬಂದರ್ ದಕ್ಕೆಯಲ್ಲಿ ಮಂಗಳವಾರ ಸಂಜೆಯ ಸುಮಾರಿಗೆ ನಡೆದಿದೆ.

ಆಂದ್ರಪ್ರದೇಶ ಮೂಲದ ಮಲ್ಲಪಲ್ಲಿ ಅಪ್ಪಯ್ಯ (36) ಮೃತ‌ ಮೀನುಗಾರ.

ಮಂಗಳವಾರ ಸಂಜೆ ಬೋಟಿನಲ್ಲಿ‌ ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದು, ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮಲ್ಲಪಲ್ಲಿ ಅಪ್ಪಯ್ಯನ ಮೃತದೇಹ ಬಂದರ್ ದಕ್ಕೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


 

ಲಸಿಕೆ ಹಾಕಿಸಿಕೊಳ್ಳದವರಿಗೆ ಉಚಿತ ಕೋವಿಡ್ ಚಿಕಿತ್ಸೆ ಇಲ್ಲ; ಪಿಣರಾಯಿ ವಿಜಯನ್

ಲಸಿಕೆ ಹಾಕಿಸಿಕೊಳ್ಳದವರಿಗೆ ಉಚಿತ ಕೋವಿಡ್ ಚಿಕಿತ್ಸೆ ಇಲ್ಲ; ಪಿಣರಾಯಿ ವಿಜಯನ್

ಲಸಿಕೆ ಹಾಕಿಸಿಕೊಳ್ಳದವರಿಗೆ ಉಚಿತ ಕೋವಿಡ್ ಚಿಕಿತ್ಸೆ ಇಲ್ಲ; ಪಿಣರಾಯಿ ವಿಜಯನ್ 

ತಿರುವನಂತಪುರ : ಕೋವಿಡ್-19 ವಿರುದ್ಧದ ಲಸಿಕೆ ತೆಗೆದುಕೊಳ್ಳದಿರುವವರ ವಿರುದ್ಧ ಕಠಿಣ ನಿಲುವು ಕೈಗೊಳ್ಳಲು ಕೇರಳ ಸರ್ಕಾರ ನಿರ್ಧರಿಸಿದ್ದು, ಲಸಿಕೆ ಪಡೆಯದವರಿಗೆ ಕೋವಿಡ್-19 ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ಉಚಿತ ಚಿಕಿತ್ಸೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಲಸಿಕೆ ಪಡೆಯದವರಿಗೆ ಸೋಂಕು ತಗುಲಿದಾಗ, ಅವರ ಚಿಕಿತ್ಸೆಗೆ ಸರ್ಕಾರ ಹಣ ಪಾವತಿಸುವುದಿಲ್ಲ ಎಂದು ಅಧಿಕೃತ ಪ್ರಕಟಣೆ ಹೇಳಿದೆ. ಆರೋಗ್ಯ ಸಮಸ್ಯೆಗಳಿಂದಾಗಿ ಲಸಿಕೆ ಪಡೆಯಲಾಗದವರು ಕೋವಿಡ್‌ಗೆ ತುತ್ತಾದ ಸಂದರ್ಭದಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ ಪಡೆಯಲು ಸರ್ಕಾರಿ ವೈದ್ಯರಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.

ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಮತ್ತು ಶಿಕ್ಷಕರು ಕೂಡಾ ಅಸ್ವಸ್ಥತೆ ಅಥವಾ ಅಲರ್ಜಿಗಳ ಕಾರಣದಿಂದ ಲಸಿಕೆ ಪಡೆಯಲು ಸಾಧ್ಯವಾಗದಿದ್ದರೆ, ಕರ್ತವ್ಯಕ್ಕೆ ಮರಳಲು ಸರ್ಕಾರಿ ವೈದ್ಯರಿಂದ ಪ್ರಮಾಣಪತ್ರ ಪಡೆದು ಸಲ್ಲಿಸಬೇಕಾಗುತ್ತದೆ. ಜತೆಗೆ ಸಂಸ್ಥೆಗೆ ಹಾಜರಾಗಬೇಕಿದ್ದರೆ, ಪ್ರತಿ ವಾರ ನೆಗೆಟಿವ್ ಆರ್‌ಟಿ-ಪಿಸಿಆರ್ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಈ ನಿರ್ದೇಶನಗಳು ಸರ್ಕಾರಿ ನೌಕರರಿಗೂ ಅನ್ವಯವಾಗುತ್ತದೆ.

ಲಸಿಕೆ ಪಡೆಯದ ಸುಮಾರು 5,000 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಶಾಲಾ- ಕಾಲೇಜುಗಳಿಗೆ ಹಾಜರಾಗುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ.


 

ಒಡಿಶಾ, ಆಂಧ್ರ ಕರಾವಳಿಗೆ ಡಿ. 6ರಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ

ಒಡಿಶಾ, ಆಂಧ್ರ ಕರಾವಳಿಗೆ ಡಿ. 6ರಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ


ಒಡಿಶಾ, ಆಂಧ್ರ ಕರಾವಳಿಗೆ ಡಿ. 6ರಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ

ಹೊಸದಿಲ್ಲಿ: ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಗೆ ಶನಿವಾರ ಬೆಳಗ್ಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ. ಅಂಡಮಾನ್, ನಿಕೋಬಾರ್‌ಗೆ ಹೊಂದಿಕೊಂಡಿರುವ ದಕ್ಷಿಣ ಥಾಲ್ಯಾಂಡ್ ಸಮುದ್ರದಲ್ಲಿ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿದೆ. ಮುಂದಿನ 12 ಗಂಟೆಗಳಲ್ಲಿ ಅಂಡಮಾನ್ ಹಾಗೂ ನಿಕೋಬಾರ್ ಪ್ರದೇಶದಲ್ಲಿಯೂ ಕಡಿಮೆ ಒತ್ತಡ ಪ್ರದೇಶ ಉಂಟಾಗಲಿದೆ. ಅಲ್ಲದೆ, ಆಗ್ನೇಯ ಭಾಗದಲ್ಲಿ ವಾಯು ಭಾರ ಕುಸಿತವಾಗಿ ಪರಿವರ್ತನೆಗೊಳ್ಳಲಿದೆ . ಡಿಸೆಂಬರ್ 2ರ ವೇಳೆಗೆ ಪೂರ್ವ-ಮಧ್ಯೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಬಳಿಕ ವಾಯುವ್ಯಕ್ಕೆ ಚಲಿಸಿ ಡಿಸೆಂಬರ್ 4ರ ಬೆಳಗ್ಗೆ ಉತ್ತರ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಗೆ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತದ ಪ್ರಭಾವದಿಂದ ಒಡಿಶಾ ಕರಾವಳಿಯಲ್ಲಿ ಹಾಗೂ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯಲಿದೆ. ಪಶ್ಚಿಮಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶದ ಉತ್ತರ ಕರಾವಳಿಯಲ್ಲಿ ಕೂಡ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


 

 ಜ.18ರಂದು ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಲೇವಾರಿ:ಸುಪ್ರೀಂ ಕೋರ್ಟ್

ಜ.18ರಂದು ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಲೇವಾರಿ:ಸುಪ್ರೀಂ ಕೋರ್ಟ್

 ಜ.18ರಂದು ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಲೇವಾರಿ:ಸುಪ್ರೀಂ ಕೋರ್ಟ್

ಹೊಸದಿಲ್ಲಿ: ತನ್ನ ಕಿಂಗ್‌ಫಿಷರ್ ಏರ್‌ಲೈನ್ಸ್‌ಗಾಗಿ ಬ್ಯಾಂಕುಗಳಿಂದ 9,000 ಕೋ.ರೂ.ಗೂ ಅಧಿಕ ಸಾಲ ಪಡೆದು

ಪಂಗನಾಮ ಹಾಕಿರುವ ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಂದಿನ ವರ್ಷದ ಜ.18ರಂದು ಅಂತಿಮವಾಗಿ ಕೈಗೆತ್ತಿಕೊಳ್ಳುವುದಾಗಿ ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ.

   ಸರ್ವೋಚ್ಚ ನ್ಯಾಯಾಲಯವು ಸಾಕಷ್ಟು ಸಮಯ ಮಲ್ಯರಿಗಾಗಿ ಕಾದಿದೆ ಎಂದು ಹೇಳಿದ ನ್ಯಾ.ಯು.ಯು.ಲಲಿತ್ ನೇತೃತ್ವದ ಪೀಠವು,‘ನಾವು ಇನ್ನಷ್ಟು ಸಮಯ ಕಾಯಲು ಸಿದ್ಧರಿಲ್ಲ’ಎಂದು ತಿಳಿಸಿತು. ಮಲ್ಯರನ್ನು ನ್ಯಾಯಾಂಗ ನಿಂದನೆ ದೋಷಿ ಎಂದು ನ್ಯಾಯಾಲಯವು 2017ರಲ್ಲಿಯೇ ಎತ್ತಿಹಿಡಿದಿದೆ ಎಂದು ಪೀಠವು ಬೆಟ್ಟು ಮಾಡಿತು.

 ಸೂಕ್ತ ಹೇಳಿಕೆಗಳನ್ನು ಸಲ್ಲಿಸಲು ಮಲ್ಯ ಸ್ವತಂತ್ರರಾಗಿದ್ದಾರೆ ಮತ್ತು ಯಾವುದೇ ಕಾರಣದಿಂದ ನ್ಯಾಯಾಲಯದ ಮುಂದೆ ಹಾಜರಾಗಲು ಅವರಿಗೆ ಸಾಧ್ಯವಾಗದಿದ್ದರೆ ಅವರ ಪರವಾಗಿ ವಕೀಲರು ಹೇಳಿಕೆಗಳನ್ನು ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಸ್.ಆರ್.ಭಟ್ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನೂ ಒಳಗೊಂಡ ಪೀಠವು ತಿಳಿಸಿತು.

‘ನಾವು ಸಾಕಷ್ಟು ಸಮಯ ಕಾದಿದ್ದೇವೆ,ಇನ್ನಷ್ಟು ಕಾಯಲು ಸಾಧ್ಯವಿಲ್ಲ. ಪ್ರಕರಣವನ್ನು ವಿಲೇವಾರಿಗಾಗಿ ಜನವರಿ ಎರಡನೇ ವಾರದಲ್ಲಿ ಪಟ್ಟಿ ಮಾಡುತ್ತೇವೆ. ಒಂದಲ್ಲ ಒಂದು ಹಂತದಲ್ಲಿ ಇದು ನಡೆಯಲೇಬೇಕು ಮತ್ತು ಪ್ರಕ್ರಿಯೆಯೂ ಮುಗಿಯಬೇಕು ’ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಈ ವಿಷಯದಲ್ಲಿ ಅಮಿಕಸ್ ಕ್ಯೂರಿ ಆಗಿ ನೆರವಾಗುವಂತೆ ಹಿರಿಯ ವಕೀಲ ಜೈದೀಪ ಗುಪ್ತಾ ಅವರನ್ನು ಕೋರಿಕೊಂಡಿತು.

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ನಾಲ್ಕು ಕೋಟಿ ಡಾಲರ್‌ಗಳನ್ನು ತನ್ನ ಮಕ್ಕಳಿಗೆ ವರ್ಗಾವಣೆ ಮಾಡಿದ್ದಕ್ಕಾಗಿ ತನ್ನನ್ನು ನ್ಯಾಯಾಂಗ ನಿಂದನೆ ದೋಷಿಯೆಂದು ಎತ್ತಿಹಿಡಿದಿದ್ದ 2017ರ ತೀರ್ಪಿನ ಪುನರ್‌ಪರಿಶೀಲನೆಯನ್ನು ಕೋರಿ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ವಜಾಗೊಳಿಸಿತ್ತು.

 ಮಲ್ಯರನ್ನು ಬ್ರಿಟನ್‌ನಿಂದ ಗಡಿಪಾರುಗೊಳಿಸಲು ತಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ,ಆದರೆ ಕೆಲವು ಕಾನೂನು ಸಮಸ್ಯೆಗಳಿಂದಾಗಿ ಅವರ ಹಸ್ತಾಂತರ ವಿಳಂಬಗೊಳ್ಳುತ್ತಿದೆ ಎಂದು ಕೇಂದ್ರ ಸರಕಾರವು ಈ ವರ್ಷದ ಜ.18ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

2016ರಿಂದ ಬ್ರಿಟನ್‌ನಲ್ಲಿ ವಾಸವಿರುವ ಮಲ್ಯ 2017, ಎ.18ರಂದು ಸ್ಕಾಟ್ಲಂಡ್ ಯಾರ್ಡ್ ತನ್ನ ವಿರುದ್ಧ ಜಾರಿಗೊಳಿಸಿದ್ದ ಗಡಿಪಾರು ವಾರಂಟ್‌ಗೆ ಸಂಬಂಧಿಸಿದಂತೆ ಜಾಮೀನು ಪಡೆದಿದ್ದಾರೆ.

 ಎಸ್ ವೈ ಎಸ್  ದ.ಕ ವೆಸ್ಟ್ ಜಿಲ್ಲೆಗೆ ನವ ಸಾರಥಿಗಳ ಆಯ್ಕೆ

ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆಗೆ ನವ ಸಾರಥಿಗಳ ಆಯ್ಕೆ


 ಎಸ್ ವೈ ಎಸ್  ದ.ಕ ವೆಸ್ಟ್ ಜಿಲ್ಲೆಗೆ ನವ ಸಾರಥಿಗಳ ಆಯ್ಕೆ

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆಯ ಮಹಾಸಭೆ ಬಿಸಿ ರೋಡ್, ಗೂಡಿನಬಳಿ ಸಮುದಾಯ ಭವನದಲ್ಲಿ ನಡೆಯಿತು.

ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅಬ್ದುಲ್ ಹಫೀಲ್ ಸ‌ಅದಿ ಕೊಳಕೇರಿ ಪುನಾರಚನೆ ಪ್ರಕ್ರಿಯೆಗೆ ನೇತೃತ್ವ ನೀಡಿದರು.

ಮುಂದಿನ ಸಾಲಿನ ಅಧ್ಯಕ್ಷರಾಗಿ ಸಿ.ಎಚ್. ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ್ಯ,ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಬೋಳಂತೂರು, ಕೋಶಾಧಿಕಾರಿಯಾಗಿ ಬಾವಾ ಫಖ್ರುದ್ದೀನ್ ಕೃಷ್ಣಾಪುರ ಉಪಾಧ್ಯಕ್ಷರಾಗಿ ಮುಹಮ್ಮದ್ ಮದನಿ‌ ಸಾಮಣಿಗೆ ಅವರನ್ನು ಆರಿಸಲಾಯಿತು.

ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಖ್ ಮದನಿ ಕಾಮಿಲ್ ಸಖಾಫಿ ಮಂಜನಾಡಿ (ಸಂಘಟನೆ)

ಮುಹಮ್ಮದ್ ಬಶೀರ್ ಮದನಿ ಕೂಳೂರು (ದ‌ಅ್‌ವಾ) ಇಸ್‌ಹಾಖ್ ಝುಹ್ರಿ ದೇರಳಕಟ್ಟೆ (ಇಸಾಬಾ) ಇಸ್ಮಾಯಿಲ್ ಬಂಟ್ವಾಳ ಕೆಎಸ್ಸಾರ್ಟಿಸಿ (ಸೋಷಿಯಲ್) ಸಲೀಂ ಅಡ್ಯಾರ್ (ಕಲ್ಚರಲ್) ಫಾರೂಖ್ ತಲಪಾಡಿ (ಮೀಡಿಯಾ)

ಕಾರ್ಯಕಾರಿ ಸದಸ್ಯರಾಗಿ ಸಯ್ಯಿದ್ ಜಲಾಲ್ ತಂಙಳ್ ಉಳ್ಳಾಲ್, ಇಸ್ಮಾಯಿಲ್ ಸ‌ಅದಿ ಉರುಮಣೆ, ಅಬ್ದುಲ್ ರಹ್ಮಾನ್ ಮದನಿ‌ ಜೆಪ್ಪು, ಮಹ್ಬೂಬ್ ಸಖಾಫಿ ಕಿನ್ಯ, ಸಿ.ಎಂ.ಅಬೂಬಕರ್ ಲತೀಫಿಎಣ್ಮೂರು ಬಶೀರ್ ಸಖಾಫಿ, ಉಳ್ಳಾಲ, ಬದ್ರುದ್ದೀನ್ ಅಝ್‌ಹರಿ ಕೈಕಂಬ, ಪಿ.ಎಚ್ ಉಸ್ಮಾನ್ ಕೆರೆಬಳಿ, ಫಾರೂಖ್ ಶೇಡಿಗುರಿ, ನಝೀರ್ ಅಹ್ಮದ್ ಮುಡಿಪು, ಹನೀಫ್ ಹಾಜಿ ಬಜಪೆ, ಅಬ್ದುಲ್‌ ಮಜೀದ್ ಫರೀದ್ ನಗರ, ಬಶೀರ್ ಗಾಣೆಮಾರ್, ಖಾಲಿದ್ ಹಾಜಿ ಭಟ್ಕಲ್, ಮುತ್ತಲಿಬ್ ಹಾಜಿ ನಾರ್ಶ, ಅಬ್ದುಲ್‌ ಜಬ್ಬಾರ್ ಕಣ್ಣೂರು, ಬಿ.ಎಚ್.ಇಸ್ಮಾಯಿಲ್ ಕೆಸಿರೋಡ್, ಎಂಕೆಎಂ ಇಸ್ಮಾಯಿಲ್ ಕಿನ್ಯ, ಎಸ್.ಎಂ.ಬಶೀರ್ ಹಾಜಿ ಮಿತ್ತಬೈಲು, ಬಶೀರ್ ಮುಡಿಪು, ಇಸ್ಮಾಯಿಲ್ ಮುಸ್ಲಿಯಾರ್ ಲುಖ್‌ಮಾನಿಯಾ, ಕೆ.ಎಂ.ಕೆ.ಮಂಜನಾಡಿ, ಎನ್.ಎಸ್ಉಮರ್ ಮಾಸ್ಟರ್ ಕೆಸಿ ರೋಡ್, ಸಲೀಲ್ ಹಾಜಿ ಬಜಪೆ, ಅಶ್ರಫ್ ಮುಸ್ಲಿಯಾರ್ ಹರೇಕಳ, ಮುಹಮ್ಮದ್ ಹಾಜಿ ಖಂಡಿಗ ಇವರನ್ನು ಆರಿಸಲಾಯಿತು.

ಸಮಾರಂಭದಲ್ಲಿ ಅಶ್‌ಅರಿಯಾ ಸಖಾಫಿ ಅಧ್ಯಕ್ಷತೆ ವಹಿಸಿದರು, ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸ‌ಅದಿ ಪಟ್ಟೋರಿ ಉದ್ಘಾಟಿಸಿದರು.

ಸುನ್ನೀ ಕೋಆರ್ಡಿನೇಶನ್ ಕಮಿಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ, ರಾಜ್ಯ ಎಸ್.ವೈ.ಎಸ್.ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಭಾಷಣ ಮಾಡಿದರು.

ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿ ಕೊನೆಗೆ ಧನ್ಯವಾದ ಸಲ್ಲಿಸಿದರು.

 ಪದ್ಮನಾಭ ತೀರ್ಥರ ಆರಾಧನಾ ಮಹೋತ್ಸವ ವಿವಾದ: ಮಂತ್ರಾಲಯ, ಉತ್ತರಾದಿ ಮಠಗಳ ವಿರುದ್ಧ ಹೈಕೋರ್ಟ್ ಅಸಮಾಧಾನ

ಪದ್ಮನಾಭ ತೀರ್ಥರ ಆರಾಧನಾ ಮಹೋತ್ಸವ ವಿವಾದ: ಮಂತ್ರಾಲಯ, ಉತ್ತರಾದಿ ಮಠಗಳ ವಿರುದ್ಧ ಹೈಕೋರ್ಟ್ ಅಸಮಾಧಾನ

 ಪದ್ಮನಾಭ ತೀರ್ಥರ ಆರಾಧನಾ ಮಹೋತ್ಸವ ವಿವಾದ: ಮಂತ್ರಾಲಯ, ಉತ್ತರಾದಿ ಮಠಗಳ ವಿರುದ್ಧ ಹೈಕೋರ್ಟ್ ಅಸಮಾಧಾನ

ಬೆಂಗಳೂರು: ಪೂಜೆ, ಆರಾಧನೆ ನಡೆಸುವ ಕುರಿತು ಪ್ರತಿಬಾರಿಯೂ ನ್ಯಾಯಾಲಯವೇ ತೀರ್ಮಾನಿಸಬೇಕು ಎಂಬಂತೆ ವರ್ತಿಸುತ್ತಿದ್ದೀರಿ. ನೀವು ಮಠ ನಡೆಸುತ್ತಿದ್ದೀರೋ ಅಥವಾ ಕಾಲೇಜನ್ನೋ ಎಂದು ಹೈಕೋರ್ಟ್ ಪೀಠವು ಮಂತ್ರಾಲಯ ಹಾಗೂ ಉತ್ತರಾದಿ ಮಠಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.

ಕೊಪ್ಪಳದ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ 2021ರ ಡಿ.2ರಿಂದ ಆರಂಭವಾಗಲಿರುವ ಪದ್ಮನಾಭ ತೀರ್ಥರ 697ನೆ ಆರಾಧನಾ ಮಹೋತ್ಸವವನ್ನು ಯಾರು ನಡೆಸಬೇಕೆಂಬ ಕುರಿತು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಹಾಗೂ ಉತ್ತರಾದಿ ಮಠಗಳ ನಡುವೆ ಏರ್ಪಟ್ಟಿರುವ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಅಸಮಾಧಾನ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ ಎರಡೂ ಮಠಗಳ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠ, ಎರಡೂ ಮಠಗಳಿಗೆ ಅತಿ ದೊಡ್ಡ ಪರಂಪರೆ ಇದೆ. ಆದರೆ, ಇಬ್ಬರೂ ಪ್ರತಿಬಾರಿ ಕೋರ್ಟ್ ಆದೇಶ ಪಡೆದೇ ಆರಾಧನೆ ಮಾಡುವುದನ್ನು ನೋಡಿದರೆ ನೀವು ಮಠ ನಡೆಸುತ್ತಿದ್ದೀರೊ ಅಥವಾ ಕಾಲೇಜು ನಡೆಸುತ್ತಿದ್ದೀರೊ ಎಂಬ ಅನುಮಾನ ಮೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. 

ಈ ವ್ಯಾಜ್ಯವನ್ನು ಮಠಗಳು ಮುಂದುವರಿಸಿಕೊಂಡು ಹೋಗುವುದೂ ಸರಿಯಲ್ಲ. ಆದಷ್ಟು ಬೇಗ ಎರಡೂ ಬಣಗಳ ವ್ಯವಸ್ಥಾಪನಾ ಮಂಡಳಿಯವರು ಒಟ್ಟಿಗೆ ಕುಳಿತು ವಿವಾದ ಬಗೆಹರಿಸಿಕೊಳ್ಳಿ. ಬೇಕಿದ್ದರೆ ಇಲ್ಲೇ ಕೋರ್ಟ್ ಆವರಣದ ಯಾವುದಾದರೂ ಮರದ ಕೆಳಗೆ ಕುಳಿತು ಮಾತನಾಡಿ ಎಂದು ತಾಕೀತು ಮಾಡಿತು.

ಅಲ್ಲದೇ, ಸಂವಿಧಾನದ 226ನೇ ವಿಧಿಯನ್ನು ಈ ನೆಲದ ಶೋಷಿತ ವರ್ಗಗಳು ಉಪಯೋಗಿಸಬೇಕೆ ಹೊರತು ನಿಮ್ಮಂತಹವರ ಈ ರೀತಿಯ ವ್ಯಾಜ್ಯಗಳಿಗಲ್ಲ ಎಂದಿತು. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್, ಮೊದಲ ಪೂಜೆಯನ್ನು ಉತ್ತರಾದಿ ಮಠದವರು ನಡೆಸಬೇಕು ಮತ್ತು ಉತ್ತರಾರ್ಧದ ಪೂಜೆಯನ್ನು ರಾಘವೇಂದ್ರಸ್ವಾಮಿ ಮಠದವರು ನಡೆಸಬೇಕು ಎಂದು ತಿಳಿಸಿತು.

2021ರ ಡಿಸೆಂಬರ್ 2ರಿಂದ ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ ಪದ್ಮನಾಭ ತೀರ್ಥರ 697ನೇ ಆರಾಧನಾ ಮಹೋತ್ಸವ ನಡೆಯಲಿದೆ. ಪದ್ಮನಾಭ ತೀರ್ಥರು ಮಧ್ವಾಚಾರ್ಯರ ಮೊದಲನೇ ಶಿಷ್ಯರಾಗಿದ್ದು ಅವರ ಆರಾಧನೆ ಡಿಸೆಂಬರ್ 2ರಿಂದ ಮೂರು ದಿನಗಳ ಕಾಲ ನಡೆಯಲಿದೆ. 

 ಉಪ್ಪಿನಂಗಡಿ: ರಿಕ್ಷಾಕ್ಕೆ ಲಾರಿ ಢಿಕ್ಕಿ; ಗಾಯಾಳು ಮಹಿಳೆ ಮೃತ್ಯು

ಉಪ್ಪಿನಂಗಡಿ: ರಿಕ್ಷಾಕ್ಕೆ ಲಾರಿ ಢಿಕ್ಕಿ; ಗಾಯಾಳು ಮಹಿಳೆ ಮೃತ್ಯು


 ಉಪ್ಪಿನಂಗಡಿ: ರಿಕ್ಷಾಕ್ಕೆ ಲಾರಿ ಢಿಕ್ಕಿ; ಗಾಯಾಳು ಮಹಿಳೆ ಮೃತ್ಯು

ಉಪ್ಪಿನಂಗಡಿ: ಇಲ್ಲಿನ ಮಠ ಎಂಬಲ್ಲಿ ಸೋಮವಾರ ಸಂಜೆ ಲಾರಿಯೊಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಖತೀಜಮ್ಮ (46) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ತನ್ನಿಬ್ಬರು ಮಕ್ಕಳೊಂದಿಗೆ ತವರು ಮನೆಯಿಂದ ಮಠ ಬಳಿಯ ಹಿರ್ತಡ್ಕದ ತನ್ನ ಮನೆಗೆ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಲಾರಿ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ರಿಕ್ಷಾಕ್ಕೆ ಢಿಕ್ಕಿ ಹೊಡೆದಿತ್ತು. ಈ ಸಂದರ್ಭ ಅಟೋ ರಿಕ್ಷಾದಲ್ಲಿದ್ದ  ಟಿ. ಮೊಹಮ್ಮದ್  ಅಲ್ತಾಫ್ (12) ಮೃತಪಟ್ಟಿದ್ದು, ರಿಕ್ಷಾದಲ್ಲಿದ್ದ ಈತನ ತಾಯಿ ಖತೀಜಮ್ಮ (46)  ಅಣ್ಣ  ಮೊಹಮ್ಮದ್ ಅಸ್ರಾರ್ (23) ಮತ್ತು ರಿಕ್ಷಾ ಚಾಲಕ ಹಿರ್ತಡ್ಕ ನಿವಾಸಿ ಸಿದ್ದೀಕ್ (34) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ತಲೆಗೆ  ಗಂಭೀರ ಸ್ವರೂಪದ ಗಾಯವಾಗಿದ್ದ ಖತಿಜಮ್ಮ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ  ಫಲಿಸದೇ ಮಂಗಳವಾರ ಮೃತಪಟ್ಟಿದ್ದಾರೆ.

 ರಾಷ್ಟ್ರವ್ಯಾಪಿ ಎನ್.ಆರ್.ಸಿ ಕುರಿತು ಇಲ್ಲಿಯವರೆಗೆ ಯಾವುದೇ ನಿರ್ಧಾರವಿಲ್ಲ: ಲೋಕಸಭೆಗೆ ತಿಳಿಸಿದ ಕೇಂದ್ರ

ರಾಷ್ಟ್ರವ್ಯಾಪಿ ಎನ್.ಆರ್.ಸಿ ಕುರಿತು ಇಲ್ಲಿಯವರೆಗೆ ಯಾವುದೇ ನಿರ್ಧಾರವಿಲ್ಲ: ಲೋಕಸಭೆಗೆ ತಿಳಿಸಿದ ಕೇಂದ್ರ


 ರಾಷ್ಟ್ರವ್ಯಾಪಿ ಎನ್.ಆರ್.ಸಿ ಕುರಿತು ಇಲ್ಲಿಯವರೆಗೆ ಯಾವುದೇ ನಿರ್ಧಾರವಿಲ್ಲ: ಲೋಕಸಭೆಗೆ ತಿಳಿಸಿದ ಕೇಂದ್ರ

ಹೊಸದಿಲ್ಲಿ: ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು(ಎನ್ ಆರ್ ಸಿ) ಸಿದ್ಧಪಡಿಸುವ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ ಎಂದು Live Law.in ವರದಿ ಮಾಡಿದೆ.

"ಇದುವರೆಗೆ ರಾಷ್ಟ್ರೀಯ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಸಿದ್ಧಪಡಿಸಲು ಸರಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ" ಎಂದು ರಾಜ್ಯ ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಲೋಕಸಭೆ ಸಂಸದ ಹೈಬಿ ಈಡನ್ ಅವರಿಗೆ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ  ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನವನ್ನು ಸರಕಾರ ಪರಿಗಣಿಸುತ್ತಿದೆಯೇ ಎಂದು ಈಡನ್ ಕೇಳಿದ್ದರು.

ಪೌರತ್ವ (ತಿದ್ದುಪಡಿ) ಕಾಯಿದೆ, 2019 (ಸಿಎಎ) ಅನ್ನು ಡಿಸೆಂಬರ್ 12, 2019 ರಂದು ಅಧಿಸೂಚನೆ ನೀಡಲಾಗಿದ್ದು ಮತ್ತು ಜನವರಿ 10, 2020 ರಂದು ಜಾರಿಗೆ ಬಂದಿದೆ ಹಾಗೂ  ನಿಯಮಗಳನ್ನು ಸೂಚಿಸಿದ ನಂತರ ಸಿಎಎ ವ್ಯಾಪ್ತಿಗೆ ಒಳಪಡುವ ಜನರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.

 ಸೋಮವಾರಪೇಟೆ: ವಿದ್ಯಾರ್ಥಿಗಳ ಮೇಲೆ ನಾಯಿ ದಾಳಿ; ಆಸ್ಪತ್ರೆಗೆ ದಾಖಲು

ಸೋಮವಾರಪೇಟೆ: ವಿದ್ಯಾರ್ಥಿಗಳ ಮೇಲೆ ನಾಯಿ ದಾಳಿ; ಆಸ್ಪತ್ರೆಗೆ ದಾಖಲು

 ಸೋಮವಾರಪೇಟೆ: ವಿದ್ಯಾರ್ಥಿಗಳ ಮೇಲೆ ನಾಯಿ ದಾಳಿ; ಆಸ್ಪತ್ರೆಗೆ ದಾಖಲು

ಮಡಿಕೇರಿ : ಶಾಲಾ ವಿದ್ಯಾರ್ಥಿಗಳ ಮೇಲೆ ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಪುಟಾಣಿಗಳಿಬ್ಬರು ಆಸ್ಪತ್ರೆ ಸೇರಿದ ಘಟನೆ ಸೋಮವಾರಪೇಟೆ ಪಟ್ಟಣದಲ್ಲಿ ನಡೆದಿದೆ.

ಇಂದು ಬೆಳಗ್ಗೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಆವರಣದಲ್ಲಿ  ಪ್ರಾರ್ಥನೆಗೆ ಸಜ್ಜಾಗುತ್ತಿದ್ದ ವೇಳೆ ನಾಯಿಯೊಂದು ಏಕಾಏಕಿ ಮಕ್ಕಳ ಮೇಲೆ ದಾಳಿ ನಡೆಸಿ ಸಿಕ್ಕಿದವರನ್ನು ಕಚ್ಚ ಲಾರಂಭಿಸಿತು. ಈ ಅನಿರೀಕ್ಷಿತ ಘಟನೆಯಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಸಿಕ್ಕ ಸಿಕ್ಕ ಕಡೆ ಒಡಲಾರಂಭಿಸಿದರು.

ಆದರೂ ಬಿಡದ ನಾಯಿ ಮೂರನೇ ತರಗತಿಯಕಿಶನ್ ಹಾಗೂ ಒಂದನೇ ತರಗತಿಯ ಧ್ವನಿ ಎಂಬ ವಿದ್ಯಾರ್ಥಿಗಳ ಕಾಲು ಮತ್ತು ತೊಡೆಯ ಭಾಗಕ್ಕೆ ಕಚ್ಚಿದೆ ಎಂದು ತಿಳಿದು ಬಂದಿದೆ.

ನಾಯಿದಾಳಿಗೆ ಸಿಲುಕಿದ ಮಕ್ಕಳನ್ನು ರಕ್ಷಿಸಲು ಶಿಕ್ಷಕಿಯರು ಹರಸಾಹಸ ಪಡಬೇಕಾಯಿತು. ಗಾಯಗೊಂಡ  ಪುಟಾಣಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ಬಗ್ಗೆ ಶಾಲಾ ಮುಕ್ಯೋಪಾಧ್ಯಾಯಿನಿ       ಮಿಲ್ಡ್ರೆಡ್ ಗೊನ್ಸಾಲ್ವೆಸ್ ಪೊಲೀಸ್ ಹಾಗೂ ಪಟ್ಟಣ ಪಂಚಾಯ್ತಿಗೆ ದೂರು ನೀಡಿದ್ದಾರೆ.

ಇದೇ ನಾಯಿ ಇಂದು ಬೆಳಗ್ಗೆ ಕಕ್ಕೆಹೊಳೆ ಸಮೀಪ ಇಬ್ಬರಿಗೆ ಹಾಗೂ ಸರ್ಕಾರಿ ಪದವಿಪೂರ್ವಕಾಲೇಜು ಸಮೀಪ ಇಬ್ವರಿಗೆ ಸೇರಿದಂತೆ ಒಟ್ಟು ಆರು ಮಂದಿಗೆ ಕಚ್ಚಿದೆ. ನಾಲ್ಕೈದು ನಾಯಿಗಳ ಮೇಲೂ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ.

ಪಟ್ಟಣ ಪಂಚಾಯತ್ ಅಧ್ಯಕ್ಷ ಚಂದ್ರು, ಸದಸ್ಯರಾದ ಶೀಲಾ ಡಿಸೋಜ, ಮಹೇಶ್ ಹಾಗೂ ಎಸ್.ಮಹೇಶ್ ಮುಖ್ಯಾಧಿಕಾರಿ ನಾಚಪ್ಪ ಆಸ್ಪತ್ರೆಗೆ ತೆರಳಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.

ಪಟ್ಟಣದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದರು. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

 ಸ್ನೇಹಿತರೆಲ್ಲಾ ಒಳ್ಳೆಯವರಾಗಿರಲಿ, ಎಸ್.ವೈ.ಎಸ್ ಮೀನಾವು  ಎನರ್ಜೀ ಮೀಟ್

ಸ್ನೇಹಿತರೆಲ್ಲಾ ಒಳ್ಳೆಯವರಾಗಿರಲಿ, ಎಸ್.ವೈ.ಎಸ್ ಮೀನಾವು ಎನರ್ಜೀ ಮೀಟ್


 ಸ್ನೇಹಿತರೆಲ್ಲಾ ಒಳ್ಳೆಯವರಾಗಿರಲಿ: ಎಸ್.ವೈ.ಎಸ್ ಮೀನಾವು  ಎನರ್ಜೀ ಮೀಟ್

ಮೀನಾವು: ಎಸ್.ವೈ.ಎಸ್ ಮೀನಾವು ಬ್ರಾಂಚ್ ಎನರ್ಜಿ ಮೀಟ್-21 ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ 2021 ನವಂಬರ್ 28 ರಂದು ಆದಿತ್ಯವಾರ  ಸಂಜೆ 5:00ಕ್ಕೆ ಜಿಸ್ತಿಯಾ ಸೆoಟರ್ನಲ್ಲಿ ನಡೆಯಿತು.

ಎಸ್.ವೈ.ಎಸ್ ಜಿಲ್ಲಾ ಕಾರ್ಯಕಾರಿ ಸದಸ್ಯರಾದ ಅಬ್ದುಲ್ ಅಝೀಝ್ ಮಿಸ್ಬಾಯಿ ಉಸ್ತಾದರು ಸಂಘಟನಾ ಪ್ರಮುಖ್ಯತೆಯ ಬಗ್ಗೆ ತರಗತಿ ನಡೆಸಿಕೊಟ್ಟರು. ಬ್ರಾಂಚ್  ಉಸ್ತುವಾರಿ ಸಿ.ಎಂ ಅಬೂಬಕ್ಕರ್ ರವರ ನೇತೃತ್ವದಲ್ಲಿ ಈಶ್ವರ ಮಂಗಲ ಸೆಂಟರ್ ಪ್ರ ಕಾರ್ಯದರ್ಶಿಯಾದ ಹಮೀದ್ ಕೊಯಿಲ ರವರು ಸಂಘಟನಾ ಕಡತಗಳನ್ನು ಪರಿಶೀಲಿಸಿ ನೂತನ ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಅಶ್ರಫ್ ಸಖಾಫಿ ಯವರು ಶುಭ ಹಾರೈಸಿದರು. ಎಸ್.ವೈ.ಎಸ್ ಸೆಂಟರ್ ವೈಸ್.ಪ್ರೆಸಿಡೆಂಟ್ ಇಸ್ಮಾಯಿಲ್ ಕೆಎಚ್ ಹಾಗೂ ಎಸ್.ವೈ.ಎಸ್, ಬ್ರಾಂಚ್ ಸೆಕ್ರೆಟರಿ ಹನೀಪ್, ಇಸಾಬ ಸೆಕ್ರೆಟರಿ ಮುಹಮ್ಮದ್ ಮೀನಾವು, ಮುಹಮ್ಮದ್  ಗಟ್ಟಮನೆ,ಅಬ್ದುಲ್ಲಾ.ಎ, ಹಮೀದ್ ದೇಲಂಪಾಡಿ, ಮುಹಮ್ಮದ್ ಮರಕ್ಕನಿ,ಕೆ.ಸಿ.ಎಫ್ ಕಾರ್ಯಕರ್ತ ಅಬ್ದುರ್ರಹ್ಮಾನ್ ಮೊದಲಾವರು ಪಾಲ್ಗೊಂಡಿದ್ದರು. ಶಂಸುದ್ದೀನ್ ಹನೀಫಿ ಸ್ವಾಗತಿಸಿ. ಉಮರ್ ಧನ್ಯವಾದಸಿದರು.

 ಶರ್ಜೀಲ್ ಇಮಾಮ್ ಭಾಷಣ, ಹಿಂಸಾಚಾರಕ್ಕೆ ಪ್ರಚೋದಿಸಿಲ್ಲ: ಅಲಹಾಬಾದ್ ಹೈಕೋರ್ಟ್

ಶರ್ಜೀಲ್ ಇಮಾಮ್ ಭಾಷಣ, ಹಿಂಸಾಚಾರಕ್ಕೆ ಪ್ರಚೋದಿಸಿಲ್ಲ: ಅಲಹಾಬಾದ್ ಹೈಕೋರ್ಟ್


 ಶರ್ಜೀಲ್ ಇಮಾಮ್ ಭಾಷಣ, ಹಿಂಸಾಚಾರಕ್ಕೆ ಪ್ರಚೋದಿಸಿಲ್ಲ: ಅಲಹಾಬಾದ್ ಹೈಕೋರ್ಟ್

ಹೊಸದಿಲ್ಲಿ: ದೇಶದ್ರೋಹ ಪ್ರಕರಣದಲ್ಲಿ ಶರ್ಜೀಲ್ ಇಮಾಮ್ ಗೆ ಕಳೆದ ವಾರ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್, ಇಮಾಮ್ ಅವರ ಭಾಷಣವು ಯಾರಿಗೂ ಶಸ್ತ್ರಾಸ್ತ್ರಗಳನ್ನು ಹೊಂದಲು ಕರೆ ನೀಡಿಲ್ಲ ಅಥವಾ ಅವರು ಯಾವುದೇ ಹಿಂಸಾಚಾರವನ್ನು ಪ್ರಚೋದಿಸಿಲ್ಲ ಎಂದು ತನ್ನ ತೀರ್ಪಿನಲ್ಲಿ  ಹೇಳಿದೆ.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸಿಎಎ-ಎನ್ ಆರ್ ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ 'ದೇಶ ವಿರೋಧಿ ಭಾಷಣ' ಮಾಡಿದ ಆರೋಪದ ಮೇಲೆ ಕಳೆದ ವರ್ಷ ಅಲಿಘರ್ ನಲ್ಲಿ ಅವರ ವಿರುದ್ಧ ತ್ವರಿತ ಪ್ರಕರಣವನ್ನು ದಾಖಲಿಸಲಾಗಿದೆ ಎಂಬುದನ್ನು ಗಮನಿಸಬಹುದು.

ಮುಖ್ಯವಾಗಿ, ಈ ತಪ್ಪಿಗೆ ಅವರು ಅನುಭವಿಸಬಹುದಾದ ಗರಿಷ್ಠ ಶಿಕ್ಷೆ ಮೂರು ವರ್ಷಗಳಿಗೆ ವಿರುದ್ಧವಾಗಿ ಅವರು 1 ವರ್ಷ ಹಾಗೂ ಎರಡು ತಿಂಗಳುಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದರು ಎಂದು ಗಮನಿಸಿದ ನ್ಯಾಯಮೂರ್ತಿ ಸೌಮಿತ್ರ ದಯಾಳ್ ಸಿಂಗ್ ಅವರ ಪೀಠವು ರೂ. 50 ಸಾವಿರ  ವೈಯಕ್ತಿಕ ಬಾಂಡ್ ಅನ್ನು ಒದಗಿಸಿದ ಮೇಲೆ ಅವರಿಗೆ ಜಾಮೀನು ನೀಡಿದೆ.

 ಎಸ್.ವೈ.ಎಸ್ ಬಡಗನ್ನೂರು ಬ್ರಾಂಚ್ ಎನರ್ಜೀಮೀಟ್

ಎಸ್.ವೈ.ಎಸ್ ಬಡಗನ್ನೂರು ಬ್ರಾಂಚ್ ಎನರ್ಜೀಮೀಟ್


 ಎಸ್.ವೈ.ಎಸ್ ಬಡಗನ್ನೂರು ಬ್ರಾಂಚ್ ಎನರ್ಜೀಮೀಟ್

ಬಡಗನ್ನೂರು: ಎಸ್.ವೈ.ಎಸ್ ಬಡಗನ್ನೂರು ಬ್ರಾಂಚ್ ಎನರ್ಜಿ ಮೀಟ್-21 ಸಮಿತಿ ಅಧ್ಯಕ್ಷರಾದ ತ್ವಾಹ ಝೈನಿಯವರ ಅಧ್ಯಕ್ಷತೆಯಲ್ಲಿ 2021 ನವಂಬರ್ 27 ರಂದು ಶನಿವಾರ  ರಾತ್ರಿ 8:30ಕ್ಕೆ ಶರೀಫ್ ಪಿ ಎಚ್ ರವರ ಮನೆಯಲ್ಲಿ ನಡೆಯಿತು.

ಎಸ್.ವೈ.ಎಸ್ ಜಿಲ್ಲಾ ಕಾರ್ಯಕಾರಿ ಸದಸ್ಯರಾದ  ಅಬ್ದುಲ್ ಅಝೀಝ್ ಮಿಸ್ಬಾಯಿ ಉಸ್ತಾದರು ಸಂಘಟನಾ ಪ್ರಮುಖ್ಯತೆಯ ಬಗ್ಗೆ ತರಗತಿ ನಡೆಸಿಕೊಟ್ಟರು. ಈಶ್ವರ ಮಂಗಲ ಸೆಂಟರ್ ಪ್ರ.ಕಾರ್ಯದರ್ಶಿಯಾದ ಹಮೀದ್ ಕೊಯಿಲ ರವರು ಸಂಘಟನಾ ಕಡತಗಳನ್ನು ಪರಿಶೀಲಿಸಿ ನೂತನ ಪುಸ್ತಕಗಳನ್ನು ವಿತರಿಸಿದರು. ಪುತ್ತೂರು ಸೆಂಟರ್ ಪ್ರ ಕಾರ್ಯದರ್ಶಿಯಾದ ಅಬೂಬಕ್ಕರ್ ನೆರಿಮೊಗರ್ ಹಾಗೂ.KCF ಕುವೈತ್ ಪಾಯಿಲ್ ಸೆಕ್ಟರ್ ಕೋಶಾಧಿಕಾರಿಯಾದ ಅಸೀಫ್ ಪುತ್ತೂರು ರವರು ಅಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್.ವೈ.ಎಸ್, ಎಸ್ಎಸ್ಎಫ್ ನಾಯಕರಾದ ಸೈಯದ್ ಎ.ಕೆ.ತಂಙಳ್, ರಫೀಕ್ ಕಾವುಂಜ, ಅದಂಕುಂಞಿ, ಮಹಮ್ಮದ್ ಪಿ.ಎಚ್,ಲತೀಫ್ ಪಿ.ಎಚ್,ಶೀಯಾಬ್ ಕೊಯಿಲ,ಉಸ್ಮಾನ್, ಅಬೂಬಕ್ಕರ್ ಡೆಂಬಳೆ, ಸವಾದ್, ಮಹಮ್ಮದ್ ಮೆಣಸಿನಕಾನ, ಜೌಹರ್, ಸಿಯಾದ್, ಇಬ್ರಾಹಿಂ, ಮೊದಲಾವರು ಪಾಲ್ಗೊಂಡಿದ್ದರು. ಅಬೂಬಕ್ಕರ್ ಲತೀಫಿ ಸಅದಿ ಸ್ವಾಗತಿಸಿ. ಧನ್ಯವಾದಿಸಿದರು.

Monday, 29 November 2021

ನಂದಿಗಿರಿಧಾಮಕ್ಕೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್ : ನಾಳೆಯಿಂದ ನಂದಿ ಹಿಲ್ಸ್ ಪ್ರವೇಶಕ್ಕೆ ಅವಕಾಶ

ನಂದಿಗಿರಿಧಾಮಕ್ಕೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್ : ನಾಳೆಯಿಂದ ನಂದಿ ಹಿಲ್ಸ್ ಪ್ರವೇಶಕ್ಕೆ ಅವಕಾಶ

ನಂದಿಗಿರಿಧಾಮಕ್ಕೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್ : ನಾಳೆಯಿಂದ ನಂದಿ ಹಿಲ್ಸ್ ಪ್ರವೇಶಕ್ಕೆ ಅವಕಾಶ

ಚಿಕ್ಕಬಳ್ಳಾಪುರ : ನಂದಿ ಗಿರಿಧಾಮ ಪ್ರವಾಸಕ್ಕೆ ಹೋಗುವವರಿಗೆ ಸಿಹಿಸುದ್ದಿ ಸಿಕ್ಕಿದ್ದು, ಡಿಸೆಂಬರ್ 1 ರ ನಾಳೆಯಿಂದ ನಂದಿ ಗಿರಿಧಾಮ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್ ಅವರು, ರಸ್ತೆ ಕೊಚ್ಚಿ ಹೋಗಿ ಬಂದ್ ಆಗಿದ್ದ ನಂದಿಗಿರಿಧಾಮ ಪ್ರವೇಶಕ್ಕೆ ಇದೀಗ ಅವಕಾಶ ಸಿಕ್ಕಿದೆ.

ನಾಳೆಯಿಂದ ನಂದಿ ಬೆಟ್ಟಕ್ಕೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಶನಿವಾರ ಮತ್ತು ಭಾನುವಾರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಬೆಟ್ಟದಲ್ಲಿ ಹೋಟೆಲ್, ರೂಮ್​ಗಳ ಬುಕಿಂಗ್ ಮಾಡಿದವರಿಗೆ ಮಾತ್ರ ಶನಿವಾರ ಭಾನುವಾರ ಅವಕಾಶ ಇದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.


 

ನಂದಿಗಿರಿಧಾಮಕ್ಕೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್ : ನಾಳೆಯಿಂದ ನಂದಿ ಹಿಲ್ಸ್ ಪ್ರವೇಶಕ್ಕೆ ಅವಕಾಶ|

ನಂದಿಗಿರಿಧಾಮಕ್ಕೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್ : ನಾಳೆಯಿಂದ ನಂದಿ ಹಿಲ್ಸ್ ಪ್ರವೇಶಕ್ಕೆ ಅವಕಾಶ|

ನಂದಿಗಿರಿಧಾಮಕ್ಕೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್ : ನಾಳೆಯಿಂದ ನಂದಿ ಹಿಲ್ಸ್ ಪ್ರವೇಶಕ್ಕೆ ಅವಕಾಶ|

ಚಿಕ್ಕಬಳ್ಳಾಪುರ : ನಂದಿ ಗಿರಿಧಾಮ ಪ್ರವಾಸಕ್ಕೆ ಹೋಗುವವರಿಗೆ ಸಿಹಿಸುದ್ದಿ ಸಿಕ್ಕಿದ್ದು, ಡಿಸೆಂಬರ್ 1 ರ ನಾಳೆಯಿಂದ ನಂದಿ ಗಿರಿಧಾಮ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್ ಅವರು, ರಸ್ತೆ ಕೊಚ್ಚಿ ಹೋಗಿ ಬಂದ್ ಆಗಿದ್ದ ನಂದಿಗಿರಿಧಾಮ ಪ್ರವೇಶಕ್ಕೆ ಇದೀಗ ಅವಕಾಶ ಸಿಕ್ಕಿದೆ.

ನಾಳೆಯಿಂದ ನಂದಿ ಬೆಟ್ಟಕ್ಕೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಶನಿವಾರ ಮತ್ತು ಭಾನುವಾರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಬೆಟ್ಟದಲ್ಲಿ ಹೋಟೆಲ್, ರೂಮ್​ಗಳ ಬುಕಿಂಗ್ ಮಾಡಿದವರಿಗೆ ಮಾತ್ರ ಶನಿವಾರ ಭಾನುವಾರ ಅವಕಾಶ ಇದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಕೋವಿಡ್ ಹೊಸ ತಳಿ ಯಾವ ರೀತಿರ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ನಮ್ಮದೇ ಆದ ಗಮನಿಸುವಿಕೆ ನಿಭಾಯಿಸುವಿಕೆ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕೋವಿಡ್ ಹೊಸ ತಳಿ ತೀವ್ರತೆ ಹಾಗೂ ಅದರ ಪರಿಣಾಮ ಯಾವ ರೀತಿ ಆಗುತ್ತಿದೆ ಎನ್ನುವುದನ್ನು ನಾವು ಗಮನಿಸುತ್ತಿದ್ದೇವೆ.

ಸೂಕ್ತ ರೀತಿಯಲ್ಲಿ ಅದನ್ನು ನಿಭಾಯಿಸುತ್ತಿದ್ದೇವೆ. ಜನರು ಕೋವಿಡ್ ನಿಯಮವನ್ನು ತಪ್ಪದೇ ಪಾಲಿಸಿ ಎಂದರು.

ವಿದೇಶದಿಂದ ಬಂದವರ ಬಗ್ಗೆ ನಿಗಾ ಇಡುತ್ತಿದ್ದೇವೆ. ಈಗಾಗಲೇ ಎಸ್ ಡಿ ಎಂ ನಲ್ಲಿ ನಾಲ್ಕು ಸಾವಿರ ಜನರಿಗೆ ಟೆಸ್ಟ್ ಮಾಡಲಾಗುತ್ತಿದೆ.ಎಲ್ಲೆಲ್ಲಿ ಕ್ಲಸ್ಟರ್ ಆಗುತ್ತಿದ್ದೇವೆಯೋ ದೆ ಅಲ್ಲೆಲ್ಲ ಪರೀಕ್ಷೆ ಮಾಡಲಾಗುತ್ತದೆ. ಸಚಿವರು ಸಭೆ ಮಾಡುತ್ತಾರೆ ಅದರ ಔಟ್ ಕಮ್ ನೋಡುತ್ತೇವೆ. ಲಾಕ್ ಡೌನ್ ವಿಚಾರ ಕೇವಲ ಊಹಾಪೋಹಗಳು. ಆ ಪ್ರಶ್ನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.


7ನೇ ಬಾರಿಗೆ ಲಿಯೊನೆಲ್ ಮೆಸ್ಸಿಗೆ ಬ್ಯಾಲನ್ ಡಿಓರ್ ಪ್ರಶಸ್ತಿ

7ನೇ ಬಾರಿಗೆ ಲಿಯೊನೆಲ್ ಮೆಸ್ಸಿಗೆ ಬ್ಯಾಲನ್ ಡಿಓರ್ ಪ್ರಶಸ್ತಿ


7ನೇ ಬಾರಿಗೆ ಲಿಯೊನೆಲ್ ಮೆಸ್ಸಿಗೆ ಬ್ಯಾಲನ್ ಡಿಓರ್ ಪ್ರಶಸ್ತಿ

ಪ್ಯಾರೀಸ್: ಖ್ಯಾತ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ದಾಖಲೆ ಏಳನೇ ಬಾರಿಗೆ ಪುರುಷರ ವಿಭಾಗದ ಬ್ಯಾಲನ್ ಡಿ ಓರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಮಹಿಳೆಯರ ವಿಭಾಗದ ಪ್ರಶಸ್ತಿ ಅಲೆಕ್ಸಿಯಾ ಪುಟೆಲ್ಸ್ ಅವರ ಪಾಲಾಗಿದೆ.

"ಇಂದು ನಾನು ಪ್ಯಾರೀಸ್‌ನಲ್ಲಿದ್ದೇನೆ. ನನಗೆ ಅತೀವ ಸಂತಸವಾಗಿದೆ; ನಿಜಕ್ಕೂ ಸಂತಸವಾಗಿದೆ. ನಾನು ಹೋರಾಟ ಮುಂದುವರಿಸಲಿದ್ದೇನೆ ಹಾಗೂ ಹೊಸ ಗುರಿಗಳನ್ನು ತಲುಪಲಿದ್ದೇನೆ. ಇನ್ನು ಎಷ್ಟು ವರ್ಷ ಎನ್ನುವುದು ನನಗೆ ಗೊತ್ತಿಲ್ಲ; ಆದರೂ ನಾನು ನಿಜಕ್ಕೂ ಆಸ್ವಾದಿಸುತ್ತಿದ್ದೇನೆ. ಬರ್ಕಾ, ಪ್ಯಾರೀಸ್ ಮತ್ತು ಅರ್ಜೆಂಟೀನಾ ತಂಡಗಳ ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ" ಎಂದು ಪ್ರಶಸ್ತಿ ಸ್ವೀಕರಿಸಿದ ಮೆಸ್ಸಿ ಉದ್ಗರಿಸಿದರು.

ನಾಲ್ಕು ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳ ಪೈನಲ್‌ನಲ್ಲಿ ಸೋಲು ಅನುಭವಿಸಿದ ಬಳಿಕ ಕಳೆದ ಜುಲೈನಲ್ಲಿ ಅರ್ಜೆಂಟೀನಾ ತಂಡ ಕೋಪಾ ಅಮೆರಿಕ ಪ್ರಶಸ್ತಿ ಗೆಲ್ಲುವಲ್ಲಿ 34 ವರ್ಷ ವಯಸ್ಸಿನ ಮೆಸ್ಸಿ ಪ್ರಮುಖ ಪಾತ್ರ ವಹಿಸಿದ್ದರು.

ಅದ್ಭುತ ಪ್ರದರ್ಶನಕ್ಕಾಗಿ ರಾಬರ್ಟ್ ಲಿವಾಡೊವಸ್ಕಿ ಅವರನ್ನೂ ಮೆಸ್ಸಿ ಅಭಿನಂದಿಸಿದ್ದಾರೆ. "ರಾಬರ್ಟ್ ನೀವು ಬ್ಯಾಲರ್ ಡಿ ಓರ್‌ಗೆ ಅರ್ಹರು. ಕಳೆದ ವರ್ಷ ನೀವು ಈ ದೊಡ್ಡ ಪ್ರಶಸ್ತಿಯ ವಿಜೇತರು ಎನ್ನಲು ಎಲ್ಲರ ಒಪ್ಪಿಗೆಯೂ ಇತ್ತು" ಎಂದು ಬಣ್ಣಿಸಿದ್ದಾರೆ.

27 ವರ್ಷದ ಮಿಡ್‌ಫೀಲ್ಡರ್ ಪುಟೆಲ್ಸ್ ಅವರಿಗೆ ಇದು ಮೊದಲ ಗೌರವವಾಗಿದೆ. ಬಾರ್ಕಾ ಆಟಗಾರ್ತಿ ಒಟ್ಟಾರೆ 42 ಪಂದ್ಯಗಳಲ್ಲಿ 26 ಗೋಲು ಗಳಿಸಿದ್ದರು. ಚೆಲ್ಸಿಯಾ ವಿರುದ್ಧದ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಗೋಲು ಗಳಿಸಿದ್ದ ಇವರಿಗೆ ಕಳೆದ ಆಗಸ್ಟ್‌ನಲ್ಲಿ ಯುಇಎಫ್‌ಎ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿ ಸಂದಿತ್ತು.


ಮಲೆನಾಡು, ಕರಾವಳಿಯಲ್ಲಿ ಕಟ್ಟೆಚ್ಚರ; 3 ದಿನ ವಿಪರೀತ ಮಳೆ

ಮಲೆನಾಡು, ಕರಾವಳಿಯಲ್ಲಿ ಕಟ್ಟೆಚ್ಚರ; 3 ದಿನ ವಿಪರೀತ ಮಳೆ


ಮಲೆನಾಡು, ಕರಾವಳಿಯಲ್ಲಿ ಕಟ್ಟೆಚ್ಚರ; 3 ದಿನ ವಿಪರೀತ ಮಳೆ

ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ 3ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಜರಾತ್​​ನಲ್ಲಿ ಡಿ.1 ಮತ್ತು 2ರಂದು ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಕರ್ನಾಟಕದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 3 ದಿನ ಭಾರೀ ಮಳೆಯಾಗಲಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಯಲ್ಲಿ ಇಂದು ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ತಮಿಳುನಾಡಿನಲ್ಲಿ ಮಳೆ ಹೆಚ್ಚಾಗುತ್ತಿದೆ. ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ಇಂದಿನಿಂದ ಡಿ. 2ರವರೆಗೆ ಮಳೆ ಮುಂದುವರೆಯಲಿದೆ.

ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ 3ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳು ಭಯಂಕರ ಮಳೆಗೆ ತತ್ತರಿಸಿವೆ. ಆದರೆ ಮಳೆ ನಿಲ್ಲುವ ಲಕ್ಷಣಗಳಂತೂ ಕಾಣುತ್ತಿಲ್ಲ. ಗುಜರಾತ್​​ನಲ್ಲಿ ಡಿ.1 ಮತ್ತು 2ರಂದು ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ (IMD) ತಿಳಿಸಿದೆ.

ಉತ್ತರ ಮತ್ತು ದಕ್ಷಿಣ ಗುಜರಾತ್ ಕರಾವಳಿಯಲ್ಲಿ ಇಂದಿನಿಂದ ಡಿಸೆಂಬರ್ 2 ರವರೆಗೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಅಕಾಲಿಕ ಮಳೆಯಿಂದಾಗಿ ಕಟಾವು ಹಾಗೂ ಬೆಳೆದು ನಿಂತಿರುವ ಬೆಳೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರಿಗೆ ಸೂಚಿಸಲಾಗಿದೆ. ಇಂದು ದಕ್ಷಿಣ ಗುಜರಾತ್‌ನ ಎಲ್ಲಾ ಜಿಲ್ಲೆಗಳಲ್ಲಿ ಅಹಮದಾಬಾದ್, ಆನಂದ್, ಖೇಡಾ, ಪಂಚಮಹಲ್, ದಾಹೋದ್, ಸುರೇಂದ್ರನಗರ, ರಾಜ್‌ಕೋಟ್, ಪೋರಬಂದರ್, ಜುನಾಗಢ್, ಅಮ್ರೇಲಿಯಲ್ಲಿ ಗುಡುಗು, ಮಿಂಚು ಹಾಗೂ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಇಂದು ಅಹಮದಾಬಾದ್, ಆನಂದ್​, ಖೇಡಾ, ಪಂಚಮಹಲ್​, ರಾಜ್​ಕೋಟ್​​ ಸೇರಿ ದಕ್ಷಿಣ ಗುಜರಾತ್​​ನ ಎಲ್ಲ ಜಿಲ್ಲೆಗಳಲ್ಲೂ ಗುಡುಗು-ಮಿಂಚು ಸಹಿತ ಮಧ್ಯಮ ಪ್ರಮಾಣದ ಮಳೆಯಾಗುವುದು. ಡಿಸೆಂಬರ್​ 1ರಂದು ಆನಂದ್, ಬರೂಚ್​, ನವ್​ಸರಿ, ವಲ್ಸಾದ್​ ಸೂರತ್​, ಡಂಗ್ಸ್​, ಅಮ್ರೇಲಿ, ಜುನಾಗಢ್​, ಗಿರ್​, ಸೋಮ್​ನಾಥ್​, ಬೋಟಾಡ್​ ಮತ್ತು ಭವನಗರ, ಡಾಹೋಡ್​, ಛೋಟಾಉದೇಪುರ್​, ಪಂಚಮಹಲ್​​ಗಳಲ್ಲಿ ಭರ್ಜರಿ ಮಳೆಯಾಗಲಿದೆ. ಹಾಗೇ, ಡಿಸೆಂಬರ್​ 2ರಂದು ಬನಸ್ಕಾಂತ, ಸಬರಕಾಂತ, ಅರಾವಳಿ, ಮಹಿಸಾಗರ, ಡಾಂಗ್ಸ್ ಮತ್ತು ತಾಪಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ವಿಲ್ಲುಪುರಂ, ಕಡಲೂರು, ನಾಗಪಟ್ಟಿಣಂ, ತಿರುವರೂರು, ತಂಜಾವೂರು, ಮೈಲಡುತುರೈ ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳಲ್ಲಿ ಮತ್ತು ಕಾರೈಕಲ್ ಪ್ರದೇಶದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಮತ್ತು ವಾಯುವ್ಯ ಭಾರತವು ನಡೆಯುತ್ತಿರುವ ಚಳಿಗಾಲದ ನಡುವೆ ಹೊಸ ಮಳೆಯೊಂದಿಗೆ ವರ್ಷದ ಕೊನೆಯ ತಿಂಗಳನ್ನು ಸ್ವಾಗತಿಸಲು ಸಿದ್ಧವಾಗಿದೆ.

ಲಾರಿ-ಆಟೋರಿಕ್ಷಾ ಢಿಕ್ಕಿ: ಬಾಲಕ ಮೃತ್ಯು

ಲಾರಿ-ಆಟೋರಿಕ್ಷಾ ಢಿಕ್ಕಿ: ಬಾಲಕ ಮೃತ್ಯು


ಲಾರಿ-ಆಟೋರಿಕ್ಷಾ ಢಿಕ್ಕಿ: ಬಾಲಕ ಮೃತ್ಯು

ಉಪ್ಪಿನಂಗಡಿ: ಸೋಮವಾರ ರಾಷ್ಟ್ರೀಯ ಹೆದ್ದಾರಿ 75ರ ಮಠ ಎನ್ನುವಲ್ಲಿ ಲಾರಿಯೊಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಬಾಲಕ ಮೃತಪಟ್ಟು, ರಿಕ್ಷಾ ಚಾಲಕ ಸಹಿತ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಿರ್ತಡ್ಕ ನಿವಾಸಿ ದಿ| ಅಶ್ರಫ್ ಅವರ ಪುತ್ರ, ಹಿರ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ.

ಮೊಹಮ್ಮದ್‌ ಅಲ್ತಾಫ್ (12) ಮೃತ ಬಾಲಕ. ರಿಕ್ಷಾದಲ್ಲಿದ್ದ ಆತನ ತಾಯಿ ಖತೀಜಮ್ಮ (46) ಅಣ್ಣ ಆಶಿಕ್‌ ಅಲಿಯಾಸ್‌ ಟಿ. ಮೊಹಮ್ಮದ್‌ ಅಸ್ರಾರ್‌ (23) ಮತ್ತು ಆಟೋ ರಿಕ್ಷಾ ಚಾಲಕ ಹಿರ್ತಡ್ಕ ನಿವಾಸಿ ಸಿದ್ದಿಕ್‌ (34) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖ ಲಿಸಲಾಗಿದೆ. ಗಾಯಾಳುಗಳ ಪೈಕಿ ಖತಿಜಮ್ಮ ಹಾಗೂ ಆಶಿಕ್‌ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಮೃತ ಅಲ್ತಾಫ್ನ ತಾಯಿ ಖತೀಜಮ್ಮ ಮಂಗಳೂರು ಬೆಂಗರೆ ನಿವಾಸಿ ಆಗಿದ್ದು, ಅವರು ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದವರು ಬಸ್ಸಿನಲ್ಲಿ ಬಂದು ಉಪ್ಪಿನಂಗಡಿಯಲ್ಲಿ ಬಸ್‌ನಿಂದ ಇಳಿದು ಆಟೋರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿದೆ. ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬರುತ್ತಿದ್ದ ಲಾರಿ ಇನ್ನೊಂದು ವಾಹನವನ್ನು ಹಿಂದಿಕ್ಕುವ ಯತ್ನದಲ್ಲಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನಾ ಪಿ. ಕುಮಾರ್‌, ಸಂಚಾರಿ ಸಬ್‌ ಇನ್‌ಸ್ಪೆಕ್ಟರ್‌ ರಾಮ ನಾಯ್ಕ ಮತ್ತು ಸಿಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬವನ್ನು ಕಂಗೆಡಿಸಿದ ಅಪಘಾತ

ಮೂವರು ಗಂಡು ಮಕ್ಕಳನ್ನು ಹೊಂದಿದ್ದ ಅಶ್ರಫ್ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿದ್ದವರು ಕ್ಯಾನ್ಸರ್‌ ಕಾಯಿಲೆಗೆ ಸಿಲುಕಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ ಬಳಿಕ 2 ವರ್ಷದ ಹಿಂದೆ ಸಾವನ್ನಪ್ಪಿದ್ದರು. ಖತಿಜಮ್ಮ ತನ್ನ ಮೂವರು ಮಕ್ಕಳೊಂದಿಗೆ ಸಂಬಂಧಿಕರ ಆಶ್ರಯದಲ್ಲಿ ಜೀವನ ನಡೆಸುತ್ತಿದ್ದರು.


ಭಾರತದಲ್ಲಿ ‘ಒಮಿಕ್ರಾನ್’ ಪತ್ತೆಯಾಗಿಲ್ಲ.

ಭಾರತದಲ್ಲಿ ‘ಒಮಿಕ್ರಾನ್’ ಪತ್ತೆಯಾಗಿಲ್ಲ.

ಭಾರತದಲ್ಲಿ ‘ಒಮಿಕ್ರಾನ್’ ಪತ್ತೆಯಾಗಿಲ್ಲ.

ಹೊಸದಿಲ್ಲಿ, ನ. 29: ಕೊರೋನ ವೈರಸ್‌ನ ಹೊಸ ಪ್ರಬೇಧ ಒಮಿಕ್ರಾನ್ ಭಾರತದಲ್ಲಿ ಇದುವರೆಗೆ ಪತ್ತೆಯಾಗಿಲ್ಲ ಎಂದು ಸರಕಾರದ ಹಿರಿಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಒಮಿಕ್ರಾನ್ ಕಳೆದ ವಾರ ಮೊದಲ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಯಿತು. ಇದನ್ನು ವಿಶ್ವಸಂಸ್ಥೆ ಕಳವಳಕಾರಿ ರೂಪಾಂತರ ವೈರಸ್ ಎಂದು ಹೇಳಿದೆ. ಕೊರೋನ ವೈರಸ್‌ನ ಹೊಸ ಪ್ರಬೇಧ ಒಮಿಕ್ರಾನ್ ಭಾರತದಲ್ಲಿ ಇದುವರೆಗೆ ಪತ್ತೆಯಾಗಿಲ್ಲ. ಐಎನ್‌ಎಸ್‌ಎಸಿಒಜಿ ಪರಿಸ್ಥಿತಿಯನ್ನು ಸಮೀಪದಿಂದ ಪರಿಶೀಲಿಸುತ್ತಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ಪಡೆದ ಪಾಸಿಟಿವ್ ಮಾದರಿಯ ಜೆನೋಮಿಕ್ ವಿಶ್ಲೇಷಣೆಯ ಫಲಿತಾಂಶವನ್ನು ನಿರೀಕ್ಷಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚು ಸಾಂಕ್ರಾಮಿಕವಾಗಿರುವ ಕೊರೋನ ವೈರಸ್‌ನ ಒಮಿಕ್ರಾನ್ ಪ್ರಬೇಧ ಹಲವು ದೇಶಗಳಲ್ಲಿ ಹರಡುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿರುವ ನಡುವೆ ರವಿವಾರ ಕೇಂದ್ರ ಸರಕಾರ ಒಮಿಕ್ರಾನ್‌ನ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಅಥವಾ ಅಂತಹ ರಾಷ್ಟ್ರಗಳಿಂದ ಹಾದು ಬರುವ ಪ್ರಯಾಣಿಕರಿಗೆ ಕಠಿಣ ಮಾರ್ಗಸೂಚಿಗಳನ್ನು ವಿಧಿಸಿದೆ. ಅಂತಾರಾಷ್ಟ್ರೀಯ ವಿಮಾನಗಳನ್ನು ಮರು ಆರಂಭಿಸುವ ಬಗ್ಗೆ ಪರಿಶೀಲಿಸಲು ಕೂಡ ಕೇಂದ್ರ ಸರಕಾರ ನಿರ್ಧರಿಸಿದೆ.


 ರಾಜ್ಯದ 11 ಕೆಎಎಸ್ ಅಧಿಕಾರಿಗಳಿಗೆ ಐಎಎಸ್‍ಗೆ ಭಡ್ತಿ

ರಾಜ್ಯದ 11 ಕೆಎಎಸ್ ಅಧಿಕಾರಿಗಳಿಗೆ ಐಎಎಸ್‍ಗೆ ಭಡ್ತಿ

 ರಾಜ್ಯದ 11 ಕೆಎಎಸ್ ಅಧಿಕಾರಿಗಳಿಗೆ ಐಎಎಸ್‍ಗೆ ಭಡ್ತಿ

ಬೆಂಗಳೂರು: ರಾಜ್ಯದ 11 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಅಧಿಕಾರಿಗಳನ್ನಾಗಿ ಭಡ್ತಿ ನೀಡುವಂತೆ ಸಲ್ಲಿಸಲಾಗಿದ್ದ ಶಿಫಾರಸ್ಸಿಗೆ ರಾಷ್ಟ್ರಪತಿ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಕೆಎಎಸ್ ಅಧಿಕಾರಿಗಳಾದ ಚಂದ್ರಶೇಖರ್ ಎನ್., ಬಸವರಾಜು ಎ.ಬಿ., ಶಿಲ್ಪಾ ಎಂ., ನವೀನ್ ಕುಮಾರ್ ರಾಜು ಎಸ್., ಡಾ.ಮಹೇಶ್ ಎಂ., ಸೋಮಶೇಖರ್ ಎಸ್.ಜೆ., ಡಾ.ವಾಸಂತಿ ಅಮರ್ ಬಿ.ವಿ., ಲಿಂಗಮೂರ್ತಿ ಜಿ., ರಂಗಪ್ಪ ಎಸ್., ಪ್ರಸನ್ನ ಎಚ್. ಹಾಗೂ ಇಬ್ರಾಹಿಮ್ ಮೈಗೂರ್ ಅವರಿಗೆ ಐಎಎಸ್‍ಗೆ ಭಡ್ತಿ ಲಭ್ಯವಾಗಿದೆ.

 ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ; ದ.ಕ. ಆರೋಗ್ಯ ಇಲಾಖೆಯ ಡಾ.ರತ್ನಾಕರ್‌ಗೆ ಜಾಮೀನು

ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ; ದ.ಕ. ಆರೋಗ್ಯ ಇಲಾಖೆಯ ಡಾ.ರತ್ನಾಕರ್‌ಗೆ ಜಾಮೀನು

 ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ; ದ.ಕ. ಆರೋಗ್ಯ ಇಲಾಖೆಯ ಡಾ.ರತ್ನಾಕರ್‌ಗೆ ಜಾಮೀನು

ಮಂಗಳೂರು: ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದ ದ.ಕ. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ರತ್ನಾಕರ್‌ಗೆ ಮೂರನೇ ಜೆಎಂಎಫ್‌ಸಿ ನ್ಯಾಯಾಲಯವು ಸೋಮವಾರ ಜಾಮೀನು ನೀಡಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಜಿಲ್ಲಾ ಆಯುಷ್ಮಾನ್ ನೋಡಲ್ ಅಧಿಕಾರಿ, ಕುಷ್ಠರೋಗ ನಿವಾರಣಾ ವಿಭಾಗದ ಅಧಿಕಾರಿಯೂ ಆಗಿದ್ದ ಡಾ. ರತ್ನಾಕರ್ ಕೆಲವು ತಿಂಗಳ ಹಿಂದೆ ಸರಕಾರಿ ಕಚೇರಿಯಲ್ಲೇ ಸುಮಾರು 9 ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅದರಂತೆ ಪೊಲೀಸರು ಶುಕ್ರವಾರ ಡಾ.ರತ್ನಾಕರ್‌ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರಲ್ಲದೆ, ಹೆಚ್ಚುವರಿ ವಿಚಾರಣೆಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ಕೋರಿದ್ದರು. ನ್ಯಾಯಾಲಯವು ಎರಡು ದಿನ ಆರೋಪಿ ಡಾ.ರತ್ನಾಕರ್‌ ನನ್ನು ಪೊಲೀಸ್ ಕಸ್ಟಡಿಗೆ ನೀಡಿತ್ತು. ಪೊಲೀಸ್ ಕಸ್ಟಡಿಯ ಅವಧಿಯು ಸೋಮವಾರಕ್ಕೆ ಮುಗಿದ ಕಾರಣ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆ ಬಳಿಕ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಡಾ. ರತ್ನಾಕರ್ ಕಚೇಷ್ಠೆಯ ಬಗ್ಗೆ ಬಂದ ದೂರನ್ನು ಆಧರಿಸಿ ದ.ಕ. ಜಿಲ್ಲಾಧಿಕಾರಿಯು ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಮಟ್ಟದ ದೂರು ಸಮಿತಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಸಮಿತಿಯು ನೀಡಿದ ವರದಿಯನ್ನು ಸರಕಾರಕ್ಕೂ ಸಲ್ಲಿಸಲಾಗಿತ್ತು. ಅಲ್ಲದೆ ನ.8ರಿಂದ ಅನ್ವಯವಾಗುವಂತೆ ಅಮಾನತಿನಲ್ಲಿರಿಸಲಾಗಿತ್ತು. ಆ ಬಳಿಕ ಲೈಂಗಿಕ ಕಿರುಕುಳದ ವೀಡಿಯೋ/ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲದೆ ಸಂತ್ರಸ್ತ ಯುವತಿಯರ ಪರವಾಗಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಮಹಿಳೆಯೊಬ್ಬರು ಮಹಿಳಾ ಠಾಣೆಗೆ ದೂರು ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಅದರಂತೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರೂ ಇದೀಗ ನಾಲ್ಕೇ ದಿನದಲ್ಲಿ ಜಾಮೀನು ಲಭಿಸಿದೆ.

 ನಿಯಮ ಪಾಲಿಸದ ಹಿನ್ನೆಲೆ: 12 ಆರೋಪಿಗಳ ವಿರುದ್ಧದ ಗ್ಯಾಂಬ್ಲಿಂಗ್ ಕೇಸ್ ರದ್ದುಪಡಿಸಿದ ಹೈಕೋರ್ಟ್

ನಿಯಮ ಪಾಲಿಸದ ಹಿನ್ನೆಲೆ: 12 ಆರೋಪಿಗಳ ವಿರುದ್ಧದ ಗ್ಯಾಂಬ್ಲಿಂಗ್ ಕೇಸ್ ರದ್ದುಪಡಿಸಿದ ಹೈಕೋರ್ಟ್

 ನಿಯಮ ಪಾಲಿಸದ ಹಿನ್ನೆಲೆ: 12 ಆರೋಪಿಗಳ ವಿರುದ್ಧದ ಗ್ಯಾಂಬ್ಲಿಂಗ್ ಕೇಸ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ನಿಯಮಗಳನ್ನು ಪಾಲಿಸದೇ 12 ಮಂದಿ ವಿರುದ್ಧ ಪೊಲೀಸರು ದಾಖಲಿಸಿದ್ದ ಗ್ಯಾಂಬ್ಲಿಂಗ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಶೇಷಾದ್ರಿಪುರಂ ಠಾಣೆ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 79, 80ರ ಅಡಿಯಲ್ಲಿ ದಾಖಲಿಸಿರುವ ಪ್ರಕರಣವನ್ನು ರದ್ದಪಡಿಸುವಂತೆ ಕೋರಿ ಸ್ಟ್ರೈಕರ್ ಅಸೋಸಿಯೇಷನ್ ರಿಕ್ರಿಯೇಷನ್ ಕ್ಲಬ್‍ನ ಸಿಬ್ಬಂದಿ ಹಾಗೂ ಇತರೆ 7 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. 

ಪೀಠ ತನ್ನ ಆದೇಶದಲ್ಲಿ, ಪೆÇಲೀಸರು ಸ್ಟ್ರೈಕರ್ ಅಸೋಸಿಯೇಷನ್ ರಿಕ್ರಿಯೇಷನ್ ಕ್ಲಬ್‍ನಲ್ಲಿ ಜೂಜಾಟದ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕ ನಂತರ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ಕ್ಲಬ್ ಮೇಲೆ ದಾಳಿ ನಡೆಸಿ 12,800 ನಗದು, ವಿವಿಧ ಬಣ್ಣಗಳ 120 ಟೋಕನ್‍ಗಳು, 6*4 ಡಾರ್ಟ್ ಗೇಮ್ ಬೋರ್ಡ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಗೆಯೇ, ಸ್ಥಳದಲ್ಲಿದ್ದ 7 ವ್ಯಕ್ತಿಗಳು ಹಾಗೂ 5 ಮಂದಿ ಕ್ಲಬ್ ಸಿಬ್ಬಂದಿ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 79 ಮತ್ತು 80ರ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ. ನಂತರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಆದರೆ, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಪ್ರಕರಣ ದಾಖಲಿಸಲು ಪೆÇಲೀಸರಿಗೆ ಅನುಮತಿ ನೀಡಿರುವ ಮ್ಯಾಜಿಸ್ಟ್ರೇಟ್ ಆದೇಶದ ಪ್ರತಿ ಇಲ್ಲ. 2020ರ ಮಾರ್ಚ್ 12ರಂದು ದಾಳಿ ನಡೆಸಿರುವ ಪೆÇಲೀಸರು ಎಫ್‍ಐಆರ್ ಅನ್ನು ಮಾರ್ಚ್ 13ರಂದು ದಾಖಲಿಸಿದ್ದಾರೆ.

ಅದೇ ದಿನ ಬೆಳಗ್ಗೆ 11 ಗಂಟೆಗೆ ಮ್ಯಾಜಿಸ್ಟ್ರೇಟ್‍ಗೆ ತಲುಪಿಸಲಾಗಿದೆ. ಹೀಗಾಗಿ, ಮಾರ್ಚ್ 12ರಂದು ಪೆÇಲೀಸರು ಅನುಮತಿ ಕೇಳಿರಬಹುದು. ಆದರೆ, ಅದನ್ನು ಎಫ್‍ಐಆರ್ ಮತ್ತು ತನಿಖಾಧಿಕಾರಿಯ ಹೇಳಿಕೆಯೊಂದಿಗೆ ಸಲ್ಲಿಸಬೇಕಾಗಿತ್ತು. ಆದರೆ, ಈ ಸಂಬಂಧ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಸೂಕ್ತ ರೀತಿಯಲ್ಲಿ ಪ್ರಕರಣವನ್ನು ದಾಖಲಿಸಿಲ್ಲ ಎಂಬ ಹಿನ್ನೆಲೆಯಲ್ಲಿ 12 ಜನರ ವಿರುದ್ಧದ ವಿಚಾರಣೆಯನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.

 ಬೆಂಗಳೂರು: ಪೊಲೀಸರ ದೌರ್ಜನ್ಯಕ್ಕೆ ಕೈ ಕಳೆದುಕೊಂಡ ಯುವಕ; ಆರೋಪ

ಬೆಂಗಳೂರು: ಪೊಲೀಸರ ದೌರ್ಜನ್ಯಕ್ಕೆ ಕೈ ಕಳೆದುಕೊಂಡ ಯುವಕ; ಆರೋಪ

 

ಬೆಂಗಳೂರು: ಪೊಲೀಸರ ದೌರ್ಜನ್ಯಕ್ಕೆ ಕೈ ಕಳೆದುಕೊಂಡ ಯುವಕ; ಆರೋಪ

ಬೆಂಗಳೂರು: ಕಳವು ಆರೋಪದ ಮೇಲೆ ವಿಚಾರಣೆ ಹೆಸರಿನಲ್ಲಿ ಯುವಕನೋರ್ವನನ್ನು ಠಾಣೆಗೆ ಕರೆತಂದ ಪೊಲೀಸ್ ಸಿಬ್ಬಂದಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಕೈಯನ್ನೆ ಕಳೆದುಕೊಂಡಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ.

ನಗರದ ವೈಟ್‍ಫೀಲ್ಡ್ ವಿಭಾಗ ವ್ಯಾಪ್ತಿಯಲ್ಲಿನ ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ಈ ಕೃತ್ಯವೆಸಗಿರುವ ಆರೋಪ ಕೇಳಿಬಂದಿದ್ದು, ಪ್ರಮುಖವಾಗಿ ಠಾಣೆಯ ಇನ್ಸ್ ಪೆಕ್ಟರ್ ಸೋಮಶೇಖರ್, ಎಸ್ಸೈ ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವಕನ ಪೋಷಕರು ಆಗ್ರಹಿಸಿದ್ದಾರೆ.

ವಾಹನಗಳ ಬ್ಯಾಟರಿ ಕಳವು ಆರೋಪ ಪ್ರಕರಣ ಸಂಬಂಧ 22 ಹರೆಯದ ಸಲ್ಮಾನ್ ಖಾನ್‍ನನ್ನು ಅ.27ರಂದು ವರ್ತೂರು ಠಾಣಾ ಪೊಲೀಸರು ವಶಕ್ಕೆ ಪಡೆದು, ಮೂರು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ.

ಆನಂತರ, ಬ್ಯಾಟರಿ ಕಳವು ಪ್ರಕರಣ ಮಾತ್ರವಲ್ಲದೆ, ಇನ್ನಿತರೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಳ್ಳುವಂತೆ ಪಟ್ಟುಹಿಡಿದ ತನಿಖಾಧಿಕಾರಿಗಳು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ಸಲ್ಮಾನ್ ಖಾನ್ ಆರೋಪಿಸಿದರು.

ಸಲ್ಮಾನ್ ತಾಯಿ ಶಾಬೀನಾ ಮಾತನಾಡಿ, ಸಲ್ಮಾನ್ ದುಡಿಮೆ ಮೇಲೆಯೇ ನಮ್ಮ ಕುಟುಂಬದ ಜೀವನ ನಿಂತಿದೆ. ಹೀಗಿರುವಾಗ, ವಿಚಾರಣೆಗೆಂದು ಕರೆತಂದು, ಕೈಮುರಿದು ಮನೆಗೆ ಕಳುಹಿಸಿದ್ದಾರೆ.ಇಂತಹ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

 ಉಪ್ಪಿನಂಗಡಿ; ರಸ್ತೆ ಅಪಘಾತಕ್ಕೆ ಬಾಲಕ ಬಲಿ, ಮೂವರಿಗೆ ಗಂಭೀರ ಗಾಯ

ಉಪ್ಪಿನಂಗಡಿ; ರಸ್ತೆ ಅಪಘಾತಕ್ಕೆ ಬಾಲಕ ಬಲಿ, ಮೂವರಿಗೆ ಗಂಭೀರ ಗಾಯ


 ಉಪ್ಪಿನಂಗಡಿ; ರಸ್ತೆ ಅಪಘಾತಕ್ಕೆ ಬಾಲಕ ಬಲಿ, ಮೂವರಿಗೆ ಗಂಭೀರ ಗಾಯ

ಉಪ್ಪಿನಂಗಡಿ: ಅಜಾಗರೂಕತೆಯ ಚಾಲನೆ ಹಾಗೂ ಅತೀ ವೇಗದಿಂದ ಬಂದ ಲಾರಿಯೊಂದು ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೋರ್ವ ಮೃತಪಟ್ಟು, ಅಟೋ ರಿಕ್ಷಾ ಚಾಲಕ ಸಹಿತ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ ಬಳಿಯ ಮಠ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ಹಿರ್ತಡ್ಕ ನಿವಾಸಿ ದಿ. ಅಶ್ರಫ್ ಎಂಬವರ ಪುತ್ರ, ಹಿರ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅಲ್ತಾಫ್ (12) ಮೃತ ಬಾಲಕ. ರಿಕ್ಷಾದಲ್ಲಿದ್ದ ಈತನ ತಾಯಿ ಖತೀಜಮ್ಮ, ಅಣ್ಣ ಆಶಿಕ್ ಮತ್ತು ಅಟೋ ರಿಕ್ಷಾ ಚಾಲಕ ಹಿರ್ತಡ್ಕ ನಿವಾಸಿ ಸಿದ್ದೀಕ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಅಲ್ತಾಫ್‍ನ ತಾಯಿ ಮಂಗಳೂರಿನ ಬೆಂಗರೆ ನಿವಾಸಿಯಾಗಿದ್ದು, ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದವರು ಇಂದು ಬಸ್ಸಿನಲ್ಲಿ ಉಪ್ಪಿನಂಗಡಿಗೆ ಬಂದು, ಬಳಿಕ ಅಟೋ ರಿಕ್ಷಾದಲ್ಲಿ ಹಿರ್ತಡ್ಕಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಹಾಸನ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಲಾರಿ ಮಠ ಮಸೀದಿಯ ಬಳಿಯ ತಿರುವಿನಲ್ಲಿ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಅತೀ ವೇಗದಿಂದ ಬಂದು ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಿಂದ ಅಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನಾ ಪಿ. ಕುಮಾರ್, ಸಂಚಾರಿ ಸಬ್ ಇನ್ಸ್ ಪೆಕ್ಟರ್ ರಾಮ ನಾಯ್ಕ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Saturday, 27 November 2021

ಓಮಿಕ್ರಾನ್‌ ಭಯ ಭೀತಿಗೊಳ್ಳಬೇಕಾದ ಅಗತ್ಯವಿಲ್ಲ; ಡಬ್ಲ್ಯುಎಚ್‌ ಓ ಪ್ರತಿನಿಧಿ

ಓಮಿಕ್ರಾನ್‌ ಭಯ ಭೀತಿಗೊಳ್ಳಬೇಕಾದ ಅಗತ್ಯವಿಲ್ಲ; ಡಬ್ಲ್ಯುಎಚ್‌ ಓ ಪ್ರತಿನಿಧಿ


ಓಮಿಕ್ರಾನ್‌ ಭಯ ಭೀತಿಗೊಳ್ಳಬೇಕಾದ ಅಗತ್ಯವಿಲ್ಲ; ಡಬ್ಲ್ಯುಎಚ್‌ ಓ ಪ್ರತಿನಿಧಿ

ಮಾಸ್ಕೋ: ಕೊರೋನಾ ವೈರಸ್‌ ನ ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಭಯ ಭೀತಿಗೊಳಗಾಗಲು ಯಾವುದೇ ಕಾರಣಗಳಿಲ್ಲ ಎಂದು ರಷ್ಯಾ ದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರತಿನಿಧಿ ಮೆಲಿಟಾ ವುಜ್ನೋವಿಕ್ ಶನಿವಾರ ಹೇಳಿದ್ದಾರೆ.

ಈ ತಳಿಯ ಬಗ್ಗೆ ಯಾವುದೇ ಭಯ ಭೀತಿಗೆ ಒಳಗಾಗಬಾರದು ಎಂದು ನನಗೆ ಕಂಡುಬರುತ್ತಿದೆ...

ಒಂದೊಮ್ಮೆ ಈ ವೈರಸ್ ಲಸಿಕೆಯನ್ನು ಬೈಪಾಸ್ ಮಾಡಿದರೆ, ಲಸಿಕೆಯ ಪರಿಣಾಮಕಾರಿತ್ವವನ್ನು ಅದು ಎಷ್ಟು ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಎಂಬುದು ನಮಗೆ ಈಗ ತಿಳಿದಿಲ್ಲ," ಎಂದು ವುಜ್ನೋವಿಕ್ ಸೊಲೊವೀವ್ ಲೈವ್ ಯೂಟ್ಯೂಬ್ ಶೋಗೆ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಲಸಿಕೆ ಉತ್ಪಾದಿಸುತ್ತಿದ್ದರೂ ಸಹ, ಆಫ್ರಿಕಾ ಸಾಕಷ್ಟು ಲಸಿಕೆ ಡೋಸ್‌ ಗಳನ್ನು ಹೊಂದಿಲ್ಲ" ಎಂದು ಅಧಿಕಾರಿ ಹೇಳಿದ್ದಾರೆ. ಆದಾಗ್ಯೂ, ಓಮಿಕ್ರಾನ್ ರೂಪಾಂತರಿ ಇತರ ತಳಿಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿರಬಹುದು ಎಂದು ವುಜ್ನೋವಿಕ್ ಊಹಿಸಿದ್ದಾರೆ.


ಟೊಮ್ಯಾಟೊ ಬೆಲೆ ಕುಸಿತ

ಟೊಮ್ಯಾಟೊ ಬೆಲೆ ಕುಸಿತ


ಟೊಮ್ಯಾಟೊ ಬೆಲೆ ಕುಸಿತ

ಬೆಂಗಳೂರು: ಕಳೆದ ಹದಿನೈದು ದಿನಗಳಿಂದ ಏರುಮುಖಿಯಾಗಿದ್ದ ಟೊಮ್ಯಾಟೊ ಬೆಲೆ ದಿಢೀರನೇ ಕುಸಿದಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.

ದೇಶದ ವಿವಿಧ ಭಾಗಗಳಿಂದ ರಾಜ್ಯಕ್ಕೆ ಟೊಮ್ಯಾಟೊ ಸರಬರಾಜು ಹೆಚ್ಚಿದ್ದು, ಶನಿವಾರ ಬೆಂಗಳೂರಿನಲ್ಲಿ ಟೊಮ್ಯಾಟೊ ಬೆಲೆ ದಿಢೀರ್ ಕುಸಿತ ಕಂಡಿದೆ. ಕೆಲ ದಿನಗಳ ಹಿಂದೆ 15 ಕೆಜಿ ಟೊಮ್ಯಾಟೊ ಬಾಕ್ಸ್‌ನ ಬೆಲೆ 3100 ರೂಪಾಯಿ ಇದ್ದುದು ಇದೀಗ ದಿಢೀರನೇ 400-600 ರೂಪಾಯಿಗೆ ಕುಸಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದೆ 110-130 ರೂಪಾಯಿ ಇದ್ದ ಬೆಲೆ ಇದೀಗ 50-70ರ ಆಸುಪಾಸಿನಲ್ಲಿದೆ.

ಇಂಧನ ಬೆಲೆಯಿಂದ ಹೈರಾಣಾಗಿರುವ ಗ್ರಾಹಕರಿಗೆ ಚಿಂತೆ ಹೆಚ್ಚಿಸಿದ್ದ ಟೊಮ್ಯಾಟೊ ಬೆಲೆ, ಇದೀಗ ಇಳಿದಿರುವುದು ಗ್ರಾಹಕರಿಗೆ ಸಂತಸ ತಂದಿದ್ದರೂ, ಟೊಮ್ಯಾಟೊ ಬೆಲೆ ದಿಢೀರ್ ಕುಸಿತ ಕಂಡಿರುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.

"ಬೆಂಗಳೂರು ಸುತ್ತಮುತ್ತಲಿನ ಅಂದರೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ, ತಮಿಳುನಾಡಿನ ಗಡಿ ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಉತ್ಪಾದನೆ ಕಡಿಮೆಯಾಗಿ ಟೊಮ್ಯಾಟೊ ಬೆಲೆ ಗಗನಕ್ಕೇರಿತ್ತು. 15 ಕೆಜಿ ಬಾಕ್ಸ್ ಟೊಮ್ಯಾಟೊ ಬೆಲೆ 1400-1600ಕ್ಕೆ ತಲುಪಿತು. ಪೂರೈಕೆ ಕುಸಿತದಿಂದ ದಿಢೀರನೇ 3000 ರೂಪಾಯಿಗೆ ಅಲ್ಪಾವಧಿಯಲ್ಲೇ ತಲುಪಿತು. ಟೊಮ್ಯಾಟೊ ಹರಾಜಿನ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಉತ್ತರ ಕರ್ನಾಟಕ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ಹಾಗೂ ಆಂಧ್ರದ ನೆರೆಯ ಜಿಲ್ಲೆಗಳ ಬೆಳೆಗಾರರ ಗಮನ ಸೆಳೆಯಿತು. ಇದರಿಂದಾಗಿ ಈ ಭಾಗದಿಂದ ಪೂರೈಕೆ ಹೆಚ್ಚಿತು. ಇದು ಬೆಲೆ ಕುಸಿಯಲು ಕಾರಣ" ಎಂದು ತರಕಾರಿ ಬೆಲೆಯ ಮೇಲೆ ನಿಗಾ ಇಟ್ಟಿರುವ ತಜ್ಞರು ಹೇಳುತ್ತಾರೆ.

ಏತನ್ಮಧ್ಯೆ ದಕ್ಷಿಣ ಒಳನಾಡಿನಲ್ಲಿ ಮಳೆ ನಿಂತಿದ್ದು, ಸ್ಥಳೀಯವಾಗಿ ಬೆಳೆದ ಟೊಮ್ಯಾಟೊ ಮಾರುಕಟ್ಟೆಗೆ ಬರುತ್ತಿದೆ. ಸದ್ಯಕ್ಕೆ ಬಾಕ್ಸ್ ಟೊಮ್ಯಾಟೊ ಬೆಲೆ 600-800ರ ಆಸುಪಾಸಿನಲ್ಲಿದೆ ಎಂದು ಕೆ.ಆರ್.ಮಾರುಕಟ್ಟೆಯ ಡೀಲರ್ ರಾಜೇಂದ್ರ ಹೇಳುತ್ತಾರೆ. ಮಳೆ ಮುಂದುವರಿಯದಿದ್ದರೆ, ಟೊಮ್ಯಾಟೊ ಬೆಲೆ ಕೆಲವೇ ದಿನಗಳಲ್ಲಿ 20-40 ರೂಪಾಯಿಗೆ ಇಳಿಯಲಿದೆ ಎಂದು ಅವರು ಅಂದಾಜಿಸುತ್ತಾರೆ.


6 ಮಂದಿ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್!

6 ಮಂದಿ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್!


6 ಮಂದಿ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್!

ಬೆಂಗಳೂರು : ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಸೇರಿದಂತೆ 6 ಮಂದಿ ಕಾಂಗ್ರೆಸ್ ನಾಯಕರಿಗೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್​ ನಾಯಕರಾದ ಡಿ.ಕೆ.ಶಿವಕುಮಾರ್, ಈಶ್ವರ ಖಂಡ್ರೆ ಸೇರಿ 6 ಜನರಿಗೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್​ನಿಂದ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಹೇಳಲಾಗ್ತಿದೆ. ಡಿಸೆಂಬರ್​ 22ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಕೋವಿಡ್ ನಿಯಮಯ ಉಲ್ಲಂಘನೆ ಹಿನ್ನೆಲೆ ಉಪ್ಪಾರಪೇಟೆ ಠಾಣೆ ಪೊಲೀಸರು ದೂರು ನೀಡಿದ್ದರು. ಅದರಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂಬ ಮಾಹಿತಿಯಿದೆ.


ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 7 ಕೋಟಿ ರೂ.ಮೌಲ್ಯದ ನಕಲಿ ನೋಟು ವಶ

ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 7 ಕೋಟಿ ರೂ.ಮೌಲ್ಯದ ನಕಲಿ ನೋಟು ವಶ


ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 7 ಕೋಟಿ ರೂ.ಮೌಲ್ಯದ ನಕಲಿ ನೋಟು ವಶ

ಖಿಲ್ಖೇತ ಪ್ರದೇಶದಿಂದ ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಓರ್ವ ಪುರುಷ ಹಾಗೂ ಮಹಿಳೆಯನ್ನು ಬಾಂಗ್ಲಾದೇಶದ ಢಾಕಾ ಮೆಟ್ರೋಪಾಲಿಟನ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಫಾತಿಮಾ ಅಖ್ತರ್​ ಒಪಿ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಪೊಲೀಸರು 7 ಕೋಟಿ ರೂಪಾಯಿ ಮೌಲ್ಯದ ನಕಲಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ನಕಲಿ ಕರೆನ್ಸಿಗಳು ಪಾಕಿಸ್ತಾನದಿಂದ ಬಂದಿವೆ ಎನ್ನಲಾಗಿದೆ. ದಕ್ಷಿಣ ಖಾನ್​ ಪ್ರದೇಶದ ಮನೆಯೊಂದರಿಂದ ಈ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಎಂಪಿ ಮುಂದುವರಿದ ತನಿಖೆಯ ಭಾಗವಾಗಿ ಡೆಮ್ರಾದ ಸರುಲಿಯಾ ಪ್ರದೇಶದ ಅಬು ತಾಲೇಬ್​​ ಎಂಬಾತನನ್ನು ಬಂಧಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಗಳಲ್ಲಿ ಓರ್ವನಾದ ಅಬು ತಾಲೆಬ್​​ ಪಾಕ್​ನ ಪ್ರಜೆಗಳಾದ ಸುಲ್ತಾನ್​ ಹಾಗೂ ಶಫಿ ಎಂಬವರ ಸಹಾಯದಿಂದ ಪಾಕಿಸ್ತಾನದಿಂದ ಶ್ರೀಲಂಕಾ ಮೂಲಕ ನಕಲಿ ನೋಟುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಈ ನಕಲಿ ನೋಟುಗಳನ್ನು ಅಬು ತಾಲೆಬ್​ ಫಾತಿಮಾ ಅಖ್ತರ್​ ನವೆಂಬರ್​ 23ಕ್ಕೆ ನೀಡಿದ್ದನು.

ಅಧಿವೇಶನದಲ್ಲಿ ಕಾಂಗ್ರೆಸ್‌ ಜೊತೆ ಸಮನ್ವಯ ಇಲ್ಲ: ಟಿಎಂಸಿ

ಅಧಿವೇಶನದಲ್ಲಿ ಕಾಂಗ್ರೆಸ್‌ ಜೊತೆ ಸಮನ್ವಯ ಇಲ್ಲ: ಟಿಎಂಸಿ


ಅಧಿವೇಶನದಲ್ಲಿ ಕಾಂಗ್ರೆಸ್‌ ಜೊತೆ ಸಮನ್ವಯ ಇಲ್ಲ: ಟಿಎಂಸಿ

ಕೋಲ್ಕತ್ತ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್‌ ಪಕ್ಷದೊಂದಿಗೆ ಸಹಕರಿಸಲು ತನಗೆ ಆಸಕ್ತಿ ಇಲ್ಲ ಎಂದು ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಶನಿವಾರ ಹೇಳಿದೆ.

ಆದರೆ, ಸಾರ್ವಜನಿಕ ಹಿತಾಸಕ್ತಿ ವಿಷಯಗಳಿಗಾಗಿ, ಇತರ ವಿರೋಧ ಪಕ್ಷಗಳ ಜೊತೆಗೆ ಸಹಕರಿಸುವುದಾಗಿ ತಿಳಿಸಿದೆ.

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನ.29ರಂದು ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಟಿಎಂಸಿ ಬಹುತೇಕ ಭಾಗವಹಿಸುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕರು, ಮೊದಲಿಗೆ ತಮ್ಮ ಪಕ್ಷದೊಳಗೆ ಸಮನ್ವಯ ಸಾಧಿಸಲಿ. ಮೊದಲು, ಅವರು ತಮ್ಮ ಮನೆಯನ್ನು ಕ್ರಮಬದ್ಧವಾಗಿ ಇರಿಸಿಕೊಳ್ಳಲಿ. ಬಳಿಕ ಬೇರೆ ಪಕ್ಷಗಳ ಜೊತೆಗಿನ ಸಮನ್ವಯದ ಕುರಿತು ಯೋಚನೆ ಮಾಡಬೇಕು. ಕೇಸರಿ ಪಾಳಯದ ವಿರುದ್ಧ ಹೋರಾಡಲು ಕಾಂಗ್ರೆಸ್‌ ನಾಯಕರಿಗೆ ದೃಢ ನಿಶ್ಚಯದ ಕೊರತೆ ಇದೆ' ಎಂದರು

ಟಿಎಂಸಿ ಮುಖ್ಯಸ್ಥೆಯೂ ಆಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇಲ್ಲಿನ ನಿವಾಸದಲ್ಲಿ ನ.29ರಂದು ಪಕ್ಷದ ರಾಷ್ಟ್ರೀಯ ಸಮನ್ವಯತಾ ಸಮಿತಿ ಸಭೆ ನಡೆಯಲಿದ್ದು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಕ್ಷದ ಕಾರ್ಯತಂತ್ರ ರೂಪಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಿದೆ ಎಂದು ಅವರು ಹೇಳಿದ್ದಾರೆ.

ಸದನದ ನಿರ್ವಹಣೆಗಾಗಿ ಟಿಎಂಸಿ ಸೇರಿದಂತೆ ಎಲ್ಲಾ ವಿಪಕ್ಷಗಳ ಜೊತೆ ಸಮನ್ವಯತೆ ಸಾಧಿಸುವುದಾಗಿ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಹೇಳಿದ್ದರು.

ನಾಳೆ ಪ್ರತಿಪಕ್ಷಗಳ ನಾಯಕರ ಸಭೆ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧದ ಹೋರಾಟದ ಕಾರ್ಯತಂತ್ರವನ್ನು ರೂಪಿಸಲು ವಿರೋಧ ಪಕ್ಷಗಳ ನಾಯಕರು ಸೋಮವಾರ (ನ.29) ಬೆಳಿಗ್ಗೆ ಸಭೆ ಸೇರಲಿದ್ದಾರೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಂಬಂಧ ಸಂಸತ್ತಿನ ಉಭಯ ಸದನಗಳ ಪ್ರತಿಪಕ್ಷಗಳ ಸದನದ ನಾಯಕರಿಗೆ ಪತ್ರ ಬರೆದಿದ್ದಾರೆ. ಚಳಿಗಾಲದ ಅಧಿವೇಶನವು ಅದೇ ದಿನ ಆರಂಭವಾಗಲಿದ್ದು, ಡಿಸೆಂಬರ್‌ 23ರವರೆಗೂ ನಡೆಯಲಿದೆ.


ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೋವಿಡ್ ದೃಢ

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೋವಿಡ್ ದೃಢ

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೋವಿಡ್ ದೃಢ

ಬೆಂಗಳೂರು: ದೇವನ ಹಳ್ಳಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಕ್ಷಿಣ ಆಫ್ರಿಕಾದಿಂದ ಇಂದು ಬಂದಿಳಿದ ಇಬ್ಬರಲ್ಲಿ ಕೊರೋನ ಸೋಂಕು ದೃಢ ಪಟ್ಟಿದ್ದು, ಹೊರ ದೇಶಗಳಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಮಾಹಿತಿ ನೀಡಿದ್ದು, ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಿದಾಗ ಕೊರೋನ ಸೋಂಕು ತಗುಲಿರುವುದು ಖಚಿತವಾಯಿತು. ತಕ್ಷಣ ಆ ಸ್ಯಾಂಪಲ್ ಅನ್ನು ಲ್ಯಾಬ್​ಗೆ ಕಳುಹಿಸಲಾಯಿತು. ಅವರಿಗೆ ತಗುಲಿರುವುದು ಒಮಿಕ್ರಾನ್ ಅಲ್ಲ, ಅದು ಡೆಲ್ಟಾ ಪ್ಲಸ್ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಶನಿವಾರದಂದು 149 ಜನರಿಗೆ ಕೊರೋನ ಸೋಂಕು ದೃಢಪಟ್ಟಿವೆ. ಒಬ್ಬರು ಸೋಂಕಿಗೆ ಬಲಿಯಾಗಿದ್ದು, ಒಟ್ಟು 12,34,377 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಕಳೆದ ವಾರದಿಂದ ಸರಾಸರಿ 160 ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದು, ಶುಕ್ರವಾರದಂದು 224 ಕೋವಿಡ್ ಪ್ರಕರಣಗಳು ಕಂಡುಬಂದಿವೆ. ಹಾಗಾಗಿ ಕೊರೋನ ಮುಂಜಾಗೃತ ಕ್ರಮಗಳನ್ನು ಪಾಲಿಸುವಂತೆ ಬಿಬಿಎಂಪಿ ಗೌರವ್ ಗುಪ್ತಾ ತಿಳಿಸಿದ್ದಾರೆ.

ನಗರದ ಗಡಿಭಾಗವಾದ ಆನೇಕಲ್ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಅಲ್ಲದೇ ಹೊಸ ಮಾದರಿಯ ಸೋಂಕು ಪ್ರಕರಣದ ಕುರಿತು ಚರ್ಚೆಗಳು ನಡೆಯುತ್ತಿವೆ. ಹಾಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಹಾಗೂ ಹೊಸ ಮಾದರಿಯ ಸೋಂಕು ಪ್ರಕರಣಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪ್ರಮುಖ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್ ತಂಡಗಳನ್ನು ನಿಯೋಜಿಸಿ ನೆರೆ ರಾಜ್ಯಗಳಿಂದ ಬರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.


 ಕೋವಿಡ್ 3ನೆ ಅಲೆಯ ಆತಂಕ; ದ.ಕ.ಜಿಲ್ಲೆಯಲ್ಲಿ ಅಲರ್ಟ್ ಆಗಿರಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ದೇಶನ

ಕೋವಿಡ್ 3ನೆ ಅಲೆಯ ಆತಂಕ; ದ.ಕ.ಜಿಲ್ಲೆಯಲ್ಲಿ ಅಲರ್ಟ್ ಆಗಿರಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ದೇಶನ


 ಕೋವಿಡ್ 3ನೆ ಅಲೆಯ ಆತಂಕ; ದ.ಕ.ಜಿಲ್ಲೆಯಲ್ಲಿ ಅಲರ್ಟ್ ಆಗಿರಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ದೇಶನ

ಮಂಗಳೂರು: ಕೊರೋನ ಪಾಸಿಟಿವ್ ಪ್ರಕರಣಗಳು ಮತ್ತೆ ಭೀತಿ ಹುಟ್ಟಿಸಿದ್ದು, ಮೂರನೇ ಅಲೆಯ ಆತಂಕ ಹುಟ್ಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಲರ್ಟ್ ಆಗಿರುವಂತೆ ಸರ್ಕಾರ ಸೂಚನೆ ನೀಡಿದೆ.

ಜಿಲ್ಲೆಗೆ ಕೋವಿಡ್ ಭೀತಿ ಎದುರಾಗದಂತೆ ತಡೆಯುವಲ್ಲಿ ಮೂರನೇ ಅಲೆ ನಿಯಂತ್ರಿಸಲು ಕೇರಳ ಗಡಿಯಲ್ಲಿ ದಿನ 24 ಗಂಟೆಯೂ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಸೂಚನೆ ನೀಡಿದ್ದಾರೆ.

ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಶನಿವಾರ ವೀಡಿಯೊ ಕಾನರೆನ್ಸ್ ನಡೆಸಿದ ಸಿಎಂ ಬೊಮ್ಮಾಯಿ, ಕೇರಳದಿಂದ ದ.ಕ.ಕ್ಕೆ ಆಗಮಿಸುವವರ ಮೇಲೆ ವಿಶೇಷ ನಿಗಾ ವಹಿಸುವಂತೆ ಸೂಚಿಸಿದ್ದಾರೆ.

ಕೇರಳ ಗಡಿಯಲ್ಲಿ ಚೆಕ್‌ ಪೋಸ್ಟ್‌ ಗಳನ್ನು ಮಾಡಿ 3 ಪಾಳಿಗಳಲ್ಲಿ ಅಧಿಕಾರಿ- ಸಿಬ್ಬಂದಿ ನಿಯೋಜಿಸಬೇಕು. ಕೇರಳದಿಂದ ಬರುವವರೆಲ್ಲರೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದನ್ನು, ಲಸಿಕೆ ಪಡೆದಿರುವುದನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು ಎಂದು ಸಿಎಂ ನಿರ್ದೇಶಿಸಿದ್ದಾರೆ.

ಜಿಲ್ಲೆಯಲ್ಲಿರುವ ಎಲ್ಲ ಕಾಲೇಜುಗಳು, ಹಾಸ್ಟೆಲ್‌ಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ಆರ್‌ಟಿಪಿಸಿಆರ್ ತಪಾಸಣೆಗೆ ಒಳಪಡಿಸ ಬೇಕು. ಕೇರಳದಿಂದ ಬರುವವರು 7 ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ಶಾಲೆ ಕಾಲೇಜುಗಳಲ್ಲಿ ಭೌತಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ದ.ಕ.: 13 ಮಂದಿಗೆ ಕೊರೋನ ಸೋಂಕು ದೃಢ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ (ನ.27) 13 ಮಂದಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ಶನಿವಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 7 ಮಂದಿ ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ 128 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ. 0.30 ಆಗಿದೆ.

ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 88,883 ಮಾಸ್ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. 1,07,81,276 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

 ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ರಾಜ್ಯ ಸರಕಾರ ಸೂಚನೆ

ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ರಾಜ್ಯ ಸರಕಾರ ಸೂಚನೆ


 ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ರಾಜ್ಯ ಸರಕಾರ ಸೂಚನೆ

ಬೆಂಗಳೂರು: ವಿದೇಶದಲ್ಲಿ ಹೊಸ ತಳಿಯ ವೈರಸ್ ಪತ್ತೆಯಾಗಿರುವ ಹಿನ್ನೆಲೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿರಿಯ ಅಧಿಕಾರಿಗಳ ಜೊತೆ ನಡೆದ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿರುವ ಸಚಿವ ಆರ್. ಅಶೋಕ್, ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. 

ಗಡಿ ಜಿಲ್ಲೆ ಮಂಗಳೂರು, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ದಿನದ 24 ಗಂಟೆ ಬಿಗಿ ಕ್ರಮಕ್ಕೆ ಸೂಚನೆ ನೀಡಲಾಗಿದೆ.

ಗಡಿಯಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿ ಶಿಫ್ಟ್ ವೈಸ್​ ಪರೀಕ್ಷೆ ನಡೆಸಲು ಸೂಚನೆ ನೀಡಿದ್ದು, ಲಸಿಕೆ ಪಡೆದಿದ್ದರೋ ಇಲ್ಲವೋ ಎಂದು ಪರಿಶೀಲಿಸಲು ಸೂಚನೆ ಕೊಡಲಾಗಿದೆ.

ಸಿಎಂ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು ಇಂತಿವೆ:

►ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ. 

►ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಗಿ ವಿಚಕ್ಷಣೆ ಕೈಗೊಳ್ಳುವುದು

►ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸುವವರಿಗೆ  ಆರ್.ಟಿ.ಪಿ.ಸಿ. ಆರ್. ನೆಗೆಟಿವ್ ರಿಪೋರ್ಟ್ ಕಡ್ಡಾಯ. 

► ಗಡಿ ಜಿಲ್ಲೆಗಳಲ್ಲಿ ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುವಂತೆ ಡಿಸಿಗಳಿಗೆ ಸೂಚನೆ. ಇದಕ್ಕೆ ಎಲ್ಲ ಇಲಾಖೆಗಳ ಸಹಕಾರ ಪಡೆಯುವುದು. 

►16 ದಿನಗಳ ಹಿಂದೆ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಬೇಕು 

►ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ನೆಗಟಿವ್ ರಿಪೋರ್ಟ್ ಬಂದ ನಂತರದ 7 ನೇ ದಿನಕ್ಕೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡುವುದು. 

►ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಬೇಕು.

► ಹೋಟೇಲ್, ರೆಸ್ಟೋರೆಂಟ್‌ಗಳು, ಸಿನೆಮಾ ಹಾಲ್‌ಗಳು, ಈಜುಗೊಳ, ಸಾರ್ವಜನಿಕ ಗ್ರಂಥಾಲಯ, ಮೃಗಾಲಯಗಳು ಮತ್ತು  ಜೈವಿಕ ಉದ್ಯಾನವನಗಳು,  ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಪಡೆದಿರಬೇಕು.  

► ವೈದ್ಯಕೀಯ ಕಾಲೇಜು ಮತ್ತು ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ  ಕೋವಿಡ್ ಪರೀಕ್ಷೆಗಳನ್ನು  ಹೆಚ್ಚಿಸುವುದು.

► ಸರ್ಕಾರಿ ಕಚೇರಿಗಳಲ್ಲಿ ಹಾಗೂ ಮಾಲ್‌ಗಳಲ್ಲಿ ಕೆಲಸ ಮಾಡುವವರು  ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು.  ಸರ್ಕಾರಿ ಕಚೇರಿ ಹಾಗೂ ಮಾಲ್‌ಗಳಲ್ಲಿಯೇ ಲಸಿಕೆ ನೀಡಲು ವ್ಯವಸ್ಥೆ ಕಲ್ಪಿಸುವುದು.

► ಅಂತರ್ ರಾಷ್ಟ್ರೀಯ  ವಿಮಾನ ನಿಲ್ದಾಣದಲ್ಲಿ ತಪಾಸಣೆಗಳನ್ನು ತೀವ್ರಗೊಳಿಸುವುದು. ನೆಗಟಿವ್ ಇದ್ದವರಿಗೆ ನಗರ ಪ್ರವೇಶಕ್ಕೆ ಅನುಮತಿ.

► ಪಾಸಿಟಿವ್ ಇದ್ದವರಿಗೆ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸುವುದು.

ಸಚಿವರಾದ ಆರ್.ಅಶೋಕ್,  ಡಾ:ಸಿ.ಎನ್.ಅಶ್ವತ್ಥ್ ನಾರಾಯಣ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್,  ಬಿಬಿಎಂಪಿ ಮುಖ್ಯ ಆಯುಕ್ತ  ಗೌರವ್ ಗುಪ್ತಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಆಯುಕ್ತ ರಂದೀಪ್  ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


 ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಪತ್ನಿ ಸಯ್ಯಿದತ್ ಫಾತಿಮ ಕುಞ್ಞಿ ಬೀವಿ ವಫಾತ್

ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಪತ್ನಿ ಸಯ್ಯಿದತ್ ಫಾತಿಮ ಕುಞ್ಞಿ ಬೀವಿ ವಫಾತ್

 

ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಪತ್ನಿ ಸಯ್ಯಿದತ್ ಫಾತಿಮ ಕುಞ್ಞಿ ಬೀವಿ ವಫಾತ್ 

ಕಾಸರಗೋಡು : ಮುಹಿಮ್ಮಾತ್ ಸಂಸ್ಥೆಗಳ ಶಿಲ್ಪಿ ಮರ್ಹೂಂ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಪತ್ನಿ ಮತ್ತು ಪೆರಿಙತ್ತೂರ್ ಮತ್ತಿಪರಂಬತ್ತ್ ಕೇಳೋತ್ ಬಹ್'ಬೂದ್ ತಲೆಮಾರಿನ ಸಯ್ಯಿದ್ ಹಾಮಿದ್ ಇಂಬಿಚ್ಚಿ ಕೋಯ ತಂಙಳ್ ರವರ ಮಗಳೂ ಆಗಿರುವ ಸಯ್ಯಿದತ್ ಫಾತಿಮ ಕುಞ್ಞಿ ಬೀವಿ (60) ಮಂಗಳೂರು ಆಸ್ಪತ್ರೆಯಲ್ಲಿ ಮರಣಹೊಂದಿದರು.  

ಸಯ್ಯಿದತ್ ಫಾತಿಮ ತಾಯಿ. ಮಕ್ಕಳು ಸಯ್ಯಿದತ್ ಫಾತಿಮತ್ ಝುಹ್ರ ಬತೂಲ್, ಸಯ್ಯಿದತ್ ಮರಿಯಂ ಬೀವಿ, ಸಯ್ಯಿದ್ ಮುಹಮ್ಮದ್ ಹಬೀಬುಲ್ ಅಹ್ದಲ್ (ವೈಸ್ ಪ್ರೆಸಿಡೆಂಟ್ ಮುಹಿಮ್ಮಾತ್), ಸಯ್ಯಿದತ್ ಹಫ್ಸಾ ಬೀವಿ, ಸಯ್ಯಿದ್ ಮುನೀರುಲ್ ಅಹ್ದಲ್ ಹಿಮಮಿ ಅಹ್ಸನಿ ಅಲ್ ಕಾಮಿಲಿ ತಂಙಳ್ (ಎಸ್ಸೆಸ್ಸೆಫ್ ಕೇರಳ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರು), ಸಯ್ಯಿದತ್ ಹನ್ನತ್ ಬೀವಿ, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ಸಖಾಫಿ ತಂಙಳ್ (ಪ್ರೆಸಿಡೆಂಟ್ ಎಸ್.ವೈ.ಎಸ್ ಕುಂಬ್ಳೆ ಝೋನ್), ಸಯ್ಯಿದತ್ ಆಯಿಷತ್ ತುಹ್ರ ಹಫೀಫ, ಸಯ್ಯಿದ್ ಹುಸೈನುಲ್ ಅಮೀನ್ ಅಹ್ದಲ್,ಸಯ್ಯಿದತ್ ಖದೀಜತ್ ತಾಹಿರಾ, ಸಯ್ಯಿದತ್ ಅಸ್ಮಾ ಬೀವಿ ಅಳಿಯಂದಿರಾದ ಸಯ್ಯಿದ್ ಇಬ್ರಾಹಿಂ ಹಾದಿ ಸಖಾಫಿ, ಸಯ್ಯಿದ್ ಅಬ್ದುಲ್ ಅಝೀಝ್ ಅಲ್ ಹೈದರೂಸಿ, ಸಯ್ಯಿದ್ ಝೈನುಲ್ ಆಬಿದೀನ್ ಬುಖಾರಿ ಸಖಾಫಿ, ಸಯ್ಯಿದ್ ಸ್ವಾಲಿಹ್ ತುರಾಬ್ ಸಖಾಫಿ, ಸಯ್ಯಿದ್ ಹಬೀಬುರ್ರಹ್ಮಾನ್ ಅಹ್ದಲ್ ಸಖಾಫಿ, ಸಯ್ಯಿದ್ ಹಾಫಿಳ್ ಫಖ್ರುದ್ದೀನ್ ಹದ್ದಾದ್ ಸಖಾಫಿ, ಸಯ್ಯಿದ್ ಸಅದುಲ್ಲಾ ಅಹ್ದಲ್ ಸಖಾಫಿ,   ಸಯ್ಯಿದತ್ ಹರ್ಷಾನ ಬೀವಿ,  ಸಯ್ಯಿದತ್ ಝೀನತ್ ಭೀವಿ, ಸಯ್ಯಿದತ್ ಖದೀಜತ್ ನುಸೈಬಾ ಬೀವಿ ಮತ್ತು ಸಯ್ಯಿದತ್ ರಹಮತ್ ಬೀವಿ.  ಸಹೋದರರಾದ ಸಯ್ಯಿದ್ ಪೂಕೋಯ ತಂಙಳ್ (ಮರ್ಹೂಂ), ಎಸ್.ಬಿ.ಪಿ ತಂಙಳ್ ಪಾನೂರು, ಸಯ್ಯಿದ್ ಮುಹ್ಸಿನ್ ಕುಂಞಿಕೋಯ ತಂಙಳ್, ಸಯ್ಯಿದತ್ ಶರೀಫ ಮುಲ್ಲಬೀವಿ (ಮರ್ಹೂಂ), ಸಯ್ಯಿದತ್ ಆಯಿಶಾ ಬೀವಿ (ಮರ್ಹೂಂ), ಖಮರುನ್ನೀಸಾ ಪಾನೂರು, ರುಖಿಯಾ ಬೀವಿ ಮಾಸ್ತಿಕುಂಡ್

ಸಯ್ಯಿದತ್‌ರವರ ನಿಧನಕ್ಕೆ ಸಮಸ್ತ ಅಧ್ಯಕ್ಷ ರ‌ಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್, ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್, ಸಯ್ಯಿದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್, ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್, ಬಿ.ಎಸ್.ಅಬ್ದುಲ್ಲಾ ಕುಂಞಿ ಫೈಝಿ ಸಂತಾಪ ಸೂಚಿಸಿದರು.

ಭಾನುವಾರ ಬೆಳಗ್ಗೆ 9 ಗಂಟೆಗೆ ಮುಹಿಮ್ಮಾತ್ ಅಹ್ದಲ್ ಮಖಾಂನಲ್ಲಿ ದಫನ ಕಾರ್ಯ ನಡೆಯಲಿದೆ.


 ಬೀಜಿಂಗ್ ವಿಮಾನ ನಿಲ್ದಾಣದ ಚಿತ್ರವನ್ನು ನೊಯ್ಡಾ ಎಂದು ಬಿಂಬಿಸಿದ ಬಿಜೆಪಿ ನಾಯಕರನ್ನು ಟೀಕಿಸಿದ ಚೀನಾ ಮಾಧ್ಯಮ

ಬೀಜಿಂಗ್ ವಿಮಾನ ನಿಲ್ದಾಣದ ಚಿತ್ರವನ್ನು ನೊಯ್ಡಾ ಎಂದು ಬಿಂಬಿಸಿದ ಬಿಜೆಪಿ ನಾಯಕರನ್ನು ಟೀಕಿಸಿದ ಚೀನಾ ಮಾಧ್ಯಮ


 ಬೀಜಿಂಗ್ ವಿಮಾನ ನಿಲ್ದಾಣದ ಚಿತ್ರವನ್ನು ನೊಯ್ಡಾ ಎಂದು ಬಿಂಬಿಸಿದ ಬಿಜೆಪಿ ನಾಯಕರನ್ನು ಟೀಕಿಸಿದ ಚೀನಾ ಮಾಧ್ಯಮ

ಹೊಸದಿಲ್ಲಿ: ಬೀಜಿಂಗ್‌ನ ಡೇಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಚಿತ್ರಗಳನ್ನು ನೋಯ್ಡಾದ ಜೇವರ್ ಎಂಬಲ್ಲಿ ತಲೆಯೆತ್ತಲಿರುವ ನೂತನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಚಿತ್ರಗಳೆಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಲವಾರು ಬಿಜೆಪಿ ನಾಯಕರುಗಳು ಹಾಗೂ ಸಚಿವರನ್ನು ಚೀನಾದ ಸರಕಾರಿ ಸುದ್ದಿ ಸಂಸ್ಥೆ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ ತರಾಟೆಗೆ ತೆಗೆದುಕೊಂಡಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ನೊಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ ನ ಉದ್ಯೋಗಿ ಶೇನ್ ಶಿವೇಯ್ ಅವರು ಶುಕ್ರವಾರ ಬಿಜೆಪಿ ನಾಯಕರುಗಳು ಹಾಗೂ ಕೇಂದ್ರ ಸಚಿವರುಗಳ ಟ್ವೀಟ್‌ಗಳ ಕೊಲಾಜ್ ಒಂದನ್ನು ಪೋಸ್ಟ್ ಮಾಡಿ "ಭಾರತದ ಸರಕಾರಿ ಅಧಿಕಾರಿಗಳು ತಮ್ಮ ಸಾಧನೆಗಳಿಗೆ ಸಾಕ್ಷ್ಯವಾಗಿ ಚೀನಾದ ಬೀಜಿಂಗ್‌ನ ಡೇಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಚಿತ್ರಗಳನ್ನು ಬಳಸಬೇಕಾಯಿತೆಂದು ತಿಳಿದು ಆಘಾತವಾಗಿದೆ,'' ಎಂದು ಬರೆದಿದ್ದಾರೆ.

ಕೇಂದ್ರ ಸಚಿವರುಗಳಾದ ಅನುರಾಗ್ ಠಾಕುರ್, ಪ್ರಹ್ಲಾದ್ ಸಿಂಗ್ ಪಟೇಲ್, ಅರ್ಜುನ್ ರಾಮ್ ಮೇಘ್ವಾಲ್ ಮತ್ತು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಮ್ಮ ಟ್ವೀಟ್‌ಗಳಲ್ಲಿ ನೊಯ್ಡಾ ವಿಮಾನ ನಿಲ್ದಾಣದ್ದೆಂದು ಹೇಳಿಕೊಂಡು ಬೀಜಿಂಗ್‌ನ ವಿಮಾನ ನಿಲ್ದಾಣದ ಚಿತ್ರವನ್ನು ಬಳಸಿದ್ದರು.

ಶೇನ್ ಶಿವೇಯ್ ಅವರು ವಿಮಾನ ನಿಲ್ದಾಣದ ಚಿತ್ರದೊಂದಿಗೆ ಇನ್ನೊಂದು ಟ್ವೀಟ್ ಮಾಡಿ "ಚೀನಾದ ಬೀಜಿಂಗ್ ಡೇಕ್ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾಗತ, 17.47 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ಬೃಹತ್ ಯೋಜನೆ,'' ಎಂದು ಬರೆದಿದ್ದಾರೆ.

ಜೇವರ್ ವಿಮಾನ ನಿಲ್ದಾಣದ ವಿನ್ಯಾಸವಲ್ಲ, ಬದಲು ಬೀಜಿಂಗ್ ವಿಮಾನ ನಿಲ್ದಾಣದ ಚಿತ್ರಗಳು ಎಂದು ಹೇಳುವ ಲೇಖನವನ್ನೂ ಅವರು ಪೋಸ್ಟ್ ಮಾಡಿದ್ದಾರೆ ಹಾಗೂ "ಭಾರತ ಸರಕಾರದ ನಕಲಿ ಸುದ್ದಿ ಪ್ರಚಾರ ಬಯಲಾಗಿದೆ,'' ಎಂದು ಬರೆದಿದ್ದಾರೆ.

 'ಸಂಸತ್ ಮೆರವಣಿಗೆ'ಯನ್ನು ಮುಂದೂಡಿದ ರೈತರು

'ಸಂಸತ್ ಮೆರವಣಿಗೆ'ಯನ್ನು ಮುಂದೂಡಿದ ರೈತರು

 'ಸಂಸತ್ ಮೆರವಣಿಗೆ'ಯನ್ನು ಮುಂದೂಡಿದ ರೈತರು

ಹೊಸದಿಲ್ಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸುವ ಎರಡು ದಿನಗಳ ಮೊದಲು ರೈತರು ತಮ್ಮ ಸಂಸದ್ ಚಲೋ ಅಥವಾ ಸಂಸತ್ತಿನ ಮೆರವಣಿಗೆಯನ್ನು ಮುಂದೂಡಿದ್ದಾರೆ ಎಂದು NDTV ವರದಿ ಮಾಡಿದೆ.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸುವ ಮೂಲಕ ಕೇಂದ್ರ ಸರಕಾರ ದೊಡ್ಡ ಯು-ಟರ್ನ್ ಪಡೆದ ನಂತರ ಮುಂದಿನ ಕ್ರಮವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿರುವ ರೈತರ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾದ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇಂದು ಮುಂಜಾನೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದ್ದರು.

ಕಳೆದ ವಾರ, ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು. ಕೃಷಿ ಕಾನೂನುಗಳನ್ನು ಔಪಚಾರಿಕವಾಗಿ ರದ್ದುಪಡಿಸುವವರೆಗೆ ಹಾಗೂ  ಇತರ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘಗಳು ಘೋಷಿಸಿದ್ದವು. ಕನಿಷ್ಠ ಬೆಂಬಲ ಬೆಲೆಗಳ ಮೇಲಿನ ಕಾನೂನು ಖಾತರಿ ರೈತರ ಬೇಡಿಕೆಗಳಲ್ಲಿ ಒಂದಾಗಿದೆ.

ಈ ವಿಷಯದಲ್ಲಿ ತಮ್ಮ ಸಂಕಲ್ಪವನ್ನು ಒತ್ತಿಹೇಳಲು ಸೋಮವಾರ 60 ಟ್ರ್ಯಾಕ್ಟರ್‌ಗಳು ಹಾಗೂ  1,000 ಕ್ಕೂ ಹೆಚ್ಚು ಜನರು ಸಂಸತ್ತಿಗೆ ಮೆರವಣಿಗೆ ನಡೆಸಲಿದ್ದಾರೆ  ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಈ  ಮೊದಲೇ ಘೋಷಿಸಿದ್ದರು.

 ಅಸಮ್ಮತಿ ಸೂಚಿಸುವ ಹಕ್ಕು ಪ್ರಜಾಪ್ರಭುತ್ವದ ಜೀವಾಳ: ದಿಲ್ಲಿ ಹೈಕೋರ್ಟ್

ಅಸಮ್ಮತಿ ಸೂಚಿಸುವ ಹಕ್ಕು ಪ್ರಜಾಪ್ರಭುತ್ವದ ಜೀವಾಳ: ದಿಲ್ಲಿ ಹೈಕೋರ್ಟ್

 

ಅಸಮ್ಮತಿ ಸೂಚಿಸುವ ಹಕ್ಕು ಪ್ರಜಾಪ್ರಭುತ್ವದ ಜೀವಾಳ: ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ: ಅಸಮ್ಮತಿಯ ದನಿಗಳನ್ನು ಅಥವಾ ಬೌದ್ಧಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಅಥವಾ ಅಮುಕಲು ಯತ್ನಿಸಿದರೆ ಪ್ರಜಾಪ್ರಭುತ್ವ ತೀವ್ರ ಅಪಾಯದಲ್ಲಿರಲಿದೆ ಎಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ಅಭಿಪ್ರಾಯ ಪಟ್ಟಿದೆ. "ನೀವು ಹೇಳುವುದಕ್ಕೆ ನನ್ನ ಸಂಪೂರ್ಣ ಅಸಮ್ಮತಿಯಿದೆಯಾದರೂ  ಅದನ್ನು ಹೇಳುವ ನಿಮ್ಮ ಹಕ್ಕನ್ನು ನಾನು ಸಂಪೂರ್ಣವಾಗಿ ಸಮರ್ಥಿಸುತ್ತೇನೆ,'' ಎಂದು ಖ್ಯಾತ ಫ್ರೆಂಚ್ ಲೇಖಕ ವೋಲ್ಟೇರ್ ಅವರ ಮಾತನ್ನೂ ಹೈಕೋರ್ಟ್ ಉಲ್ಲೇಖಿಸಿದೆ.

"ಸಂವಿಧಾನದ 18ನೇ ವಿಧಿಯನ್ವಯ ಖಾತ್ರಿಪಡಿಸಲಾದ ಸ್ವಾತಂತ್ರ್ಯವನ್ನು ಕೇವಲ ಬಹುಸಂಖ್ಯಾತ ಅಭಿಪ್ರಾಯಕ್ಕೆ ತಕ್ಕ ಮಾತುಗಳನ್ನು ಅಭಿವ್ಯಕ್ತಪಡಿಸಲು ಬಳಸಬೇಕೆಂದೇನಿಲ್ಲ. ಪ್ರಸ್ತುತ ವಿಚಾರಗಳು ಅಥವಾ ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದಂತೆ  ವಿರೋಧ ಸೂಚಿಸುವ ಅಥವಾ ಅಸಮ್ಮತಿ ವ್ಯಕ್ತಪಡಿಸುವ ಅಥವಾ ವಿರೋಧ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರಜಾಪ್ರಭುತ್ವದ ಜೀವಾಳವಾಗಿದೆ,'' ಎಂದು ನ್ಯಾಯಮೂರ್ತಿ ಯಶವಂತ್ ವರ್ಮ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷೀದ್ ಅವರ 'ಸನ್‌ರೈಸ್ ಓವರ್ ಅಯ್ಯೋಧ್ಯ' ಕೃತಿಯನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭ ನ್ಯಾಯಮೂರ್ತಿಗಳು ಮೇಲಿನಂತೆ ಹೇಳಿದ್ದಾರೆ.

ಹಿಂದುತ್ವ ಗುಂಪುಗಳನ್ನು ಇಸ್ಲಾಮಿಕ್ ಸ್ಟೇಟ್ ಮತ್ತು ಬೊಕೊ ಹರಾಮ್ ಸಂಘಟನೆಗೆ ಸಲ್ಮಾನ್ ಖುರ್ಷೀದ್ ತಮ್ಮ ಕೃತಿಯಲ್ಲಿ ಹೋಲಿಕೆ ಮಾಡಿರುವುದರಿಂದ ಅದು ಸಾಕಷ್ಟು ವಿವಾದಕ್ಕೀಡಾಗಿದೆ.

ಈ ಕೃತಿಯಿಂದ ನಾಲ್ಕು ಕಡೆಗಳಲ್ಲಿ ಕೋಮು ಸಂಬಂಧ ಘಟನೆಗಳಿಗೆ ಕಾರಣವಾಗಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ "ಅವರಿಗೆ ಅದನ್ನು ಓದಲು ಯಾರೂ ಹೇಳಿಲ್ಲ, ಅವರು ತಮ್ಮ ಕಣ್ಣುಗಳನ್ನು ಮುಚ್ಚಬಹುದಾಗಿತ್ತು ಹಾಗೂ ಅದನ್ನು ಓದದೇ ಇರಬಹುದಾಗಿತ್ತು,'' ಎಂದು ನ್ಯಾಯಾಧೀಶರು ಹೇಳಿದ್ದರು.

 "ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗಿದೆ, ದಯವಿಟ್ಟು ಮನೆಗೆ ಹೋಗಿ": ರೈತರಿಗೆ ಕೃಷಿ ಸಚಿವರ ಮನವಿ

"ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗಿದೆ, ದಯವಿಟ್ಟು ಮನೆಗೆ ಹೋಗಿ": ರೈತರಿಗೆ ಕೃಷಿ ಸಚಿವರ ಮನವಿ


 "ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗಿದೆ, ದಯವಿಟ್ಟು ಮನೆಗೆ ಹೋಗಿ": ರೈತರಿಗೆ ಕೃಷಿ ಸಚಿವರ ಮನವಿ

ಹೊಸದಿಲ್ಲಿ: ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸುವ  ಎರಡು ದಿನಗಳ ಮೊದಲು ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಶನಿವಾರ ಒತ್ತಾಯಿಸಿದರು.

"ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆಯ ನಂತರ  ರೈತರ ಆಂದೋಲನವನ್ನು ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸಿ ಮನೆಗೆ ಹೋಗಬೇಕೆಂದು ನಾನು ಒತ್ತಾಯಿಸುತ್ತೇನೆ" ಎಂದು ತೋಮರ್ ಎಎನ್‌ಐಗೆ ತಿಳಿಸಿದರು.

ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ತೋಮರ್ ಮಂಡಿಸುವ ನಿರೀಕ್ಷೆಯಿದೆ. ಈ ದಿನದಂದು ಉಪಸ್ಥಿತರಿರುವಂತೆ ಲೋಕಸಭೆಯ ಸಂಸದರಿಗೆ ಬಿಜೆಪಿ ವಿಪ್ ಜಾರಿ ಮಾಡಿದೆ.

ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ತೋಮರ್ ಹೇಳಿದರು.

"ಪ್ರಧಾನಿ ನರೇಂದ್ರ ಮೋದಿ ಅವರು ಬೆಳೆ ವೈವಿಧ್ಯೀಕರಣ, ಶೂನ್ಯ ಬಜೆಟ್ ಕೃಷಿ ಹಾಗೂ  ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಹಾಗೂ  ಪರಿಣಾಮಕಾರಿಯಾಗಿ ಮಾಡುವ ವಿಷಯಗಳ ಬಗ್ಗೆ ಚರ್ಚಿಸಲು ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಈ ಸಮಿತಿಯಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ಇರುತ್ತಾರೆ " ಎಂದು ಕೃಷಿ ಸಚಿವರು ಹೇಳಿದರು.

Friday, 26 November 2021

ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ಅನುಭವ

ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ಅನುಭವ


ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ಅನುಭವ

ಬೆಂಗಳೂರು: ನಗರದಲ್ಲಿ ಎರಡು ಭಾರಿ ಭೂಮಿ ಕಂಪಿಸಿದ ಅನುಭವವಾಗಿದೆ.

ಜೆಪಿ ನಗರ, ಯಲಚೇನಹಳ್ಳಿ, ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ, ಮೈಸೂರು ರಸ್ತೆಯ ಕೆಲ ಪ್ರದೇಶಗಳಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ.

ಎರಡು ಸಲ ಭೂಮಿ ಕಂಪಿಸಿದ ಅನುಭವವಾಗಿದೆ. ಮೊದಲ ಸಲ ಲಘುವಾಗಿ ಕಂಪಿಸಿದ ಅನುಭವವಾಗಿದ್ದು, ನಂತರ ಭಾರೀ ಶಬ್ದ ಕೇಳಿಬಂದಿತ್ತು ಎಂದು ಹಲವರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಇಂದು ಮಧ್ಯಾಹ್ನ 12:15ರ ಸುಮಾರಿಗೆ 10-15 ನಿಮಿಷಗಳ ಅಂತರದಲ್ಲಿ 2 ಭಾರೀ ಬೆಂಗಳೂರಿನ ಆರ್.ಆರ್ ನಗರ, ನಾಗರಭಾವಿ, ಕೆಂಗೇರಿ, ಯಶವಂತಪುರ, ಕಗ್ಗಲಿಪುರ, ಹೆಗ್ಗಲಪುರ, ಜ್ಞಾನಭಾರತಿ, ಉಲ್ಲಾಳ ಸೇರಿದಂತೆ ಹಲವೆಡೆ ದೊಡ್ಡ ಶಬ್ಧ ಉಂಟಾಗಿದೆ. ಇದರ ಪರಿಣಾಮ ಮನೆಯಲ್ಲಿರುವ ಕೆಲವು ವಸ್ತುಗಳು ಕೆಳಕ್ಕುರುಳಿದೆ. ಇದರಿಂದಾಗಿ ಬೆಂಗಳೂರಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಮತ್ತೊಂದೆಡೆ ಮಂಡ್ಯದಲ್ಲಿ ಕೂಡ ಬೆಳಗ್ಗೆ 11.50ರ ಸುಮಾರಿಗೆ ಇದೇ ರೀತಿ ಜೋರು ಶಬ್ಧ ಕೇಳಿ ಬಂದಿದ್ದು, ಶಬ್ಧಕ್ಕೆ ಮನೆ, ಕಚೇರಿ ಕಟ್ಟಡಗಳ ಕಿಟಕಿಗಳು, ವಸ್ತುಗಳು ನಡುಗಿದೆ. ಈ ಹಿಂದೆ ಕೆಆರ್‍ಎಸ್, ಪಾಂಡವಪುರ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಕೂಡ ಈ ಶಬ್ಧ ಕೇಳಿಬಂದಿತ್ತು.

ರಾಮನಗರ ಜಿಲ್ಲೆಯ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ, ಮಾಗಡಿ, ಚನ್ನಪಟ್ಟಣದಲ್ಲಿ ಜನರಿಗೆ ಈ ಅನುಭವವಾಗಿದೆ, ಚನ್ನಪಟ್ಟಣದ ಮೆಣಸಿಗನಹಳ್ಳಿ ಭಾಗದ ರೈತರು ಆತಂಕಗೊಂಡಿದ್ದಾರೆ, ಸುಮಾರು 12.30ರ ಸುಮಾರಿಗೆ ಈ ಅನುಭವವಾಗಿದೆ, ಮಾಗಡಿಯ ಕೆಲವು ಪ್ರದೇಶಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ.

ಕೆಂಗೇರಿ ಹಾಗೂ ಅದರ ಸುತ್ತಮುತ್ತಲಿನಲ್ಲಿ ಕೇಳಿಸಿದ ಶಬ್ದ ಭೂಕಂಪ ಅಲ್ಲ ಎಂದು ಕೆಎಸ್‌ಎನ್‌ಡಿಎಂಸಿ ಸ್ಪಷ್ಟನೆ ನೀಡಿದೆ.

ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಭಾರಿ ಮಳೆ: ರೆಡ್ ಅಲರ್ಟ್

ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಭಾರಿ ಮಳೆ: ರೆಡ್ ಅಲರ್ಟ್


ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಭಾರಿ ಮಳೆ: ರೆಡ್ ಅಲರ್ಟ್

ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗಲಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಚಂಡಮಾರುತ ಸೃಷ್ಟಿಯಾಗಲಿದ್ದು, ಶನಿವಾರದಿಂದ ತಮಿಳುನಾಡು ಹಾಗೂ ಆಂಧ್ರದಲ್ಲಿ ಹೆಚ್ಚಿನ ಮಲೆಯಾಗಲಿದೆ. ಕರಾವಳಿ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಉಳಿದ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಥೂತುಕುಡಿ, ಕುಡ್ಡಲೋರ್, ವಿಲ್ಲುಪುರಂ, ಚೆಣಗಲ್‌ಪಟ್ಟು, ಚೆನ್ನೈ, ಕಾಂಚೀಪುರಂ, ತಿರುವಳ್ಳೂರ್, ಥೇನಿ, ಮಧುರೈ, ಪುದುಕೊಟ್ಟೈ, ಪಾಂಡಿಚೇರಿಯಲ್ಲಿ ನವೆಂಬರ್ 30ರವರೆಗೂ ಮಳೆ ಸುರಿಯಲಿದೆ.

ಇನ್ನು ಆಂಧ್ರಪ್ರದೇಶದಲ್ಲಿ ಯನಮ್ ಹಾಗೂ ರಾಯಲ್‌ಸೀಮನ್‌ನಲ್ಲಿ ಶನಿವಾರ ವಿಪರೀತ ಮಳೆಯಾಗಲಿದೆ ಎಂದು ಹೇಳಲಾಗಿದೆ.

ಇಂದು ಕನ್ಯಾಕುಮಾರಿ, ತಿರುನಲ್ವೇಲಿ ಮತ್ತು ತೆಂಕಾಸಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯಿದೆ. ತೂತುಕುಡಿ, ಕಡಲೂರು, ವಿಲ್ಲುಪುರಂ, ಚೆಂಗಲ್ಪಟ್ಟು, ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಥೇಣಿ, ಮಧುರೈ, ಪುದುಕೊಟ್ಟೈ ಮತ್ತು ಪುದುಚೇರಿಯಲ್ಲೂ ಮಳೆ ಹೆಚ್ಚಾಗಲಿದೆ.

ದಕ್ಷಿಣ ತಮಿಳುನಾಡು ಜಿಲ್ಲೆಗಳಲ್ಲಿ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ತಮಿಳುನಾಡಿನಲ್ಲಿ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಹವಾಮಾನ ವೈಪರೀತ್ಯದಿಂದಾಗಿ ನಿನ್ನೆ ಚೆನ್ನೈ-ತೂತುಕುಡಿ ವಿಮಾನವನ್ನು ತಿರುಚ್ಚಿಗೆ ತಿರುಗಿಸಲಾಗಿತ್ತು. IMD ಹವಾಮಾನ ಮುನ್ಸೂಚನೆಯ ಪ್ರಕಾರ, ಆಂಧ್ರಪ್ರದೇಶದ ಕೆಲವು ಭಾಗಗಳಲ್ಲೂ ಮುಂದಿನ ಐದು ದಿನಗಳಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡಿನ ರಾಜಧಾನಿ ಚೆನ್ನೈ, ತೂತುಕುಡಿ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಲ್ಲಿ ಇಂದಿನಿಂದ ಭಾರೀ ಮಳೆಯಾಗಲಿದೆ. ಸತತ ಮಳೆಯ ಹಿನ್ನೆಲೆಯಲ್ಲಿ 25 ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ತಮಿಳುನಾಡಿನಲ್ಲಿ ಮಳೆಯ ರೌದ್ರನರ್ತನ ಮುಂದುವರಿದಿದೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.

ತಮಿಳುನಾಡಿನ ತಿರುನೆಲ್ವೇಲಿ, ತೂತುಕುಡಿ, ರಾಮನಾಥಪುರಂ, ಪುದುಕೊಟ್ಟೈ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಅತಿಹೆಚ್ಚು ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 27 ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ. ಹಲವು ಪ್ರದೇಶಗಳಲ್ಲಿ ಕಟ್ಟಡಗಳು ಮುಳುಗಡೆಯಾಗಿದ್ದರೆ, ರಸ್ತೆಗಳು ಜಲಾವೃತಗೊಂಡಿದ್ದು, ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸಿವೆ.

ತಮಿಳುನಾಡಿನಲ್ಲಿ ಕಳೆದ ತಿಂಗಳಿನಿಂದ ಸುರಿಯುತ್ತಿರುವ ಸತತ ಮಳೆಯ ಹಿನ್ನೆಲೆಯಲ್ಲಿ ತೂತುಕುಡಿ, ಕನ್ಯಾಕುಮಾರಿ, ತಿರುನಲ್ವೇಲಿ, ಕಡಲೂರು, ತಿರುವರೂರು, ತೆಂಕಶಿ ಮತ್ತು ವಿಲ್ಲುಪುರಂ ಸೇರಿದಂತೆ 27 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಶಿಕ್ಷಣ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ.

ವಾಯುಭಾರ ಕುಸಿತದ ಪರಿಣಾಮ ರಾಜ್ಯ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ನಾಳೆಯಿಂದ ಮತ್ತೆ ಮೂರು ದಿನ ಮಳೆಯಾಗುವ ಮುನ್ಸೂಚನೆಗಳಿವೆ. ತಮಿಳುನಾಡು, ಕರಾವಳಿ ಭಾಗದಲ್ಲಿ ಉಂಟಾಗಿರುವ ವಾಯುಭಾರತ ಕುಸಿತದಿಂದ ಮತ್ತೆ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ. ನಾಳೆಯಿಂದ ಸೋಮವಾರದವರೆಗೂ ರಾಜ್ಯದ ಒಳನಾಡಿನಲ್ಲಿ ಮಳೆಯಾಗಲಿದೆ.

ಆದರೆ ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪಕ ಉಸ್ತುವಾರಿ ಕೇಂದ್ರದ ನಿವೃತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಚಾಮರಾಜನಗರ, ಮೈಸೂರು ಭಾಗದಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಕೆಲವೆಡೆ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ. ಇಂದು ಮಳೆಯಾಗುವ ಸಾಧ್ಯತೆ ವಿರಳವಾಗಿದೆ ಎಂದು ಹೇಳಿದರು.

ಭಾನುವಾರ ತುಮಕೂರಿನ ಪಾವಗಡ, ಶಿರಾ, ಕಿತ್ತೂರು, ಚಿತ್ರದುರ್ಗ, ಕೊಟ್ಟೂರು, ಹರಪನಹಳ್ಳಿ, ಹಡಗಲಿ, ಹೊಸದುರ್ಗ, ಶಿಕಾರಿಪುರ ಸೇರಿದಂತೆ ರಾಜ್ಯದ ಮಧ್ಯಭಾಗದಲ್ಲಿ ಮಳೆಯಾಗಲಿದೆ. ಸೋಮವಾರ ಹೈದರಾಬಾದ್ ಕರ್ನಾಟಕ ಭಾಗದ ಬಾದಾಮಿ, ಬಾಗಲಕೋಟೆ, ನರಗುಂದ ಸೊಲ್ಲಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ವಿವರಿಸಿದರು.