Sunday, 17 October 2021

ದೇವರ ಬದಲು ಕ್ಯಾಮರಾಗೆ ಆರತಿ ಎತ್ತಿದ ಆದಿತ್ಯನಾಥ್:‌ ಸಾಮಾಜಿಕ ತಾಣದಾದ್ಯಂತ ವ್ಯಂಗ್ಯ


 ದೇವರ ಬದಲು ಕ್ಯಾಮರಾಗೆ ಆರತಿ ಎತ್ತಿದ ಆದಿತ್ಯನಾಥ್:‌ ಸಾಮಾಜಿಕ ತಾಣದಾದ್ಯಂತ ವ್ಯಂಗ್ಯ

ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಆರತಿ ಎತ್ತಿದ ವೀಡಿಯೊವನ್ನು ಪ್ರಕಟಿಸಿದ್ದು, ಸಾಮಾಜಿಕ ತಾಣದಾದ್ಯಂತ ವ್ಯಂಗ್ಯಕ್ಕೆ ಗುರಿಯಾಗಿದೆ. ವಿಗ್ರಹದ ಬದಲು ಕ್ಯಾಮರಾ ನೋಡುತ್ತಲೇ ಆರತಿ ಎತ್ತಿದ ವೀಡಿಯೊ ವೈರಲ್‌ ಆಗಿದೆ.

ಟ್ವಿಟರ್‌ ನಲ್ಲಿ ವೀಡಿಯೊ ಹಂಚಿಕೊಂಡ ಆದಿತ್ಯನಾಥ ಹಿಂದಿಯಲ್ಲಿ "ವಿಜಯದಶಮಿಯ ಶುಭ ಸಂದರ್ಭದಲ್ಲಿ ನಾನು ಇಂದು ಗೋರಖನಾಥ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆ. ಇದು ಕೆಡುಕಿನ ವಿರುದ್ಧದ ಸತ್ಯದ ವಿಜಯದ ಸ್ಮರಣೆಯ ಮಹಾನ್ ಹಬ್ಬವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಈ ವೀಡಿಯೊವನ್ನು ಹಲವಾರು ಮಂದಿ ಬಳಕೆದಾರರು ವಿಭಿನ್ನ ತಲೆಬರಹಗಳನ್ನು ನೀಡಿ ಹಂಚಿಕೊಂಡಿದ್ದಾರೆ. "ಇವರು ಆರತಿ ಎತ್ತುತ್ತಿರುವುದು ದೇವರಿಗಲ್ಲ, ಕ್ಯಾಮರಾಕ್ಕೆ" ಎಂದು ಬಳಕೆದಾರರೋರ್ವರು ಟ್ವೀಟ್‌ ಮಾಡಿದ್ದಾರೆ. "ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಇಂದು ಆದಿತ್ಯನಾಥ್‌ ಕ್ಯಾಮರಾಗೆ ಆರತಿ ಎತ್ತಿದ್ದಾರೆ" ಎಂದು ಇನ್ನೋರ್ವರು ವ್ಯಂಗ್ಯವಾಡಿದ್ದಾರೆ.


SHARE THIS

Author:

0 التعليقات: