Friday, 15 October 2021

ಪಾಂಪೋರ್ ಎನ್ ಕೌಂಟರ್ : ಮೋಸ್ಟ್ ವಾಂಟೆಡ್ ಎಲ್ ಇಟಿ ಉಗ್ರ ಸೆರೆ


ಪಾಂಪೋರ್ ಎನ್ ಕೌಂಟರ್ : ಮೋಸ್ಟ್ ವಾಂಟೆಡ್ ಎಲ್ ಇಟಿ ಉಗ್ರ ಸೆರೆ

ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ ಪುಲ್ವಾಮಾ ಜಿಲ್ಲೆಯ ಪಾಂಪೋರ್ ನ

ದರಂಗ್ ಬಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ ಕೌಂಟರ್  ಸಂಭವಿಸಿದೆ.

ಜಮ್ಮು-ಕಾಶ್ಮೀರ ಪೊಲೀಸರ ಅಗ್ರ 10 ಟಾರ್ಗೆಟ್ ಲಿಸ್ಟ್ ನಲ್ಲಿ ಒಬ್ಬರಾಗಿರುವ ಎಲ್ ಇಟಿ ಕಮಾಂಡರ್ ಉಮರ್ ಮುಸ್ತಾಕ್ ಖಂಡೇ ಅವರು ಪಮೋರ್ ಎನ್ ಕೌಂಟರ್ ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.

ಶ್ರೀನಗರ ಬಾಘತ್ ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯ ಹತ್ಯೆ  ಮತ್ತು ಇತರ ಭಯೋತ್ಪಾದಕ ಅಪರಾಧಗಳಲ್ಲಿ ಉಮರ್ ಮುಸ್ತಾಕ್ ಖಂಡೇ ಭಾಗಿಯಾಗಿದ್ದಾರೆ ಎಂದು ಕಾಶ್ಮೀರ ಐಜಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಸಲೀಂ ಪರ್ರೆ, ಯೂಸುಫ್ ಕಾಂಟ್ರೂ, ಅಬ್ಬಾಸ್ ಶೇಖ್, ರಿಯಾಜ್ ಶೆಟರ್‌ಗುಂಡ್, ಫಾರೂಕ್ ನಲಿ, ಜುಬೇರ್ ವಾನಿ, ಅಶ್ರಫ್ ಮೊಲ್ವಿ, ಸಾಕಿಬ್ ಮಂಜೂರ್, ಉಮರ್ ಮುಸ್ತಾಕ್ ಖಾಂಡೆ ಮತ್ತು ವಕೀಲ್ ಶಾ ಮೊದಲಾದವರು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮೋಸ್ಟ್​ ವಾಂಟೆಡ್​ ಲಿಸ್ಟ್​ನಲ್ಲಿರುವ ಹತ್ತು ಭಯೋತ್ಪಾದಕರಾಗಿದ್ದಾರೆ.


SHARE THIS

Author:

0 التعليقات: