Friday, 15 October 2021

ದಸರಾ ಪಾರ್ಟಿ ಮಾಡುವಾಗ ಕಲಹ: ಯುವಕನ ಕೊಲೆ


ದಸರಾ ಪಾರ್ಟಿ ಮಾಡುವಾಗ ಕಲಹ: ಯುವಕನ ಕೊಲೆ

ಮಂಗಳೂರು: ಇಲ್ಲಿನ ಲಾಡ್ಜ್ ಒಂದರಲ್ಲಿ ಯುವಕನ ಕೊಲೆಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಮೃತ ಯುವಕನನ್ನು ಪಚ್ಚನಾಡಿ ನಿವಾಸಿ ಧನುಷ್ (20) ಎಂದು ಗುರುತಿಸಲಾಗಿದ್ದು, ಗೆಳೆಯರೊಂದಿಗೆ  ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ತೆರಳಿದಾಗ ಘಟನೆ ನಡೆದಿದೆ.

ಘಟನೆಯ ವಿವರ: ಶುಕ್ರವಾರ ತಡರಾತ್ರಿ ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ಪಂಪ್‌ವೆಲ್ ಬಳಿಯ ಲಾಡ್ಜ್ ಒಂದಕ್ಕೆ  ಪ್ರಮೀತ್, ಜೈಸನ್, ಕಾರ್ತಿಕ್, ಧನುಷ್, ದುರ್ಗೇಶ್ ಮತ್ತು ಪ್ರಜ್ವಲ್ ಎಂಬವರು ತೆರಳಿದ್ದಾರೆ. ರಾತ್ರಿ 2 ಗಂಟೆಯ ಸುಮಾರಿಗೆ ಜೈಸನ್ ಸುರತ್ಕಲ್ ಮತ್ತು ಧನುಷ್ ಎಂಬವರ ಮಧ್ಯೆ ಜಗಳವಾಗಿದ್ದು, ಈ ವೇಳೆ ಜೈಸನ್ ತನ್ನಲ್ಲಿರುವ ಹರಿತವಾದ ಆಯುಧದಿಂದ ಧನುಷ್ ಗೆ ಚುಚ್ಚಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯಿಂದ ತೀವ್ರವಾಗಿ ಗಾಯಗೊಂಡ ಧನುಷ್‌ನನ್ನು ಇಂಡಿಯಾನ ಆಸ್ಪತ್ರೆಗೆ ಚಿಕಿತ್ಸೆಯ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


SHARE THIS

Author:

0 التعليقات: