ಫೈಝಾಬಾದ್ ರೈಲ್ವೆ ಜಂಕ್ಷನ್ ಅನ್ನು ಅಯೋಧ್ಯೆ ಕಂಟೋನ್ಮೆಂಟ್ ಎಂದು ಮರುನಾಮಕರಣಕ್ಕೆ ನಿರ್ಧಾರ
ಹೊಸದಿಲ್ಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತನ್ನ ರಾಜ್ಯದ ಫೈಝಾಬಾದ್ ರೈಲ್ವೆ ಜಂಕ್ಷನ್ ಅನ್ನು ಅಯೋಧ್ಯೆ ಕಂಟೋನ್ಮೆಂಟ್ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದಾರೆ.
ಉತ್ತರಪ್ರದೇಶದ ಸಿಎಂ ಕಚೇರಿಯ ಟ್ವಿಟರ್ ಹ್ಯಾಂಡಲ್ ನಲ್ಲಿ ಶನಿವಾರ ಈ ಘೋಷಣೆ ಮಾಡಲಾಗಿದೆ.
ಉತ್ತರಪ್ರದೇಶ ಸಿಎಂ ಚಿತ್ರವನ್ನು ಹೊಂದಿರುವ ಟ್ವೀಟ್ ಹೀಗಿದೆ: "ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಫೈಝಾಬಾದ್ ರೈಲ್ವೆ ಜಂಕ್ಷನ್ ಹೆಸರನ್ನು ಅಯೋಧ್ಯೆ ಕ್ಯಾಂಟ್ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದಾರೆ''.
0 التعليقات: