Thursday, 28 October 2021

ಪುತ್ರಿಯ ಜೀವತೆಗೆದ ತಂದೆ


ಪುತ್ರಿಯ ಜೀವತೆಗೆದ ತಂದೆ

ಚಿಕ್ಕಮಗಳೂರು: ಮನೆಯವರಿಗೆ ಇಷ್ಟವಿಲ್ಲದಿದ್ದರೂ ಪ್ರೀತಿಸಿದವನನ್ನೇ ಮದುವೆಯಾಗಲು ಹಠಹಿಡಿದಿದ್ದ ಪುತ್ರಿಯನ್ನು ತಂದೆಯೇ ಕೊಲೆಮಾಡಿದ ಘಟನೆ ಬೀರೂರಿನಲ್ಲಿ ಬುಧವಾರ ರಾತ್ರಿ ನಡೆದಿದೆ.

ಶಿಕಾರಿಪುರ ತಾಲ್ಲೂಕು ಕೆಂಚನಕೊಪ್ಪದ ಚಂದ್ರಪ್ಪ ಕೊಲೆ ಆರೋಪಿ. ಆತ ತನ್ನ ಪುತ್ರಿ ರಾಧಾಳನ್ನು ಬುಧವಾರ 8.30 ರ ಸುಮಾರಿಗೆ ಬೀರೂರು ರೈಲ್ವೆ ಗೇಟ್ ಸಮೀಪ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಆರೋಪ ಕೇಳಿಬಂದಿದೆ.

ರಾಧಾ ಅದೇ ಊರಿನ ಯುವಕನನ್ನು ಪ್ರೀತಿಸಿದ್ದು, ಆಕೆ ಮನೆಯವರಿಗೆಗೆ ಇಷ್ಟ ಇರಲಿಲ್ಲ. ಆಕೆಯನ್ನು ಚಂದ್ರಪ್ಪನ ಸೋದರಿಯ ಮನೆಯಲ್ಲಿ ಬಿಡಲಾಗಿತ್ತು. ಊರಿನಲ್ಲಿ ಹಬ್ಬವಿದ್ದ ಕಾರಣ ಮಗಳನ್ನು ಬುಧವಾರ ರಾತ್ರಿ ಬೈಕ್ ನಲ್ಲಿ ಊರಿಗೆ ಕರೆದುಕೊಂಡು ಬರುತ್ತಿದ್ದ ಚಂದ್ರಪ್ಪ ಮಗಳಿಗೆ ಬುದ್ಧಿವಾದ ಹೇಳಿದ್ದಾನೆ. ಆದರೆ ಮಗಳು ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಇದರಿಂದ ಸಿಟ್ಟಾದ ಚಂದ್ರಪ್ಪ ವೇಲ್ ನಿಂದ ಕುತ್ತಿಗೆ ಬಿಗಿದು ಪುತ್ರಿಯನ್ನು ಕೊಲೆ ಮಾಡಿ ಮೃತದೇಹವನ್ನು ಬಿಟ್ಟು ಮಧ್ಯರಾತ್ರಿ 2.30 ರ ವೇಳೆಗೆ ಮನೆಗೆ ತಲುಪಿದ್ದಾನೆ. ಮನೆಯವರಿಗೆ ವಿಷಯ ತಿಳಿಸಿ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಆತನಿಗೆ ಸಮಾಧಾನ ಮಾಡಿದ ಮನೆಯವರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಚಂದ್ರಪ್ಪನಿಂದ ಮಾಹಿತಿ ಪಡೆದ ಪೊಲೀಸರು ಆತನನ್ಜು ಬೀರೂರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬೀರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.SHARE THIS

Author:

0 التعليقات: