ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಚೇರಿಯಲ್ಲಿ ಅಗ್ನಿ ಆಕಸ್ಮಿಕ
ಕೋಲ್ಕತಾ: ಪಶ್ಚಿಮ ಬಂಗಾಳ ಸಚಿವಾಲಯದ 14 ನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಚೇರಿಯಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ ಎಂದು India Today ವರದಿ ಮಾಡಿದೆ.
ಪಶ್ಚಿಮ ಬಂಗಾಳದ ತಾತ್ಕಾಲಿಕ ರಾಜ್ಯ ಕಾರ್ಯಾಲಯವನ್ನು ಹೊಂದಿರುವ ನಬನ್ನಾದ ಕೆಲಸಗಾರರು 14 ನೇ ಮಹಡಿಯಿಂದ ಹೊಗೆ ಹೊರಬರುವುದನ್ನು ನೋಡಿದರು. ಕೂಡಲೇ ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ಧಾವಿಸಿದರು.
ಇದು ದೊಡ್ಡ ಬೆಂಕಿಯಲ್ಲ ಮತ್ತು ನಿಯಂತ್ರಣದಲ್ಲಿದೆ. ದುರ್ಗಾ ಪೂಜೆಯಿಂದಾಗಿ ರಾಜ್ಯ ಕಾರ್ಯಾಲಯ ಮುಚ್ಚಿರುವುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
0 التعليقات: