Friday, 1 October 2021

ಕೊಲ್ಲೂರು: ಪರೀಕ್ಷಾ ಭಯದಿಂದ ಪಿಯು ವಿದ್ಯಾರ್ಥಿ ಆತ್ಮಹತ್ಯೆ

 ಕೊಲ್ಲೂರು: ಪರೀಕ್ಷಾ ಭಯದಿಂದ ಪಿಯು ವಿದ್ಯಾರ್ಥಿ ಆತ್ಮಹತ್ಯೆ

ಕೊಲ್ಲೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಭಯದಿಂದ ವಿದ್ಯಾಭ್ಯಾಸ ದಲ್ಲಿ ಹಿಂದುಳಿದ್ದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಘಟನೆ ಸೆ.30ರಂದು ಬೆಳಗ್ಗೆಯಿಂದ ಸಂಜೆಯ ಮಧ್ಯಾವಧಿಯಲ್ಲಿ ಜಡ್ಕಲ್ ಗ್ರಾಮದ ಕಟ್ಟಿನಗದ್ದೆ ಎಂಬಲ್ಲಿ ನಡೆದಿದೆ.

ಮೃತರನ್ನು ಕಟ್ಟಿನಗದ್ದೆ ನಿವಾಸಿ ಮೂಕಾಂಬು ಶೆಡ್ತಿ ಹಾಗೂ ಶೇಖರ್ ಶೆಟ್ಟಿ ದಂಪತಿ ಪುತ್ರ ಸುದೀಪ (18) ಎಂದು ಗುರುತಿಸಲಾಗಿದೆ.

ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಯಾಗಿದ್ದ ಈತ, ಕಾಲೇಜಿನ ಪರೀಕ್ಷೆಯ ಬಗ್ಗೆ ಭಯ ಹೊಂದಿದ್ದನು. ವಿದ್ಯಾಭ್ಯಾಸದಲ್ಲಿ ಹಿಂದುಳಿದ್ದ ಸುದೀಪ, ಇದೇ ಕಾರಣದಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


SHARE THIS

Author:

0 التعليقات: