Thursday, 14 October 2021

ಸಿದ್ದಾಪುರ: ಸಾಂಬಾರು ಸರಿಯಾಗಿಲ್ಲ ಎಂದು ತಾಯಿ, ತಂಗಿಗೆ ಗುಂಡಿಕ್ಕಿ ಕೊಲೆ


 ಸಿದ್ದಾಪುರ: ಸಾಂಬಾರು ಸರಿಯಾಗಿಲ್ಲ ಎಂದು ತಾಯಿ, ತಂಗಿಗೆ ಗುಂಡಿಕ್ಕಿ ಕೊಲೆ

ಸಿದ್ದಾಪುರ: ಯುವನೋರ್ವ ಸಾಂಬಾರು ಸರಿಯಾಗಿಲ್ಲ ಎಂದು ಜಗಳ ತೆಗೆದು ನಾಡ ಬಂದೂಕಿನಿಂದ ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ದೊಡ್ಮನೆ ಗ್ರಾಮದ ಕುಡಗೋಡು ಬಳಿ ನಡೆದಿದೆ.

ಮಂಜುನಾಥ ಹಸ್ಲರ್ (24) ಕೊಲೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದು, ಪಾರ್ವತಿ ನಾರಾಯಣ ಹಸ್ಲರ್ (42), ರಮ್ಯಾ ನಾರಾಯಣ ಹಸ್ಲರ್(19) ಮೃತರು ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ ಸಾಂಬಾರು ಸರಿಯಾಗಿಲ್ಲವೆಂದು ಜಗಳ ತೆಗೆದಿದ್ದ ಮಂಜುನಾಥ, ನಾಡ ಬಂದೂಕಿನಿಂದ ಗುಂಡು ಹಾರಿಸಿ ಇಬ್ಬರ ಕೊಲೆ ಮಾಡಿದ್ದಾನೆ‌ ಎಂದು ತಿಳಿದುಬಂದಿದೆ. ಘಟನೆ ನಡೆಯುವ ವೇಳೆ ತಂದೆ ಮನೆಯಲ್ಲಿ ಇರಲಿಲ್ಲ. ನಂತರ ಕೊಲೆ ಮಾಡಿರುವ ಕುರಿತು ತಂದೆಯೇ ಮಗನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


SHARE THIS

Author:

0 التعليقات: