ಸಿ.ಅಬ್ದುಲ್ಲಾ ಮುಸ್ಲಿಯಾರ್ ಸುನ್ನಿ ಮದ್ರಸ ಉದ್ಘಾಟನೆ
ಕಾಸರಗೋಡು : ಮುಹಿಮ್ಮಾತುಲ್ ಮುಸ್ಲಿಮೀನ್ ಎಜ್ಯೂಕೇಶನಲ್ ಸೆಂಟರಿನ ಅಡಿಯಲ್ಲಿ, ಎ.ಕೆ.ಜಿ ನಗರ ಎಂಬ ಸ್ಥಳದಲ್ಲಿ ಹೊಸದಾಗಿ ಆರಂಭಿಸಿದ ಸಿ.ಅಬ್ದುಲ್ಲಾ ಮುಸ್ಲಿಯಾರ್ ಸುನ್ನಿ ಮದ್ರಸದ ಉದ್ಘಾಟನಾ ಕಾರ್ಯಕ್ರಮವನ್ನು ಕೇಂದ್ರ ಮುಶಾವರ ಸದಸ್ಯರೂ ಕರ್ನಾಟಕದ ಬಹುತೇಕ ಪ್ರದೇಶಗಳ ಖಾಝಿ ಆಗಿರುವ ಫಝಲ್ ಕೋಯಮ್ಮ ತಂಙಳ್ ಕೂರ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಹಿಮ್ಮಾತ್ ಉಪಾಧ್ಯಕ್ಷರಾಗಿರುವ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್, ಉಮರ್ ಸಖಾಫಿ ಕರ್ನೂರ್, ವೈ.ಎಂ ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ ಕಳತ್ತೂರ್ ಮುಂತಾದವರು ಭಾಗವಹಿಸಿದರು.
0 التعليقات: