Friday, 29 October 2021

ಇನ್ನೂ ಒಂದು ರಾತ್ರಿ ಅರ್ಥರ್ ರೋಡ್ ಜೈಲಿನಲ್ಲಿ ಕಳೆಯಲಿರುವ ಆರ್ಯನ್ ಖಾನ್


 ಇನ್ನೂ ಒಂದು ರಾತ್ರಿ ಅರ್ಥರ್ ರೋಡ್ ಜೈಲಿನಲ್ಲಿ ಕಳೆಯಲಿರುವ ಆರ್ಯನ್ ಖಾನ್

 ಮುಂಬೈ: ಆರ್ಥರ್ ರೋಡ್ ಜೈಲಿನ ಅಧಿಕಾರಿಗಳು ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನು ಅಕ್ಟೋಬರ್ 29 ಶುಕ್ರವಾರ ಬಿಡುಗಡೆ ಮಾಡುವುದಿಲ್ಲ ಎಂದು ಖಚಿತಪಡಿಸಿದ್ದಾರೆ.

 "ಆರ್ಯನ್ ಇಂದು ಬಿಡುಗಡೆಯಾಗುವುದಿಲ್ಲ, ನಾಳೆ ಬಿಡುಗಡೆಯಾಗುತ್ತಾರೆ" ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

26 ದಿನಗಳ ಕಾಲ ಬಂಧನದಲ್ಲಿದ್ದ ಆರ್ಯನ್ ಖಾನ್ ಗೆ  ಅಕ್ಟೋಬರ್ 28 ರಂದು ಜಾಮೀನು ನೀಡಲಾಯಿತು. ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಅರ್ಬಾಝ್  ಮರ್ಚೆಂಟ್ ಹಾಗೂ  ಮುನ್‌ಮುನ್ ಧಮೇಚಾ ಅವರಿಗೂ ಜಾಮೀನು ನೀಡಲಾಗಿದೆ.

ಜೈಲಿನ ಅಧಿಕಾರಿಗಳ ಪ್ರಕಾರ, ಜೈಲಿನಲ್ಲಿ ಕಾಗದಪತ್ರದ  ಕೆಲಸಕ್ಕಾಗಿ ಶುಕ್ರವಾರ ಸಂಜೆ 5.30 ರ ಗಡುವು ತಪ್ಪಿಸಿಕೊಂಡಿರುವುದರಿಂದ ಆರ್ಯನ್ ಖಾನ್ ಶನಿವಾರವಷ್ಟೇ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಗುರುವಾರ ಜಾಮೀನು ಪಡೆದ ಆರ್ಯನ್ ಖಾನ್ ಶುಕ್ರವಾರ ಜೈಲಿನಿಂದ ಹೊರಬರುವ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿವಿಧಾನಗಳಿಗೆ ಸಮಯ ತೆಗೆದುಕೊಂಡಿದ್ದು  ಸಂಜೆ 5:30 ರ ಮೊದಲು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಅವರು ಜೈಲಿನಲ್ಲಿ ಮತ್ತೊಂದು ರಾತ್ರಿ ಕಳೆಯಬೇಕಾಗಿದೆ.

ಈ ಹಿಂದೆ ಆರ್ಯನ್ ಖಾನ್ ಬಿಡುಗಡೆಗಾಗಿ ಬಾಲಿವುಡ್ ನಟಿ ಜೂಹಿ ಚಾವ್ಲಾ 1 ಲಕ್ಷ ರೂಪಾಯಿ ಜಾಮೀನು ಬಾಂಡ್‌ಗೆ ಸಹಿ ಹಾಕಿದ್ದರು. ಬಾಂಬೆ ಹೈಕೋರ್ಟ್ ಶುಕ್ರವಾರ ಆರ್ಯನ್ ಖಾನ್ ಅವರನ್ನು 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್‌ನಲ್ಲಿ ಅದೇ ಮೊತ್ತದ ಒಂದು ಅಥವಾ ಇಬ್ಬರು ಶ್ಯೂರಿಟಿಗಳೊಂದಿಗೆ ಬಿಡುಗಡೆ ಮಾಡಬೇಕೆಂದು ತೀರ್ಪು ನೀಡಿತ್ತು. 


SHARE THIS

Author:

0 التعليقات: