ಕನ್ನಡದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಅವಕಾಶ ನೀಡುವಂತೆ ಒತ್ತಾಯಿಸಿ

ಬೆಂಗಳೂರು: ಯುಪಿಎಸ್ ಸಿ ಪರೀಕ್ಷೆಗಳನ್ನು ಎಲ್ಲ ಹಂತಗಳಲ್ಲೂ ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಕಿಕೆ ನೀಡಬೇಕೆಂದು ಒತ್ತಾಯಿಸಿ #UPSCInKannada #ಕನ್ನಡದಲ್ಲಿUPSC ಹ್ಯಾಶ್ ಟ್ಯಾಗ್ ನೊಂದಿಗೆ ಕನ್ನಡ ರಕ್ಷಣಾ ವೇದಿಕೆ(ಕರವೇ) ಆರಂಭಿಸಿರುವ ಟ್ವಿಟರ್ ಅಭಿಯಾನ ಟ್ರೆಂಡಿಂಗ್ ಆಗಿದೆ.
''ಯುಪಿಎಸ್ ಸಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶವಿಲ್ಲದಂತಾಗಿರುವಾಗ ಯುಪಿಎಸ್ ಸಿ ಪರೀಕ್ಷೆಗಳೇ ಯಾಕೆ ಬೇಕು ಎಂದು ನಾವು ಕೇಳಬೇಕಾಗುತ್ತೆ. ನಮ್ಮ ರಾಜ್ಯದ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಕೆಪಿಎಸ್ ಸಿ ಮೂಲಕವೇ ನೇಮಕ ಮಾಡಬೇಕು ಎಂಬ ಹಕ್ಕೊತ್ತಾಯ ಮಂಡಿಸುವ ಕಾಲ ಬಂದಿದೆ'' ಎಂದು ಕರವೇ ಅಧ್ಯಕ್ಷ ಟಿ.ನಾರಾಯಣ ಗೌಡ ಅವರು ಒತ್ತಾಯಿಸಿದ್ದಾರೆ.
''ಪ್ರಶ್ನ ಪತ್ರಿಕೆ ಇಂಗ್ಲೀಶ್/ ಹಿಂದಿಯಲ್ಲಿ ಇದ್ದರೆ ಹೇಗೆ ಕನ್ನಡದಲ್ಲಿ ಬರೆಯುವವರಿಗೆ ಕಷ್ಟ ಎನ್ನಲು ನನಗೆ ತಿಳಿದಿರುವ IPS ಅಧಿಕಾರಿಯೊಬ್ಬರು ಉದಾಹರಣೆ ನೋಡಿ, ಪ್ರಶ್ನೆಯಲ್ಲಿ amorphous ಅನ್ನೋ ಪದವಿದೆ ಈ ಪದವನ್ನು ಎಷ್ಟು ಜನ ಕನ್ನಡ ಮಾಧ್ಯಮದ ಯುವಕರು ಅರ್ಥಮಾಡಿಕೊಳ್ಳೋಕ್ಕೆ ಸಾಧ್ಯ?'' ಎಂದು ಅರುಣ್ ಜಾಬಗಲ್ ಎಂಬವರು ಪ್ರಶ್ನೆಮಾಡಿದ್ದಾರೆ.
''ಕನ್ನಡದಲ್ಲಿ ಯುಪಿಎಸ್ಸಿ ಪ್ರಿಲಿಮಿನರಿ ಪರೀಕ್ಷೆ ನಡೆಯದ ಕಾರಣದಿಂದ ಲಕ್ಷಾಂತರ ಕನ್ನಡಿಗ ಆಕಾಂಕ್ಷಿಗಳು ಮುಂದಿನ ಹಂತದ ಪರೀಕ್ಷೆಗಳಿಗೆ ಪ್ರವೇಶಿಸುವ ಬಾಗಿಲು ಮುಚ್ಚಿಕೊಂಡಿದೆ. ಇದು ಕನ್ನಡಿಗರಿಗೆ ಯುಪಿಎಸ್ ಸಿ ಎಸಗುತ್ತಿರುವ ದೊಡ್ಡ ಅನ್ಯಾಯ. ಈ ಸಲದಿಂದಲೇ ಕನ್ನಡದಲ್ಲಿ ಯುಪಿಎಸ್ ಸಿ ಜಾರಿಗೆ ಬರಲಿ'' ಎಂದು ಹಲವರು ಒತ್ತಾಯಿಸಿದ್ದಾರೆ.
0 التعليقات: