ಸತತ ಐದನೇ ದಿನವೂ ದೇಶಾದ್ಯಂತ ಇಂಧನ ದರ ಏರಿಕೆ
ಹೊಸದಿಲ್ಲಿ: ರವಿವಾರ ಸತತ ಐದನೇ ದಿನವೂ ದೇಶಾದ್ಯಂತ ಇಂಧನ ದರ ಏರಿಕೆಯಾಗಿರುವುದರಿಂದ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 115 ರೂಪಾಯಿ ದಾಟಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ 34 ಪೈಸೆ ಹಾಗೂ 37 ಪೈಸೆ ಏರಿಕೆಯಾಗಿದೆ.
ಮುಂಬೈನಲ್ಲಿ ರವಿವಾರ ಪೆಟ್ರೋಲ್ ದರ ಲೀಟರ್ಗೆ 115.15 ರೂ., ಡೀಸೆಲ್ ಬೆಲೆ ಲೀಟರ್ಗೆ 106.23 ರೂ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ, ಪೆಟ್ರೋಲ್ ಬೆಲೆ ಲೀಟರ್ಗೆ ರೂ 109.34 ರ ಗರಿಷ್ಠ ಮಟ್ಟಕ್ಕೆ ಏರಿದರೆ, ಡೀಸೆಲ್ ಬೆಲೆ ಲೀಟರ್ಗೆ ರೂ 98.07 ರಷ್ಟಿದೆ.
ಇಂಧನ ಉತ್ಪನ್ನಗಳು ರಾಜಸ್ಥಾನದ ಗಂಗಾನಗರ ಪಟ್ಟಣದಲ್ಲಿ ಅತ್ಯಂತ ದುಬಾರಿಯಾಗಿದೆ. ಅಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 121.62 ರೂ ಹಾಗೂ ಡೀಸೆಲ್ ಬೆಲೆ ಲೀಟರ್ಗೆ 112.52 ರೂ ತಲುಪಿದೆ ಎಂದು ಮಿಂಟ್ ವರದಿ ಮಾಡಿದೆ.
ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 100 ರೂಪಾಯಿ ಗಡಿ ದಾಟಿದೆ.
0 التعليقات: