Saturday, 2 October 2021

ನಾಲ್ಕನೇ ದಿನವೂ ಪೆಟ್ರೋಲ್ - ಡಿಸೇಲ್ ಬೆಲೆ ಏರಿಕೆ

ನಾಲ್ಕನೇ ದಿನವೂ ಪೆಟ್ರೋಲ್ - ಡಿಸೇಲ್ ಬೆಲೆ ಏರಿಕೆ

ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಭಾನುವಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ.

ಸತತ ನಾಲ್ಕನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 25 ಪೈಸೆ ಮತ್ತು ಡೀಸೆಲ್ ದರ 30 ಪೈಸೆಯಷ್ಟು ಹೆಚ್ಚಾಗಿದೆ.ಬೆಲೆ ಏರಿಕೆ ನಂತರ ದೆಹಲಿಯಲ್ಲಿ ಪೆಟ್ರೋಲ್ ದರ 102.39 ರೂ. ಆಗಿದೆ. ಮುಂಬೈನಲ್ಲಿ 108.43 ರೂ.ಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಆದ ಬದಲಾವಣೆಯಿಂದ ತೈಲ ಬೆಲೆ ಏರಿಕೆಯಾಗಿದೆ. ಅಂತರಾಷ್ಟ್ರೀಯ ತೈಲ ಬೆಲೆ ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ ಬ್ಯಾರೆಲ್ ಗೆ 78 ಡಾಲರ್ ಗೆ ತಲುಪಿದೆ. 


SHARE THIS

Author:

0 التعليقات: