Sunday, 3 October 2021

ಬಂಬ್ರಾಣ: ಆರು ಮಂದಿಗೆ ಚೂರು ಇರಿತ, ಮೂವರ ಸ್ಥಿತಿ ಗಂಭೀರ

ಬಂಬ್ರಾಣ: ಆರು ಮಂದಿಗೆ ಚೂರು ಇರಿತ, ಮೂವರ ಸ್ಥಿತಿ ಗಂಭೀರ

ಕಾಸರಗೋಡು, ಅ.4: ಕ್ಷುಲ್ಲಕ ವಿಚಾರದಲ್ಲಿ ಯುವಕನೋರ್ವ ಆರು ಮಂದಿಗೆ ಚೂರಿಯಿಂದ ಇರಿದ ಘಟನೆ ರವಿವಾರ ರಾತ್ರಿ ಕುಂಬಳೆ ಸಮೀಪದ ಬಂಬ್ರಾಣದಲ್ಲಿ ನಡೆದಿರುವುದು ವರದಿಯಾಗಿದೆ.

ಬಂಬ್ರಾಣ ಸಮೀಪದ ಅಂಡಿತ್ತಡ್ಕ ಎಂಬಲ್ಲಿ ಈ ಘಟನೆ ನಡೆದಿದ್ದು, ಬಂಬ್ರಾಣದ ಕಿರಣ್ (29), ಕುದ್ರೆಪ್ಪಾಡಿಯ ಗುರುರಾಜ್(23), ನವೀನ್(22), ಧೀರಜ್ (21), ಪ್ರವೀಣ್ (21) ಮತ್ತು ಚರಣ್ (23) ಚೂರಿ ಇರಿತಕ್ಕೊಳಗಾದವರು. ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕೋಳಿ ಅಂಕದ ಸ್ಥಳದಲ್ಲಿ ಉಂಟಾದ ಮಾತಿನ ಚಕಮಕಿ ಕೃತ್ಯಕ್ಕೆ ಕಾರಣ ಎನ್ನಲಾಗಿದೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 


 


SHARE THIS

Author:

0 التعليقات: