Friday, 1 October 2021

ಕೆಕೆಆರ್ ಗೆ ಪಂಜಾಬ್ ಕಿಂಗ್ಸ್ ಪಂಚ್


ಕೆಕೆಆರ್ ಗೆ ಪಂಜಾಬ್ ಕಿಂಗ್ಸ್ ಪಂಚ್

ದುಬೈ : ನಾಯಕ ಕೆ.ಎಲ್.ರಾಹುಲ್ ಆಕರ್ಷಕ ಅರ್ಧ ಶತಕದ ಸಹಾಯದಿಂದ ಪಂಜಾಬ್ ಕಿಂಗ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ನ 45ನೇ ಪಂದ್ಯವನ್ನು 5 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ.

ಗೆಲ್ಲಲು 166 ರನ್ ಗುರಿ ಪಡೆದ ಪಂಜಾಬ್ 19.3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ168 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ರಾಹುಲ್(67, 55 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಮಯಾಂಕ್ ಅಗರ್ವಾಲ್(40, 27 ಎಸೆತ, 3 ಬೌಂಡರಿ, 3 ಸಿಕ್ಸರ್)ಮೊದಲ ವಿಕೆಟ್ ಗೆ 70 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಮಯಾಂಕ್ ನಿರ್ಗಮನದ ಬಳಿಕ ಬಂದ ನಿಕೊಲಸ್ ಪೂರನ್(12), ಏಡೆನ್ ಮರ್ಕರಮ್(18)ದೀಪಕ್ ಹೂಡ(3)ಬೇಗನೆ ಔಟಾದರು. ಶಾರೂಖ್ ಖಾನ್(ಔಟಾಗದೆ 22, 9 ಎಸೆತ) ಸಿಕ್ಸರ್ ಸಿಡಿಸುವ ಮೂಲಕ ಪಂಜಾಬ್ ಗೆ ಗೆಲುವು ತಂದರು.




SHARE THIS

Author:

0 التعليقات: