Friday, 8 October 2021

ಲಖಿಂಪುರ್‌ ಖೇರಿ ಪ್ರಕರಣ: ಉ.ಪ್ರ ಸರಕಾರ ಕೈಗೊಂಡ ಕ್ರಮಗಳ ಕುರಿತು ನಮಗೆ ತೃಪ್ತಿಯಿಲ್ಲ ಎಂದ ಸುಪ್ರೀಂಕೋರ್ಟ್‌


 ಲಖಿಂಪುರ್‌ ಖೇರಿ ಪ್ರಕರಣ: ಉ.ಪ್ರ ಸರಕಾರ ಕೈಗೊಂಡ ಕ್ರಮಗಳ ಕುರಿತು ನಮಗೆ ತೃಪ್ತಿಯಿಲ್ಲ ಎಂದ ಸುಪ್ರೀಂಕೋರ್ಟ್‌

ಲಕ್ನೋ: ಲಖಿಂಪುರ್‌ ಖೇರಿಯಲ್ಲಿ ರೈತರ ಮೇಲೆ ಸಚಿವರ ಪುತ್ರ ಮತ್ತು ಸಹಚರರು ಕಾರು ಹರಿಸಿದ್ದರ ಪರಿಣಾಮ ಉಂಟಾದ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದ ಕುರಿತು ಉತ್ತರಪ್ರದೇಶ ಸರಕಾರ ತೋರಿದ ಧೋರಣೆ ಕುರಿತು ಸುಪ್ರೀಂ ಕೋರ್ಟ್‌ ಟೀಕಿಸಿದೆ. 

"ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರಕಾರ ತೆಗೆದುಕೊಂಡ ಕ್ರಮದಿಂದ ನಾವು ತೃಪ್ತರಾಗಿಲ್ಲ. ನಾವು ನಿರೀಕ್ಷಿಸುವುದು ಜವಾಬ್ದಾರಿಯುತ ಸರಕಾರ ಮತ್ತು ಪೊಲೀಸರನ್ನಾಗಿದೆ. ಗುಂಡಿನ ಗಾಯಗಳು ಸೇರಿದಂತೆ ಆರೋಪಗಳು ತೀರಾ ಗಂಭೀರವಾಗಿದೆ" ಎಂದು ವಿಚಾರಣೆಯ ಸಂದರ್ಭ ಸಿಜೆಐ ಎನ್‌ವಿ ರಮಣ ಹೇಳಿಕೆ ನೀಡಿದ್ದಾರೆ.

"ನೀವು ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದೀರಿ? ಸಾಮಾನ್ಯ ಪ್ರಕರಣಗಳಲ್ಲೂ ಪೊಲೀಸರು ಕೂಡಲೇ ತೆರಳಿ ಆರೋಪಿಗಳನ್ನು ಬಂಧಿಸುವುದಿಲ್ಲವೇ? ಯಾವ ರೀತಿ ಕ್ರಮ ಕೈಗೊಳ್ಳಬೇಕಾಗಿತ್ತೋ, ಅದು ನಡೆದಿಲ್ಲ. ಕೇವಲ ಮಾತಿನಲ್ಲಿ ಮಾತ್ರ ನಿರತರಾಗಿ ಯಾವುದೇ ಕ್ರಿಯೆಗಳನ್ನು ಕೈಗೊಳ್ಳುತ್ತಿಲ್ಲ ಎಂದೆನಿಸುತ್ತಿದೆ" ಎಂದು ಅವರು ಆಕ್ರೋಶಭರಿತರಾಗಿ ಹೇಳಿಕೆ ನೀಡಿದ್ದಾರೆ.

ಇತರ ಪ್ರಕರಣಗಳಲ್ಲಿ ಇತರ ವ್ಯಕ್ತಿಗಳನ್ನು ನಾವು ಹೇಗೆ ಪರಿಗಣಿಸುತ್ತೇವೆಯೋ ಅದೇ ರೀತಿ ಆರೋಪಿಗಳನ್ನು ಪರಿಗಣಿಸಿ" ಎಂದು ಮುಖ್ಯ ನ್ಯಾಯಾಧೀಶರು ಇಂದು ರಾಜ್ಯ ಸರ್ಕಾರವು ಪ್ರಕರಣದ ನಿರ್ವಹಣೆಯ ಬಗ್ಗೆ ಮತ್ತು ತನಿಖೆಯನ್ನು ಸಿಬಿಐಗೆ ವರ್ಗಾಯಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.


SHARE THIS

Author:

0 التعليقات: