Friday, 22 October 2021

ನಾಳೆ ಭಾರತ- ಪಾಕ್‌ ಹಣಾಹಣಿ

ನಾಳೆ ಭಾರತ- ಪಾಕ್‌ ಹಣಾಹಣಿ

ದುಬಾೖ: ರವಿವಾರ ಸಂಜೆ, ಸಮಯ 7.30… ಇಡೀ ಕ್ರಿಕೆಟ್‌ ಜಗತ್ತೇ ಸ್ತಬ್ಧವಾಗುವ ಸಮಯ. ಆರು ವರ್ಷಗಳ ಬಳಿಕ ಭಾರತ ಮತ್ತು ಪಾಕಿಸ್ಥಾನ ಟಿ20 ಪಂದ್ಯವೊಂದರಲ್ಲಿ ಮುಖಾಮುಖಿಯಾಗುತ್ತಿರುವುದೇ ಇದಕ್ಕೆ ಕಾರಣ. ಇಲ್ಲಿ ಯಾರೇ ಗೆದ್ದರೂ ಯಾರೇ ಸೋತರೂ ಅದು ಇಡೀ ಜಗತ್ತಿಗೇ ಅದು ಸುದ್ದಿ!

ಭಾರತವೇ ಫೇವರಿಟ್‌

ಭಾರತವೇ ಇಲ್ಲಿ ಫೇವರಿಟ್‌. ಇದಕ್ಕೆ ಕಾರಣವೆಂದರೆ ಇದುವರೆಗೆ ಭಾರತ ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಸೋತೇ ಇಲ್ಲ. ಇಲ್ಲಿಯ ವರೆಗೆ ಐದು ಬಾರಿ ಇತ್ತಂಡಗಳು ಮುಖಾಮುಖೀಯಾಗಿದ್ದು, ಪ್ರತೀ ಬಾರಿಯೂ ಭಾರತವೇ ಗೆದ್ದಿದೆ.

ಭಾರತ ಬಲಾಬಲ

ಕೊಹ್ಲಿ, ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌ ಭರ್ಜರಿ ಬ್ಯಾಟಿಂಗ್‌ ಫಾರ್ಮ್; ಬುಮ್ರಾ, ಭುವನೇಶ್ವರ್‌ ಕುಮಾರ್‌, ಜಡೇಜ, ಅಶ್ವಿ‌ನ್‌ ಅವರ ನಿಖರ ದಾಳಿಯ ಬಲವಿದೆ. ವಿಕೆಟ್‌ ಕೀಪರ್‌ಗಳಾದ ಇಶನ್‌ ಕಿಶನ್‌, ಪಂತ್‌ ಅವರೂ ಚೆನ್ನಾಗಿ ಬ್ಯಾಟ್‌ ಬೀಸಬಲ್ಲರು.

ತಂಡ:ವಿರಾಟ್‌ ಕೊಹ್ಲಿ (ನಾಯಕ)ರೋಹಿತ್‌ ಶರ್ಮ,ಕೆ.ಎಲ್‌.ರಾಹುಲ್‌ ,ಆರ್‌.ಅಶ್ವಿ‌ನ್‌ ,ಬುಮ್ರಾ , ಚಹರ್‌,ಇಶಾನ್‌ ಕಿಶನ್‌,ಜಡೇಜ,ಭುವಿ, ಶಮಿ , ಹಾರ್ದಿಕ್‌ ಪಾಂಡ್ಯ ,ಪಂತ್‌ ,ಸೂರ್ಯಕುಮಾರ್‌ ಯಾದವ್‌ ,ಶಾರ್ದೂಲ್ ಠಾಕೂರ್‌, ವರುಣ್‌ ಚಕ್ರವರ್ತಿ

ಪಾಕಿಸ್ಥಾನ ಬಲಾಬಲ

ಬಾಬರ್‌ ಅಜಮ್‌ ಅವರ ನಾಯಕತ್ವ ಮತ್ತು ಬ್ಯಾಟಿಂಗ್‌ ಪಾಕ್‌ಗೆ ಬಲ. ಹಾಗೆಯೇ ಫ‌ಖರ್‌ ಜಮಾನ್‌, ಹೈದರ್‌ ಅಲಿ, ಆಸಿಫ್ ಅಲಿ ಬ್ಯಾಟಿಂಗ್‌ ಬಲವಿದೆ. ಶಬಾಬ್‌ ಖಾನ್‌, ಹ್ಯಾರೀಸ್‌ ರೌಫ್, ಶಹೀನ್‌ ಶಾ ಅಫ್ರಿದಿ ಬೌಲಿಂಗ್‌ ಬಲವಿದೆ.

ತಂಡ:ಬಾಬರ್‌ ಅಜಮ್‌ (ನಾಯಕ) ,ಶಬಾದ್‌ಖಾನ್‌ ,ಆಸಿಫ್ ಅಲಿ , ಫ‌ಖರ್‌ ಜಮಾನ್‌ ,ಹೈದರ್‌ ಅಲಿ,  ಹ್ಯಾರೀಸ್‌ ರೌಫ್, ಹಸನ್‌ ಅಲಿ ,ಇಮಾದ್‌ ವಾಸಿಮ್‌,ಮೊಹಮ್ಮದ್‌ ಹಫೀಜ್‌ ,ಮೊಹಮ್ಮದ್‌ ನವಾಜ್‌ ,ಮೊಹಮ್ಮದ್‌ ರಿಜ್ವಾನ್‌ ,ಮೊಹಮ್ಮದ್‌ ವಾಸಿಮ್‌ , ಸಫ್ರಾಜ್‌ ಅಹ್ಮದ್‌ ,ಶಹೀನ್‌ ಶಾ ಅಫ್ರಿದಿ ,ಶೋಯಿಬ್‌ ಮಲಿಕ್‌.SHARE THIS

Author:

0 التعليقات: