Monday, 4 October 2021

ಮತ್ತಷ್ಟು ದುಬಾರಿಯಾದ ಪೆಟ್ರೋಲ್-ಡೀಸೆಲ್; ಇಲ್ಲಿದೆ ಬೆಲೆ ವಿವರ!


ಮತ್ತಷ್ಟು ದುಬಾರಿಯಾದ ಪೆಟ್ರೋಲ್-ಡೀಸೆಲ್; ಇಲ್ಲಿದೆ ಬೆಲೆ ವಿವರ!

ಬೆಂಗಳೂರು (ಅಕ್ಟೋಬರ್​ 05); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol - Diesel Price) ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಸೋಮವಾರವೇ ಹೊಸ ಸಾರ್ವಕಾಲಿಕ ದಾಖಲೆ ಬರೆದಿತ್ತು. ರಾಷ್ಟ್ರಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ 1.50 ರೂ ವರೆಗೆ ಏರಿಕೆಯಾಗಿತ್ತು. ಆದರೆ, ಇಂದು ರಾಷ್ಟ್ರೀಯ ಮಟ್ಟದಲ್ಲಿ ತೈಲೆ ಬೆಲೆ ಏರಿಕೆಯಾಗಿಲ್ಲ. ಚೆನ್ನೈ, ಹೈದ್ರಾಬಾದ್, ದೆಹಲಿ ಸೇರಿದಂತೆ ಎಲ್ಲಾ ಪ್ರಮುಖ ನಗರಗಳ ತೈಲ ಬೆಲೆ ಸ್ಥಿರವಾಗಿದೆ. ಆದರೆ, ತೆರಿಗೆ ವ್ಯತ್ಯಾಸ ಮತ್ತು ಸಾರಿಗೆ ವೆಚ್ಚದ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಪೆಟ್ರೋಲ್-ಡೀಸೆಲ್​ ಬೆಲೆಯನ್ನು ಏರಿಸಲಾಗಿದೆ. ದಾವಣಗೆರೆಯಲ್ಲಿ ಇಂದು ಪೆಟ್ರೋಲ್ ಬೆಲೆಯನ್ನು ಅತ್ಯಧಿಕ 74 ಪೈಸೆ ಏರಿಸಿ, ಒಂದು ಲೀಟರ್​ ಪೆಟ್ರೋಲ್ ಅನ್ನು 108.06 ರೂ ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ಡೀಸೆಲ್ ಅನ್ನು76 ಪೈಸೆ ಏರಿಸಿದ್ದು, ಒಂದು ಲೀಟರ್​ ಡೀಸೆಲ್ 98.15 ರೂ ಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಇಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಆ ಕುರಿತ ವಿವರ ಇಲ್ಲಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

ಬಾಗಲಕೋಟೆ - 106.24 ರೂ. (50ಪೈಸೆ ಇಳಿಕೆ)

ಬೆಂಗಳೂರು - 105.95 ರೂ. (00)

ಬೆಂಗಳೂರು ಗ್ರಾಮಾಂತರ -105.59ರೂ. (00)

ಬೆಳಗಾವಿ - 106.46 ರೂ. (22 ಪೈಸೆ ಏರಿಕೆ)

ಬಳ್ಳಾರಿ - 107.85 ರೂ. (49 ಪೈಸೆ ಏರಿಕೆ )

ಬೀದರ್ - 106.51 ರೂ. (64 ಪೈಸೆ ಇಳಿಕೆ)

ಬಿಜಾಪುರ - 105.66 ರೂ. (11 ಪೈಸೆ ಏರಿಕೆ)

ಚಾಮರಾಜನಗರ - 106.51 ರೂ. (46 ಪೈಸೆ ಏರಿಕೆ)

ಚಿಕ್ಕಬಳ್ಳಾಪುರ - 106.58 ರೂ. (33 ಪೈಸೆ ಏರಿಕೆ)

ಚಿಕ್ಕಮಗಳೂರು - 106.89ರೂ. (46 ಪೈಸೆ ಇಳಿಕೆ)

ಚಿತ್ರದುರ್ಗ - 107.00 ರೂ. (60 ಪೈಸೆ ಇಳಿಕೆ)

ದಕ್ಷಿಣ ಕನ್ನಡ - 105.37 ರೂ. (47 ಪೈಸೆ ಇಳಿಕೆ)

ದಾವಣಗೆರೆ - 108.06 ರೂ. (74 ಪೈಸೆ ಏರಿಕೆ)

ಧಾರವಾಡ - 105.70 ರೂ. (00)

ಗದಗ - 106.15 ರೂ. (24 ಪೈಸೆ ಇಳಿಕೆ)

ಗುಲಬರ್ಗ - 106.94 ರೂ. (25 ಪೈಸೆ ಇಳಿಕೆ)

ಹಾಸನ - 106.35 ರೂ. (57 ಪೈಸೆ ಏರಿಕೆ)

ಹಾವೇರಿ - 106.79 ರೂ. (70 ಪೈಸೆ ಏರಿಕೆ)

ಕೊಡಗು - 107.21 ರೂ. (28 ಪೈಸೆ ಇಳಿಕೆ)

ಕೋಲಾರ - 105.82 ರೂ. (00)

ಕೊಪ್ಪಳ- 107.09 ರೂ. (07 ಪೈಸೆ ಏರಿಕೆ)

ಮಂಡ್ಯ - 105.75 ರೂ. (30 ಪೈಸೆ ಏರಿಕೆ)

ಮೈಸೂರು - 105.59 ರೂ. (14 ಪೈಸೆ ಏರಿಕೆ )

ರಾಯಚೂರು - 105.92 ರೂ. (08 ಪೈಸೆ ಏರಿಕೆ)

ರಾಮನಗರ - 106.55 ರೂ. (38 ಪೈಸೆ ಏರಿಕೆ)

ಶಿವಮೊಗ್ಗ - 107.44 ರೂ. (69 ಪೈಸೆ ಏರಿಕೆ)

ತುಮಕೂರು - 107.25 ರೂ. (41 ಪೈಸೆ ಇಳಿಕೆ)

ಉಡುಪಿ - 105.50 ರೂ. (15 ಪೈಸೆ ಇಳಿಕೆ)

ಉತ್ತರಕನ್ನಡ - 106.84 ರೂ . (00)

ಯಾದಗಿರಿ - 106.30 ರೂ. (12 ಪೈಸೆ ಇಳಿಕೆ ).


ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 100.01 ರೂ ಇದ್ದರೆ ಡೀಸೆಲ್​ ಬೆಲೆ 95.31 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 109.76 ರೂ ಆಗಿದ್ದರೆ, ಡೀಸೆಲ್​ ಬೆಲೆ 98.06 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 102.03 ರೂ ಮತ್ತು ಮಹಾರಾಷ್ಟ್ರದಲ್ಲಿ 108.43 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 97.84 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 108.80 ರೂ ಇದೆ. ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಎಂದು ಗುರುತಿಸಿಕೊಂಡಿದೆ.

ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.


SHARE THIS

Author:

0 التعليقات: