Tuesday, 19 October 2021

ರಾಜಸ್ಥಾನದಲ್ಲಿ ಅಪ್ರಾಪ್ತೆಯ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ


ರಾಜಸ್ಥಾನದಲ್ಲಿ ಅಪ್ರಾಪ್ತೆಯ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ಜೈಪುರ: ರಾಜಸ್ಥಾನದ ಭರತ್ಪುರದಿಂದ 16 ವರ್ಷದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅದರಲ್ಲಿ 5 ಜನ ದುಷ್ಕರ್ಮಿಗಳು ಈ ಅಪರಾಧ ಕೃತ್ಯ ಎಸಗಿದ್ದಾರೆ.

ಈ ಕುರಿತಂತೆ ಪೊಲೀಸರು ಮಾಹಿತಿ ನೀಡಿದ್ದು, ರಾಜಸ್ಥಾನದ ಭರತ್ಪುರದ ಗ್ರಾಮವೊಂದರಲ್ಲಿ ಐವರು ಆರೋಪಿಗಳಿಂದ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರೋದಾಗಿ ತಿಳಿದು ಬಂದಿದೆ.

ಅಕ್ಟೋಬರ್ 17ರಂದು ತಡರಾತ್ರಿ ನಡೆದಂತ ಈ ಘಟನೆ, ತಡವಾಗಿ ಇದೀಗ ಬೆಳಕಿಗೆ ಬಂದಿದೆ. ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರೋದಲ್ಲದೇ, ಅಪ್ರಾಪ್ತೆಯ ತಂದೆಯ ಜಮೀನಿನ ಬೆಳೆಗೂ ಬೆಂಕಿ ಹಚ್ಚಿದ್ದಾರೆ. ಇದರಿಂದ ಜಮೀನಿನಲ್ಲಿ ಬೆಳೆದಂತ ಬೆಳೆ ಕೂಡ ನಾಶಗೊಂಡಿದೆ. ಈ ಸಂಬಂಧ ಐವರ ವಿರುದ್ಧ ಪ್ರಕರವನ್ನು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.


SHARE THIS

Author:

0 التعليقات: