ರೈತರನ್ನು ಬೆಂಬಲಿಸಿ ಮಾಜಿ ಪ್ರಧಾನಿ ವಾಜಪೇಯಿ ಮಾಡಿದ್ದ ಭಾಷಣದ ತುಣುಕನ್ನು ಹಂಚಿಕೊಂಡ ವರುಣ್ ಗಾಂಧಿ
ಹೊಸದಿಲ್ಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 1980 ರಲ್ಲಿ ಮಾಡಿದ್ದ ಭಾಷಣದ ಸಂಕ್ಷಿಪ್ತ ತುಣುಕನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಗುರುವಾರ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ವಾಜಪೇಯಿ ಅವರು ರೈತರ ಮೇಲೆ ದಬ್ಬಾಳಿಕೆ ನಡೆಸದಂತೆ ಅಂದಿನ ಇಂದಿರಾ ಗಾಂಧಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ರೈತರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.
"ದೊಡ್ಡ ಹೃದಯದ ನಾಯಕನ ಬುದ್ಧಿವಂತ ಮಾತುಗಳು" ಎಂದು ಟ್ವೀಟಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಮೋದಿ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಆಂದೋಲನವನ್ನು ಬೆಂಬಲಿಸಿದರು. ವಾಜಪೇಯಿ ಅವರ ಭಾಷಣವನ್ನು ಹಂಚಿಕೊಳ್ಳುವ ಮೂಲಕ ಕೇಂದ್ರ ಸರಕಾರಕ್ಕೆ ತನ್ನ ಸಂದೇಶ ರವಾನಿಸಿದ್ದಾರೆಂದು ಭಾವಿಸಲಾಗಿದೆ.
" ಕಾನೂನುಗಳನ್ನು ದುರುಪಯೋಗಪಡಿಸಿಕೊಂಡು ಸರಕಾರವು ರೈತರನ್ನುದಮನ ಮಾಡಿದರೆ, ಶಾಂತಿಯುತ ಆಂದೋಲನವನ್ನು ನಿಗ್ರಹಿಸಿದರೆ, ನಾವು ರೈತರ ಹೋರಾಟಕ್ಕೆ ಸೇರಲು ಹಾಗೂ ಅವರೊಂದಿಗೆ ನಿಲ್ಲಲು ಹಿಂಜರಿಯುವುದಿಲ್ಲ" ಎಂದು ವಾಜಪೇಯಿ ಅವರು ರೈತರ ಸಭೆಯೊಂದರಲ್ಲಿ ಹೇಳುತ್ತಿರುವುದು ವಿಡಿಯೊ ತುಣುಕಿ ನಲ್ಲಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಬಿಜೆಪಿ ನಾಯಕರಿಗೆ ಸೇರಿದ್ದ ವಾಹನಗಳು ನಾಲ್ವರು ರೈತರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವರುಣ್ ಗಾಂಧಿ ಕೋರಿದ್ದಾರೆ. ಪಿಲಿಭಿತ್ ಸಂಸದ ವರುಣ್ ಗಾಂಧಿ ಮೇಲೆ ಅಸಮಾಧಾನಗೊಂಡಿರುವ ಪಕ್ಷದ ನಾಯಕತ್ವವು ಅವರನ್ನು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಯಿಂದ ಕೈಬಿಟ್ಟಿತ್ತು.
0 التعليقات: