Sunday, 24 October 2021

ನನ್ನ ತಂಟೆಗೆ ಬಂದ್ರೇ ನಿಮ್ಮ ಎಲ್ಲಾ ಪುರಾಣ ಬಿಚ್ಚಿಡುವೆ: ಶಾಸಕ ಜಮೀರ್ ಅಹ್ಮದ್


  ನನ್ನ ತಂಟೆಗೆ ಬಂದ್ರೇ ನಿಮ್ಮ ಎಲ್ಲಾ ಪುರಾಣ ಬಿಚ್ಚಿಡುವೆ: ಶಾಸಕ ಜಮೀರ್ ಅಹ್ಮದ್

ಕಲಬುರ್ಗಿ: ನಾನು ಬಸ್ ಮಾಲೀಕನೇ ಹೊರತು, ನಿಮ್ಮ ಹಾಗೆ ಸ್ಕೂಟರ್ ಇಟ್ಟುಕೊಂಡು ಕಸ ಗುಡಿಸ್ತಾ ಇರಲಿಲ್ಲ. ನಮ್ಮ ತಾತನ ಕಾಲದಿಂದೂ ಬಸ್ ಇದೆ. ಕುಮಾರಸ್ವಾಮಿ ಸಾಕಿದ್ದೇ ನಾನು, ನನ್ನ ತಂಟೆಗೆ ಬಂದ್ರೇ, ನಿಮ್ಮ ಎಲ್ಲಾ ಪುರಾಣ ಬಿಚ್ಚಿಡುವೆ ಎಂಬುದಾಗಿ ಶಾಸಕ ಜಮೀರ್ ಅಹ್ಮದ್ ಖಾನ್, ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಶಾಸಕನಾಗಿದ್ದೇ ದೇವೇಗೌಡರಿಂದಾಗಿದೆ. ಅವರ ಋಣ ನನ್ನ ಮೇಲಿದೆ. ಅದು ಬಿಟ್ಟು ಕುಮಾರಸ್ವಾಮಿಯಿಂದ ನಾನೇನು ಶಾಸಕನಾಗಿಲ್ಲ. ನಮ್ಮ ನಾಯಕ ಸಿದ್ದರಾಮಯ್ಯ ಹುಲಿ ಇದ್ದಂಗೆ, ಕುಮಾರಸ್ವಾಮಿ ಬೇಕಿದ್ದರೇ ಚರ್ಚೆಗೆ ಬರಲಿ. ನಾನು ಚರ್ಚೆಗೆ ಸಿದ್ಧ ಎಂಬುದಾಗಿ ವಾಗ್ದಾಳಿ ನಡೆಸಿದರು.

ಮುಂದುವರೆದು ಮಾತನಾಡಿದಂತ ಅವರು, 2004ರಲ್ಲಿ ಕುಮಾರಸ್ವಾಮಿ ಆದಾಯ ನಿಲ್. 2008ರಲ್ಲಿ 360 ಕೋಟಿ ರೂಪಾಯಿ ಆದಾಯ ತೋರಿಸಿದ್ದಾರೆ. ಇಷ್ಟೊಂದು ಆದಾಯ ಅವರಿಗೆ ಎಲ್ಲಿಂದ ಬಂತು.? ಎಂದು ಪ್ರಶ್ನಿಸಿದ ಅವರು, ನಿಮ್ಮ ಹಾಗೆ ನಾನು ಬಿಬಿಎಂಪಿಯಲ್ಲಿ ಸ್ಕೂಟರ್ ಇಟ್ಟುಕೊಂಡು ಕಸ ಗುಡಿಸ್ತಾ ಇರಲಿಲ್ಲ. ನನ್ನ ತಾತನ ಜಮಾನದಿಂದ ಬಸ್ ಇದೆ. ನನ್ನ ತಂಟೆಗೆ ಬಂದ್ರೇ.. ನಿಮ್ಮ ಎಲ್ಲಾ ಪುರಾಣ ಬಿಚ್ಚಿಡುತ್ತೇನೆ ಎಂಬುದಾಗಿ ಮಾಜಿ ಸಿಎಂ ಕುಮಾರಸ್ವಾಮಿಗೆ ಶಾಸಕ ಜಮೀರ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.


SHARE THIS

Author:

0 التعليقات: