ಕಾಂಗ್ರೆಸ್ ಪಕ್ಷವು ಬಿಜೆಪಿಯ ವಿರುದ್ಧ ಹೋರಾಡಬಲ್ಲ ಏಕೈಕ ಪಕ್ಷ: ಕನ್ಹಯ್ಯ ಕುಮಾರ್
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ಬಿಜೆಪಿಯ ವಿರುದ್ಧ ಹೋರಾಡಬಲ್ಲ ಏಕೈಕ ಪಕ್ಷ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಹೇಳಿದ್ದಾರೆ.
"ಕಾಂಗ್ರೆಸ್ ಚಂದ್ರನಂತಿದೆ. ಅದು ಕೆಲವೊಮ್ಮೆ ಬೆಳೆಯುತ್ತಿರುವಂತೆ ತೋರುತ್ತದೆ. ಆದರೆ ಅದು ಆಗುವುದಿಲ್ಲ. ಆದರೂ, ಬಿಜೆಪಿ ವಿರುದ್ಧ ಹೋರಾಡಲು ಇದು ಒಂದೇ ಆಯ್ಕೆಯಾಗಿದೆ" ಎಂದು ಅವರು ಹೇಳಿದರು.
ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮಂಗಳವಾರ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.
ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು ಮತ್ತು ಜಿ 23 ಕುರಿತು ಮಾತನಾಡುತ್ತಾ, "ಒಂದು ಕುಟುಂಬದಲ್ಲಿ ಯಾವಾಗಲೂ ಕೆಲವು ಸಮಸ್ಯೆಗಳು ಅಥವಾ ದೂರುಗಳು ಇರುತ್ತವೆ ... ಆದರೆ ಒಂದು ಕಡೆ ಬಿಜೆಪಿ ಇದ್ದರೆ, ಇನ್ನೊಂದು ಕಡೆ ಕಾಂಗ್ರೆಸ್ ಇದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತಿನ್ ಗಡ್ಕರಿ ನಡುವಿನ ಭಿನ್ನಾಭಿಪ್ರಾಯವನ್ನು ಏಕೆ ಕಡೆಗಣಿಸಲಾಗಿದೆ'' ಎಂದರು.
2024 ರ ಚುನಾವಣೆಯ ಬಗ್ಗೆಯೂ ಮಾತನಾಡಿದ ಕುಮಾರ್ ಅವರು, "ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವಾಗಿ ಮಮತಾ ಬ್ಯಾನರ್ಜಿ ಅಥವಾ ರಾಹುಲ್ ಗಾಂಧಿಯನ್ನು ತಮ್ಮ ನಾಯಕನನ್ನಾಗಿ ಮಾಡಬೇಕೆ ಎಂದು ಜನರು ನಿರ್ಧರಿಸುತ್ತಾರೆ" ಎಂದು ಅವರು ಹೇಳಿದರು.
0 التعليقات: