Friday, 22 October 2021

ಏರ್ ಸ್ಟ್ರೈಕ್ ನಲ್ಲಿ ಅಲ್ ಖೈದಾ ನಾಯಕನ ಹತ್ಯೆ, ಅಮೆರಿಕ ಭರ್ಜರಿ ಬೇಟೆ


ಏರ್ ಸ್ಟ್ರೈಕ್ ನಲ್ಲಿ ಅಲ್ ಖೈದಾ ನಾಯಕನ ಹತ್ಯೆ, ಅಮೆರಿಕ ಭರ್ಜರಿ ಬೇಟೆ

ವಾಯುವ್ಯ ಸಿರಿಯಾದಲ್ಲಿ ಯುಎಸ್ ಮಿಲಿಟರಿ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕ ಸಾವನ್ನಪ್ಪಿದ್ದಾನೆ. ಸೆಂಟ್ರಲ್ ಕಮಾಂಡ್ ವಕ್ತಾರ ಮೇಜರ್ ಜಾನ್ ರಿಗ್ಸ್ಬೀ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮೃತ ಅಲ್ ಖೈದಾ ನಾಯಕನನ್ನು ಅಬ್ದುಲ್ ಹಮೀದ್ ಅಲ್ ಮತಾರ್ನ್ ಎಂದು ಗುರುತಿಸಲಾಗಿದೆ. MQ-9 ವಿಮಾನವನ್ನು ಬಳಸಿ ನಡೆಸಿದ ದಾಳಿಯ ಪರಿಣಾಮವಾಗಿ ಆಗಿರುವ ನಾಗರಿಕ ಸಾವುನೋವುಗಳ ವರದಿ ಬಂದಿಲ್ಲ ಎಂದು ತಿಳಿಸಿದ್ದಾರೆ.

ವಾಯವ್ಯ ಸಿರಿಯಾದಲ್ಲಿ US ವೈಮಾನಿಕ ದಾಳಿಯಲ್ಲಿ ಅಲ್ ಖೈದಾ ನಾಯಕ ಅಬ್ದುಲ್ ಹಮೀದ್ ಅಲ್ ಮತಾರ್ನ್ ನನ್ನು ಕೊಂದು ಹಾಕಲಾಗಿದೆ.

ಅಲ್-ಖೈದಾ ಪುನರ್ನಿರ್ಮಾಣ ಮಾಡಲು, ಬಾಹ್ಯ ಅಂಗಸಂಸ್ಥೆಗಳೊಂದಿಗೆ ಕಾರ್ಯಾಚರಣೆಗಳನ್ನು ಯೋಜಿಸಲು ಸುರಕ್ಷಿತ ತಾಣವಾಗಿ ಸಿರಿಯಾವನ್ನು ಬಳಸುತ್ತದೆ. ಸಿರಿಯಾ, ಇರಾಕ್ ನಲ್ಲಿ ಅಲ್-ಖೈದಾ ಪ್ರಾಬಲ್ಯಕ್ಕೆ ಯತ್ನಿಸಿದ್ದು, ಅಮೆರಿಕದ ನಾಗರಿಕರು, ಪಾಲುದಾರರು ಮತ್ತು ಮುಗ್ಧ ನಾಗರಿಕರನ್ನು ಬೆದರಿಸುವ ಜಾಗತಿಕ ದಾಳಿಗಳನ್ನು ನಡೆಸಲು ಭಯೋತ್ಪಾದಕ ಸಂಘಟನೆ ಮುಂದಾಗಿದೆ.

ಅಮೆರಿಕಕ್ಕೆ ಹಾನಿ ಮಾಡುವ ಉದ್ದೇಶ ಹೊಂದಿರುವ ಅಲ್-ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಸದಸ್ಯರನ್ನು ಸದೆಬಡಿಯುವ ಕಾರ್ಯಾಚರಣೆಯನ್ನು ಯುಎಸ್ ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.


SHARE THIS

Author:

0 التعليقات: